2 ದಿನವೂ ಕಮಾಲ್ – ಕರ್ನಾಟಕದಲ್ಲಿ ದಾಖಲೆ ಬರೆದ ಮೋದಿ ರೋಡ್ ಶೋ

Public TV
3 Min Read
narendra modi 2

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) 2ನೇ ದಿನವೂ ಮೋದಿ ವರ್ಚಸ್ಸು ಜೋರಾಗಿತ್ತು. ನ್ಯೂ ತಿಪ್ಪಸಂದ್ರದಿಂದ ಪ್ರಾರಂಭವಾಗಿದ್ದ ಶಾಂತಿನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ರೋಡ್ ಶೋ (Road Show) ಅಂತ್ಯಗೊಂಡಿದ್ದು, ಜನರಿಂದ ಅದ್ಬುತ ಪ್ರತಿಕ್ರಿಯೆ ಬಂದಿದ್ದು ಕರ್ನಾಟಕದಲ್ಲಿ ದಾಖಲೆ ಬರೆದಿದೆ.

ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೆನೂ ಕೆಲವೇ ದಿನಗಳು ಬಾಕಿಯಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭರ್ಜರಿ ಕಮಾಲ್ ಮಾಡಿದ್ದಾರೆ. ಮೊದಲ ಬಾರಿಗೆ ಕನ್ನಡನಾಡಿನಲ್ಲಿ ಪ್ರಧಾನಿಯೊಬ್ಬರು 2 ದಿನಗಳ ಕಾಲ ಅತಿದೊಡ್ಡ ರೋಡ್ ಶೋ ಮಾಡಿ ದಾಖಲೆ ಬರೆದಿದ್ದಾರೆ. ಸತತ 2 ದಿನಗಳ ಕಾಲ ನಡೆಸಿದ ರೋಡ್ ಶೋನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದೇ ಯಶಸ್ವಿಯಾಗಿ ಸಂಪನ್ನಗೊಂಡಿದೆ.

narendra modi road show

ಇಂದು 6 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 6.5 ಕಿ.ಮೀ ದೂರದವರೆಗೆ ಸುಮಾರು ಒಂದೂವರೆ ಗಂಟೆಗಳ ಕಾಲ ರೋಡ್ ಶೋ ನಡೆದಿದೆ. ಮಹಾದೇವಪುರ, ಕೆ.ಆರ್ ಪುರಂ, ಸಿವಿ ರಾಮನ್ ನಗರ, ಸರ್ವಜ್ಞ ನಗರ, ಶಿವಾಜಿನಗರ, ಶಾಂತಿನಗರ ಕ್ಷೇತ್ರಗಳಲ್ಲಿ ರೋಡ್ ಶೋ ಸಾಗುತ್ತಿದೆ. ತಿಪ್ಪಸಂದ್ರ ಬಳಿ ಕೆಂಪೇಗೌಡ ಪ್ರತಿಮೆಗೆ ಪುಷ್ಪ ಹಾಕಿ ಮೋದಿ ರೋಡ್ ಶೋ ಆರಂಭಿಸಿದ್ದರು.

narendra modi road show 1

ತೆರೆದ ವಾಹನದಲ್ಲಿ ಮೋದಿ ಅಬ್ಬರದ ರೋಡ್ ಶೋ ನಡೆದಿದ್ದು, ಸಹಸ್ರಾರು ಜನರತ್ತ ಮೋದಿ ಕೈಬೀಸಿ ನೆರೆದಿದ್ದವರನ್ನು ಹುರಿದುಂಬಿಸಿದರು. ಮೋದಿಯನ್ನು ಸ್ವಾಗತಿಸಲು ಜಿಟಿ ಜಿಟಿ ಮಳೆಯಲ್ಲೂ ಹೆಚ್ಚಿನ ಜನರು ಸಂಭ್ರಮದಿಂದ ಸೇರಿದ್ದರು. ರಸ್ತೆಯುದ್ದಕ್ಕೂ ಕೇಸರಿ ಬಾವುಟ ಹಾರಾಟವಿದ್ದು, ಸಾವಿರಾರು ಜನರು ಸೇರಿ ಮೋದಿಯನ್ನು ನೋಡಿ ಸಂತಸಪಟ್ಟರು. ಚಿಕ್ಕ ಮಕ್ಕಳಿಂದ ವೃದ್ಧರವರೆಗೂ ಮೋದಿಯನ್ನು ವೀಕ್ಷಿಸಲು ನೆರೆದಿದ್ದರು. ಈ ವೇಳೆ ರಾಜ್ಯದ ಜನರಿಗೆ ಮೋದಿ ಶಿರಬಾಗಿ ನಮಸ್ಕರಿಸಿದರು.

