ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಕತ್ರಿನಾ ದಂಪತಿ? ನಟಿ ಸ್ಪಷ್ಟನೆ

Public TV
1 Min Read
KATRINA

ಬಾಲಿವುಡ್ (Bollywood) ಸ್ಟಾರ್ ನಟಿ ಕತ್ರಿನಾ ಕೈಫ್- ವಿಕ್ಕಿ ಕೌಶಲ್ (Vikcy Kaushal) ಮದುವೆಯಾಗಿ ಒಂದೂವರೆ ವರ್ಷಗಳು ಕಳೆದಿದೆ. ಪದೇ ಪದೇ ಕತ್ರಿನಾ (Katrina Kaif)  ಪ್ರೆಗೆನ್ಸಿ ಬಗ್ಗೆ ಸುದ್ದಿಯಾಗುತ್ತಲೇ ಇರುತ್ತದೆ. ಈ ಬಗ್ಗೆ ನಟಿ ಕತ್ರಿನಾ ಕೈಫ್ ಪ್ರತಿಕ್ರಿಯೆ ನೀಡಿದ್ದಾರೆ. ಮಗು ಮಾಡಿಕೊಳ್ಳುವ ಬಗ್ಗೆ ಕತ್ರಿನಾ ಸ್ಪಷ್ಟನೆ ನೀಡಿದ್ದಾರೆ.

KATRINA

ಸ್ಟಾರ್ ಜೋಡಿಗಳಲ್ಲಿ ಒಂದಾಗಿರುವ ನಟ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಮದುವೆಯ ಬಳಿಕ ಕತ್ರಿನಾ ಗರ್ಭಿಣಿ ಎನ್ನುವ ಸುದ್ದಿ ಅನೇಕ ಬಾರಿ ವೈರಲ್ ಆಗಿದೆ. ಇತ್ತೀಚಿನ ದಿನಗಳಲ್ಲಿ ಕತ್ರಿನಾ ಎಲ್ಲೂ ಹೆಚ್ಚಾಗಿ ಕೇಣಿಸಿಕೊಳ್ಳುತ್ತಿಲ್ಲ. ಬಿಟೌನ್‌ನ ನಟಿ ಕಾರ್ಯಕ್ರಮಗಳಿಗೂ ಗೈರಾಗಿದ್ದಾರೆ. ಹಾಗಾಗಿ ಅಭಿಮಾನಿಗಳು ಕತ್ರಿನಾ ಪ್ರೆಗ್ನೆಂಟ್ ಎಂದು ಊಹಿಸಿದ್ದಾರೆ. ಕತ್ರಿನಾ ಮತ್ತು ವಿಕ್ಕಿ ದಂಪತಿ ಮೊದಲ ಮಗುವಿನ (Child)  ನಿರೀಕ್ಷೆಯಲ್ಲಿದ್ದಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

katrina kaif and vicky kaushal 3

ನಟಿ ಕತ್ರಿನಾ ಸದ್ಯ ‘ಜೀ ಲೇ ಜರಾ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಬಳಿಕ ಕತ್ರಿನಾ ಕೈಫ್ ಮಗುವಿನ ಬಗ್ಗೆ ಪ್ಲಾನ್ ಮಾಡಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕತ್ರಿನಾ ತನ್ನ ಫ್ರೆಂಡ್ ಬಳಿ ಹೇಳಿದ್ದಾರೆ ಎನ್ನಲಾಗಿದೆ. ಸಿನಿಮಾ ಶೂಟಿಂಗ್ ಮುಗಿಸಿದ ನಂತರ ಪ್ಲ್ಯಾನ್ ಮಾಡುತ್ತೇನೆ. ಸದ್ಯ ವಿಜಯ್ ಸೇತುಪತಿ ಮತ್ತು ಫರ್ಹಾನ್ ಅಖ್ತರ್ ಜೊತೆ ಸಿನಿಮಾ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ಈ ಮೂಲಕ ಸದ್ಯದಕ್ಕೆ ಮಗು ಮಾಡಿಕೊಳ್ಳುವ ಪ್ಲ್ಯಾನ್ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ:ಪತ್ನಿಯ ನಿರೀಕ್ಷೆ-‌ ವಾಸ್ತವದ ಬಗ್ಗೆ ಕಾಲೆಳೆದ ರಾಕಿಂಗ್‌ ಸ್ಟಾರ್ ಯಶ್

katrina kaif 2 1

ಕತ್ರಿನಾ ಸದ್ಯ ಫರ್ಹಾನ್ ಅಖ್ತಾರ್ ಜೊತೆ ‘ಜೀ ಲೇ ಜರಾ’ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ (Priyanka Chopra) , ಆಲಿಯಾ ಭಟ್ (Alia Bhatt) ಕೂಡ ನಟಿಸುತ್ತಿದ್ದಾರೆ. ಸದ್ಯ ಕತ್ರಿನಾ ಸಿನಿಮಾ ಪ್ರಾಜೆಕ್ಟ್‌ಗಳತ್ತ ಗಮನ ಹರಿಸುತ್ತಿದ್ದಾರೆ.

Share This Article