ಡಿಕೆಶಿ ಹೆಲಿಕಾಪ್ಟರ್ ಲ್ಯಾಂಡ್ ಆಗಿದ್ದ ರಾಮತೀರ್ಥ ಹೆಲಿಪ್ಯಾಡ್‌ನಲ್ಲಿ ಬೆಂಕಿ

Public TV
1 Min Read
DK Shivakumar 1

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ರಾಮತೀರ್ಥ ಬಳಿಯ ಹೆಲಿಪಾಡ್‌ಗೆ (Honnavar Helipad) ಮೈಸೂರಿನಿಂದ ಡಿ.ಕೆ ಶಿವಕುಮಾರ್ (‌DK Shivakumar) ಆಗಮಿಸುತಿದ್ದಂತೆ ಹೆಲಿಕಾಪ್ಟರ್‌ಗೆ (Helicopter) ಸಿಗ್ನಲ್ ಕೊಡುವ ಸ್ಮೋಕ್ ಕ್ಯಾಂಡಲ್‌ನಿಂದ ಹೆಲಿಪ್ಯಾಡ್ ನಲ್ಲಿದ್ದ ಹುಲ್ಲಿಗೆ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ.

Helicopter 2

ಗುರುವಾರ ಹೊನ್ನಾವರದ ಸೆಂಟ್ ಥಾಮಸ್ ಸಭಾಂಗಣದ ಆವರಣದಲ್ಲಿ ಅಭ್ಯರ್ಥಿಗಳ ಪರ ಮತ ಪ್ರಚಾರ ಸಭೆ ಆಯೋಜಿಸಲಾಗಿತ್ತು. ಈ ಸಭೆಗೆ ಡಿಕೆಶಿ ಮೈಸೂರಿನಿಂದ ಹೊನ್ನಾವರಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ್ದರು. ಡಿಕೆಶಿ ಆಗಮಿಸುತ್ತಿದ್ದಂತೆ ಹೆಲಿಕಾಪ್ಟರ್‌ಗೆ ಸಿಗ್ನಲ್ ಕೊಡುವ ಸ್ಮೋಕ್ ಕ್ಯಾಂಡಲ್‌ನಿಂದ (Smoke Candle) ಹೆಲಿಪ್ಯಾಡ್ ನಲ್ಲಿದ್ದ ಹುಲ್ಲಿಗೆ ಬೆಂಕಿ ಹೊತ್ತಿಕೊಂಡಿತು. ತಕ್ಷಣ ಸ್ಥಳದಲ್ಲಿದ್ದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

Helicopter

ಬೆಂಕಿ ಯಾಕೆ ಹೊತ್ತಿಕೊಳ್ಳುತ್ತೆ?
ಹೆಲಿಕಾಪ್ಟರ್‌ನಲ್ಲಿ ಮೇಲಿನಿಂದ ನೋಡಿದಾಗ ಎಲ್ಲವೂ ಬಯಲಿನಂತೆ ಕಾಣುತ್ತದೆ. ಈ ಕಾರಣಕ್ಕೆ ಲ್ಯಾಂಡಿಂಗ್ ಮಾರ್ಕ್‌ನಲ್ಲೇ ಹೆಲಿಕಾಪ್ಟರ್ ಲ್ಯಾಂಡ್ ಆಗಲು ಸ್ಮೋಕ್ ಕ್ಯಾಂಡಲ್ ಬಿಡಲಾಗುತ್ತದೆ. ದಟ್ಟವಾದ ಹೊಗೆ ಬಂದ ಜಾಗದಲ್ಲಿ ಹೆಲಿಪ್ಯಾಡ್ ಇದೆ ಎಂದು ತಿಳಿದು ಪೈಲಟ್ ಹೆಲಿಕಾಪ್ಟರ್ ಅನ್ನು ಲ್ಯಾಂಡ್ ಮಾಡುತ್ತಾರೆ.

ಈ ಕಾರಣಕ್ಕೆ ಲ್ಯಾಂಡ್ ಆಗುವ ಜಾಗದ ಸಮೀಪ ಹುಲ್ಲುಗಳನ್ನು ತೆಗೆದು ಸ್ವಚ್ಛ ಮಾಡಬೇಕಾಗುತ್ತದೆ. ಲ್ಯಾಂಡ್ ಆಗುವ ಸಮಯದಲ್ಲಿ ಹೆಲಿಕಾಪ್ಟರ್ ರೆಕ್ಕೆಯಿಂದ ಗಾಳಿ ವೇಗವಾಗಿ ಬೀಸುವ ಕಾರಣ ಬೆಂಕಿ ಇತರ ಕಡೆ ಹರಡುತ್ತದೆ. ಈ ವೇಳೆ ಹುಲ್ಲಿದ್ದರೆ ಬೆಂಕಿ ತಗುಲುತ್ತದೆ.

ಕಳೆದ ಎರಡು ದಿನಗಳ ಹಿಂದೆಯಷ್ಟೇ ಜಕ್ಕೂರಿನಿಂದ ಹೆಲಿಕಾಪ್ಟರ್ ಟೇಕಾಫ್ ಆಗಿ ಹೊಸಕೋಟೆ ಬಳಿ ಹೋಗುತ್ತಿದ್ದಾಗ ಹದ್ದೊಂದು ಡಿಕ್ಕಿ ಹೊಡೆದಿತ್ತು. ಹದ್ದು ಡಿಕ್ಕಿ ಹೊಡೆದ ರಭಸಕ್ಕೆ ಹೆಲಿಕಾಪ್ಟರ್ ಮುಂದಿನ ಗಾಜು ಪುಡಿ ಪುಡಿಯಾಗಿತ್ತು. ಕೂಡಲೇ ಎಚ್ಚೆತ್ತ ಪೈಲಟ್ ಹೆಚ್‌ಎಎಲ್‌ನಲ್ಲಿ ಹೆಲಿಕಾಪ್ಟರ್ ಅನ್ನು ತುರ್ತು ಭೂಸ್ಪರ್ಶ ಮಾಡುವಲ್ಲಿ ಯಶಸ್ವಿಯಾಗಿದ್ದರು.

Share This Article