ಮೋದಿ ರೋಡ್ ಶೋಗೆ ಕಲಾತಂಡಗಳು ಮೆರುಗು ತಂದುಕೊಟ್ಟರು. ಬಿಜೆಪಿ (BJP) ಕಾರ್ಯಕರ್ತರಲ್ಲಿ ಉತ್ಸಾಹ ಮುಗಿಲು ಮುಟ್ಟಿತ್ತು. ಹೂಮಳೆ ಸುರಿಸಿ ಸಂಭ್ರಮಿಸಿದರು. ಈ ವೇಳೆ ಜನರೆಡೆಗೆ ಮೋದಿ ಅವರು ಹೂ ಎಸೆದು ನಗೆ ಬೀರಿದರು. ಮೋದಿ ಮೋದಿ ಜೈಕಾರ ಘೋಷಣೆ ಜೋರಾಗಿತ್ತು. ಭಾನುವಾರವೂ ಮೋದಿ ರೋಡ್ ಶೋ ವೇಳೆ ಬಿಜೆಪಿ ಧ್ವಜದ ಜೊತೆಗೆ ಬಜರಂಗ ದಳದ ಬಾವುಟವು ಕಂಡು ಬಂತು.

narendra modi road show 3

ರಾಜ್ಯದಲ್ಲಿ ದಾಖಲೆ: ಪ್ರಧಾನಿ ಮೋದಿ ಮೂರು ಹಂತದಲ್ಲಿ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ರೋಡ್ ಶೋ ನಡೆಸಿದ್ದಾರೆ. ಏಪ್ರಿಲ್ 29 ರಂದು ಮಾಗಡಿ ನೈಸ್ ರಸ್ತೆಯಿಂದ ಸುಮನಹಳ್ಳಿಯವರೆಗೆ 4.5 ಕಿ.ಮೀ, ಮೇ 06 ರಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಕೋಣಕುಂಟೆಯಿಂದ ಮಲ್ಲೇಶ್ವರದವರೆಗೆ 27 ಕಿ.ಮೀ. ಇಂದು 6.5 ಕಿ.ಮೀ ಒಟ್ಟು ಸುಮಾರು 38 ಕಿ.ಮೀ ರೋಡ್ ಶೋ ನಡೆಸಿದ್ದಾರೆ.

ಕರ್ನಾಟಕದ ಮಟ್ಟಿಗೆ ಇದು ರಾಷ್ಟ್ರೀಯ ನಾಯಕರೊಬ್ಬರು ನಡೆಸಿದ ಅತಿದೊಡ್ಡ ರೋಡ್ ಶೋ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಗುಜರಾತ್ ವಿಧಾನಸಭಾ ಚುನಾವಣೆ ವೇಳೆ 50ಕಿ.ಮೀ ಉದ್ದದ ರೋಡ್ ಶೋ ನಡೆಸಿದ್ದರು. ಅದಾದ ಬಳಿಕ ಅವರು ನಡೆಸಿದ 2ನೇ ಅತಿದೊಡ್ಡ ರೋಡ್ ಶೋ ಇದಾಗಿದೆ. ಇದನ್ನೂ ಓದಿ: ಸಂಸ್ಕೃತ ಪರೀಕ್ಷೆಯಲ್ಲಿ ಇರ್ಫಾನ್‌ಗೆ ಮೊದಲ ಸ್ಥಾನ – 13,000 ವಿದ್ಯಾರ್ಥಿಗಳನ್ನು ಹಿಂದಿಕ್ಕಿ ಸಾಧನೆ

narendra modi road show 2

ಇಲ್ಲಿಯವರೆಗೆ ಚುನಾವಣಾ ಪ್ರಚಾರ ಸಭೆಗಳಲ್ಲಿ ಲಕ್ಷಕ್ಕೂ ಅಧಿಕ ಸಂಖ್ಯೆ ಜನರು ಭಾಗಿಯಾಗುತ್ತಿದ್ದರು. ಆದರೆ ಗುಜರಾತ್ ಚುನಾವಣೆಯಲ್ಲಿ ರೋಡ್ ಶೋ ಬಿಜೆಪಿಗೆ ಭರ್ಜರಿ ಲಾಭವವನ್ನು ತಂದುಕೊಟ್ಟಿತ್ತು. ವಿಶೇಷವಾಗಿ ನಗರಗಳಲ್ಲಿ ಬಿಜೆಪಿ ಪರ ಒಲವು ಜಾಸ್ತಿ ಇರುವ ಹಿನ್ನೆಲೆಯಲ್ಲಿ ಬಿಜೆಪಿ ಬೆಂಗಳೂರಿನಲ್ಲಿ ಮೋದಿ ರೋಡ್ ಶೋ ಆಯೋಜಿಸಿತ್ತು. ಇದನ್ನೂ ಓದಿ: ಕೈ ಅಭ್ಯರ್ಥಿಗೆ ಚುನಾವಣಾ ಅಧಿಕಾರಿಗಳಿಂದ ಶಾಕ್ – ಕೆಎಂ ಉದಯ್ ಬೆಂಬಲಿಗರ ಮನೆಯಲ್ಲಿ 2 ಕೋಟಿ ಹಣ ಪತ್ತೆ

Share This Article