ವಾಷಿಂಗ್ಟನ್: ಶನಿವಾರ ಅಮೆರಿಕದ (America) ಡಲ್ಲಾಸ್‌ನಲ್ಲಿ (Dallas) ಶಾಪಿಂಗ್ ಮಾಲ್ (Mall) ಒಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಭಾರತ ಮೂಲದ ಎಂಜಿನಿಯರ್ ಸೇರಿ 9 ಜನ ಸಾವನ್ನಪ್ಪಿದ್ದಾರೆ.
ಡಲ್ಲಾಸ್‌ನಲ್ಲಿರುವ ಖಾಸಗಿ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿರುವ ಯುವತಿ ಐಶ್ವರ್ಯ ತಾಟಿಕೊಂಡ (Aishwarya Thatikonda) ಮಾಲ್‌ನಲ್ಲಿ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಅವರು ಹೈದರಾಬಾದ್‌ನ ಸರೂರ್‌ನಗರದ ನಿವಾಸಿಯಾಗಿದ್ದರು. ತಾಟಿಕೊಂಡ ತಮ್ಮ ಸ್ನೇಹಿತರೊಂದಿಗೆ ಶಾಪಿಂಗ್‌ಗಾಗಿ ಮಾಲ್‌ಗೆ ತೆರಳಿದ್ದಾಗ ಬಂದೂಕುಧಾರಿಯೊಬ್ಬ ಗುಂಡು ಹಾರಿಸಿದ್ದಾನೆ. ಆತನನ್ನು ಬಳಿಕ ಪೊಲೀಸರು ಗುಂಡಿಕ್ಕಿ ಕೊಂಡಿದ್ದಾರೆ.
ವರದಿಗಳ ಪ್ರಕಾರ ಗುಂಡಿನ ದಾಳಿ ನಡೆಸಿದ್ದ ಆರೋಪಿಯನ್ನು ಮಾರಿಸಿಯೋ ಗಾರ್ಸಿಯಾ ಎಂದು ಗುರುತಿಸಲಾಗಿದೆ. ಆತ ದಾಳಿ ನಡೆಸಿದ್ದ ವೇಳೆ ಮಾಲ್‌ನಲ್ಲಿ ನಿಯೋಜನೆಗೊಂಡಿದ್ದ ಪೊಲೀಸ್ ಅಧಿಕಾರಿಯೊಬ್ಬರು ಗುಂಡಿನ ಸದ್ದು ಕೇಳಿ ಅಲ್ಲಿಗೆ ಧಾವಿಸಿದ್ದರು. ಬಳಿಕ ಹಂತಕನನ್ನು ಗುಂಡಿಕ್ಕಿ ಕೊಂದಿದ್ದಾರೆ. ಇದನ್ನೂ ಓದಿ: ಕೊಡಗು-ಕೇರಳ ಗಡಿಯಲ್ಲಿ ನಕ್ಸಲ್ ನಿಗ್ರಹ ಪಡೆಯ ಪೊಲೀಸರು ಕೂಂಬಿಂಗ್
ಗುಂಡಿನ ದಾಳಿಯಲ್ಲಿ ಐಶ್ವರ್ಯ ತಾಟಿಕೊಂಡ ಸೇರಿದಂತೆ 9 ಜನ ಸಾವನ್ನಪ್ಪಿದ್ದಾರೆ. ಆಕೆಯ ಸ್ನೇಹಿತರಿಗೆ ತೀವ್ರವಾದ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಟಿಕೊಂಡ ಮೃತದೇಹವನ್ನು ಭಾರತಕ್ಕೆ ತರಿಸಲು ಆಕೆಯ ಕುಟುಂಬಸ್ಥರು ಯೋಜನೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ರಾಜಸ್ಥಾನದಲ್ಲಿ ಬೃಹತ್ ಲಿಥಿಯಂ ನಿಕ್ಷೇಪ ಪತ್ತೆ – ಇದಕ್ಕಿದೆ ಭಾರತದ 80% ಬೇಡಿಕೆ ಪೂರೈಸುವ ಸಾಮರ್ಥ್ಯ