ಭಾರತ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಖಲಿಸ್ತಾನಿ ಕಮಾಂಡೋ ಹತ್ಯೆ

Public TV
1 Min Read
KALISTHAN Commando

ಇಸ್ಲಾಮಾಬಾದ್: ಖಲಿಸ್ತಾನ್ ಸಂಘಟನೆಯ ಕಮಾಂಡೋ ಫೋರ್ಸ್ (Khalistan Commando Force) ಮುಖ್ಯಸ್ಥ ಪರಮ್‍ಜಿತ್ ಸಿಂಗ್ ಪಂಜ್ವಾರ್ ಅಕಾ ಮಲಿಕ್ ಸರ್ದಾರ್ ಸಿಂಗ್‍ನನ್ನು ಶನಿವಾರ ಪಾಕಿಸ್ತಾನದ (Pakistan) ಲಾಹೋರ್‌ನ (Lahore) ಜೋಹರ್ ಟೌನ್‍ನಲ್ಲಿ ಇಬ್ಬರು ಅಪರಿಚಿತರು ಗುಂಡು ಹಾರಿಸಿ ಕೊಂದಿದ್ದಾರೆ.

ಜೋಹರ್ ಟೌನ್‍ನಲ್ಲಿರುವ ಸೂರ್ಯಕಾಂತಿ ಸೊಸೈಟಿಯಲ್ಲಿರುವ ಅವರ ನಿವಾಸದ ಬಳಿ ಮುಂಜಾನೆ ಬೈಕಿನಲ್ಲಿ ಆಗಮಿಸಿದ ಇಬ್ಬರು ಅಪರಿಚಿತ ವ್ಯಕ್ತಿಗಳು ಸಿಂಗ್ ಹಾಗೂ ಅವರ ಅಂಗರಕ್ಷಕನ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಪರಮ್‍ಜಿತ್ ಗುಂಡೇಟಿನಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಗಾಯಗೊಂಡಿರುವ ಅಂಗರಕ್ಷಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹಾಡಹಗಲೇ ಗುಂಡೇಟು – ಮಹಾನಗರ ಪಾಲಿಕೆಯ ಸದಸ್ಯೆಯ ಪತಿಯ ಬರ್ಬರ ಹತ್ಯೆ

KALISTHAN Commando 1

ಭಾರತದ ಪಂಜಾಬ್‍ಗೆ (Punjab) ಡ್ರೋನ್‍ಗಳನ್ನು ಬಳಸಿಕೊಂಡು ಮಾದಕವಸ್ತು ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆಯಲ್ಲಿ ತೊಡಗಿದ್ದ ಪರಮ್‍ಜಿತ್, ತರನ್ ಬಳಿಯ ಪಂಜ್ವಾರ್ ಕುಗ್ರಾಮದಲ್ಲಿ ಜನಿಸಿದ್ದ. 1986 ರಲ್ಲಿ ಅವನ ಸೋದರ ಸಂಬಂಧಿ ಲಾಭ್ ಸಿಂಗ್‍ನಿಂದ ತೀವ್ರಗಾಮಿಯಾದ, ನಂತರ ಕೆಸಿಎಫ್‍ಗೆ (KCF) ಸೇರಿದ್ದ. ಅದಕ್ಕೂ ಮೊದಲು ಸೋಹಾಲ್‍ನ ಕೇಂದ್ರ ಸಹಕಾರಿ ಬ್ಯಾಂಕ್‍ನಲ್ಲಿ ಕೆಲಸ ಮಾಡಿದ್ದ.

1990ರ ದಶಕದಲ್ಲಿ ಭಾರತೀಯ ಭದ್ರತಾ ಪಡೆಗಳಿಂದ (Indian security forces) ಲಾಭ್ ಸಿಂಗ್ ಹತ್ಯೆಯ ನಂತರ, ಪಂಜ್ವಾರ್ ಕೆಸಿಎಫ್‍ನ ಕಮಾಂಡೋ ಸ್ಥಾನ ವಹಿಸಿಕೊಂಡಿದ್ದ. ನಂತರ ಪಾಕಿಸ್ತಾನಕ್ಕೆ ಪಲಾಯನ ಮಾಡಿ, ಪಾಕಿಸ್ತಾನದ ಮೋಸ್ಟ್ ವಾಂಟೆಡ್ ಭಯೋತ್ಪಾದಕರ (Wanted Terrorists) ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ. ಗಡಿಯಾಚೆಗಿನ ಶಸ್ತ್ರಾಸ್ತ್ರ ಕಳ್ಳಸಾಗಣೆ ಮತ್ತು ಹೆರಾಯಿನ್ ಕಳ್ಳಸಾಗಣೆ ಮೂಲಕ ಹಣಕಾಸು ಪಡೆಯುವ ಮೂಲಕ ಕೆಸಿಎಫ್‍ನನ್ನು ಅಸ್ತಿತ್ವದಲ್ಲಿ ಇಟ್ಟುಕೊಂಡಿದ್ದ.

1999ರ ಜೂ. 30 ರಂದು ಚಂಡೀಗಢದ (Chandigarh) ಪಾಸ್‌ಪೋರ್ಟ್ ಕಚೇರಿ ಬಳಿ ನಡೆದ ಬಾಂಬ್ ಸ್ಫೋಟ ನಡೆಸಿದ್ದ. ಈ ಸ್ಫೋಟದಲ್ಲಿ 4 ಮಂದಿ ಗಾಯಗೊಂಡಿದ್ದು, ಹಲವು ವಾಹನಗಳಿಗೂ ಹಾನಿಯಾಗಿತ್ತು. ಇದನ್ನೂ ಓದಿ: ಕ್ರಿಕೆಟಿಗ ನಿತೀಶ್ ರಾಣಾ ಪತ್ನಿಗೆ ಕಿರುಕುಳ – ಓರ್ವ ಅರೆಸ್ಟ್

Share This Article