ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar) ಕಾಂಗ್ರೆಸ್ (Congress) ಪರ ಪ್ರಚಾರ ಮಾಡಿದ್ದಕ್ಕೆ ಬಿಗ್ ಬಾಸ್ (Bigg Boss) ಪ್ರಶಾಂತ್ ಸಂಬರ್ಗಿ (Prashanth Sambargi) ಶಿವಣ್ಣಗೆ ಟೀಕೆ ಮಾಡಿದ್ದರು. ಸಂಬರ್ಗಿ ಅವರ ಈ ನಡೆಯನ್ನ ಶಿವಣ್ಣ ಫ್ಯಾನ್ಸ್ ಖಂಡಿಸಿದ್ದರು. ಈಗ ಶಿವಣ್ಣ ಅಭಿಮಾನಿಗಳ ಕಡೆಯಿಂದ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸಂಬರ್ಗಿ, ತಾವು ಆಡಿದ ಮಾತನ್ನ ಹಿಂಪಡೆದಿದ್ದಾರೆ. ಈ ಕುರಿತು ಪೋಸ್ಟ್ ಕೂಡ ಮಾಡಿದ್ದಾರೆ. ಇದನ್ನೂ ಓದಿ:ಹೆಣ್ಣು ಹೆತ್ತ ಪೋಷಕರಿಗೆ The Kerala Story ಚಿತ್ರ ನೋಡುವಂತೆ ಕಲ್ಲಡ್ಕ ಪ್ರಭಾಕರ್ ಸಲಹೆ
ಶಿವಣ್ಣ ಕಥೆ ಕೇಳಲ್ಲ, ಅವರಿಗೆ ಹಣ ಮುಖ್ಯ, ಹಾಗೆಯೇ ಅಭ್ಯರ್ಥಿ ಗೆಲ್ಲಲಿ ಬಿಡಲಿ ಅವರಿಗೆ ದುಡ್ಡು ಬಂದರೆ ಆಯ್ತು ಎಂದು ಸಂಬರ್ಗಿ ಶಿವಣ್ಣ ವಿರುದ್ಧ ಕಿಡಿಕಾರಿದ್ದರು. ಬಳಿಕ ಶಿವಣ್ಣ ಕೂಡ ರಿಯಾಕ್ಟ್ ಮಾಡಿದ್ದರು. ನಾನು ಇಲ್ಲಿ ಮನಸ್ಸಿನ ಮಾತು ಕೇಳಿ ಬಂದಿದ್ದೇನೆ. ಅವರು ಆ ರೀತಿ ಮಾತನಾಡೋದು ಸರಿಯಲ್ಲ ಎಂದಿದ್ದರು. ಅವರ ಮಾತು ಹಿಂಪಡೆಯಲಿ ಎಂದಿದ್ದರು.
ಅಷ್ಟಕ್ಕೆ ಸುಮ್ಮನಾಗದ ಸಂಬರ್ಗಿ, ಭಜರಂಗಿ ಹೆಸರಿನಲ್ಲಿ ನಟಿಸಿ, ಬಜರಂಗದಳದ ನಿಷೇಧದ ಬಗ್ಗೆ ನಿಮ್ಮ ನಡೆಯೇನು ಎಂದು ಇದರ ಜೊತೆ ಹಲವು ಪ್ರಶ್ನೆಗಳನ್ನ ಶಿವಣ್ಣ ಮುಂದೆ ಇಟ್ಟಿದ್ದರು. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಸಂಬರ್ಗಿ ನಡೆಯನ್ನ ಖಂಡಿಸಿ, ಶಿವಣ್ಣಗೆ ಕ್ಷಮೆ ಕೇಳಲೇಬೇಕು ಎಂದು ಪಟ್ಟು ಹಿಡಿದಿದ್ದರು. ಹಾಗಾಗಿ ಸಂಬರ್ಗಿ ತಾವು ಆಡಿದ ಮಾತನ್ನ ಹಿಂಪಡೆದಿದ್ದಾರೆ.
ಶಿವಣ್ಣ ಮತ್ತೆ ಇನೊಬ್ಬ ನಮ್ಮ ಆಪ್ತ ಮಿತ್ರ ನೊಂದಿಗೆ ಇದೀಗ ತಾನೇ ಮಾತನಾಡಿದೆ. ಶಿವಣ್ಣ ಅವರಿಗೆ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಸ್ನೇಹಿತರನ್ನು ಹೊಂದಿದ್ದಾರೆ. ಶಿವಣ್ಣ ಅವರ ತಂದೆಯ ಬಯಕೆಯಂತೆ ಅವರು ರಾಜಕೀಯದಿಂದ ದೂರವಾಗಿದ್ದರೆ. ನಾನು ಅವರ ಬಗ್ಗೆ ಬರೆದಿರುವ ನನ್ನ ಪೋಸ್ಟ್ ಅನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇನೆ ಮತ್ತು ಶಿವಣ್ಣ ಮತ್ತು ಅವರ ಅಭಿಮಾನಿಗಳಿಗೆ ಕರ್ನಾಟಕದಾದ್ಯಂತ ನೋಯಿಸಬಾರದು ಎಂದು ನಾನು ಬಯಸುತ್ತೇನೆ ಎಂದು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಆದರೆ ಎಲ್ಲಿಯೂ ಶಿವಣ್ಣಗೆ ಕ್ಷಮೆ ಕೇಳಿಲ್ಲ. ಈ ಬಗ್ಗೆ ಫ್ಯಾನ್ಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.