ಮತದಾನ ಮಾಡದೇ ಇದ್ದರೆ ಪ್ರಶ್ನೆ ಮಾಡುವ ಹಕ್ಕು ಇರಲ್ಲ : ಸುಮಲತಾ ಅಂಬರೀಶ್

Public TV
1 Min Read
sumalatha

ಸಂಸದೆ ಹಾಗೂ ನಟಿ ಸುಮಲತಾ ಅಂಬರೀಶ್ (Sumalata) ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕು ದೊಡ್ಡರಸಿಕೆರೆ ಗ್ರಾಮದ ಮತದಾನ (Election) ಕೇಂದ್ರದಲ್ಲಿ ಮತ (Voting) ಚಲಾಯಿಸಿದರು. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಮತದಾನ ನಮ್ಮೆಲ್ಲರ ಹಕ್ಕು ಮತ್ತು ಕರ್ತವ್ಯ ಕೂಡ. ಹಾಗಾಗಿ ತಪ್ಪದೇ ಎಲ್ಲರೂ ಮತದಾನ ಮಾಡಿ. ಯಾರು ವೋಟು ಹಾಕುವುದಿಲ್ಲವೋ ಅವರು ಪ್ರಶ್ನೆ ಮಾಡುವ ಹಕ್ಕನ್ನೇ ಕಳೆದುಕೊಳ್ಳುತ್ತಾರೆ’ ಎಂದು ಮಾತನಾಡಿದರು.

Dolly Dhananjay 2

ಕುಟುಂಬ ಸಮೇತ ಸಾಮಾನ್ಯರಂತೆ ಮತದಾನ ಕೇಂದ್ರಕ್ಕೆ ಬಂದ ಡಾಲಿ ಧನಂಜಯ್ ಮತದಾನ ಮಾಡಿದ್ದಾರೆ. ಸಹೋದರಿ, ಸಹೋದರ ಸೇರಿದಂತೆ ಕುಟುಂಬದ ಸದಸ್ಯರೊಂದಿಗೆ ಅರಸಿಕೆರೆ ತಾಲ್ಲೂಕು ಕಾಳೇನಹಳ್ಳಿ ಮತದಾನ ಕೇಂದ್ರಕ್ಕೆ ಆಗಮಸಿದ್ದ ಧನಂಜಯ್, ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದಾರೆ.

Dolly Dhananjay 1

ಬಿಳಿ ಶರ್ಟ್ ಹಾಗೂ ಲುಂಗಿ ಧರಿಸಿದ್ದ ಧನಂಜಯ್, ತಾವು ಕಲಿತಿದ್ದ ಶಾಲೆಯಲ್ಲೇ ಮತದಾನ ಮಾಡಿ ಸಂಭ್ರಮಿಸಿದ್ದರು. ಅದೇ ಸಮಯದಲ್ಲಿ ಆಗಮಿಸಿದ್ದ ಅಭಿಮಾನಿಗಳ ಜೊತೆ ಸೆಲ್ಫಿಗೆ ಸಹಕರಿಸಿದರು. ನೆಚ್ಚಿನ ನಟನ ಜೊತೆ ಅನೇಕರು ಫೋಟೋ ತಗೆಸಿಕೊಂಡು ಖುಷಿ ಪಟ್ಟರು. ಮತದಾನ ಎಷ್ಟು ಶ್ರೇಷ್ಠ ಎನ್ನುವ ಕುರಿತು ಡಾಲಿ ಮಾತನಾಡಿದರು. ಇದನ್ನೂ ಓದಿ:ಹೈದರಾಬಾದ್‌ನಲ್ಲಿ ಐಷಾರಾಮಿ ಮನೆ ಖರೀದಿಸಿದ ನಟಿ ಸಮಂತಾ

Rishabh Shetty 2

ಡಿವೈನ್ ಸ್ಟಾರ್, ನಟ ರಿಷಬ್ ಶೆಟ್ಟಿ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಮಾಡಿದ್ದಾರೆ. ಉಡುಪಿ ಜಿಲ್ಲೆ, ಬೈಂದೂರು ತಾಲೂಕಿನ ಕೆರಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವೈಟ್ ಅಂಡ್ ವೈಟ್ ಡ್ರೆಸ್ ನಲ್ಲಿ ಬಂದಿದ್ದ ರಿಷಬ್ ಶೆಟ್ಟಿ ಮತದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ.

Share This Article