ಜೊತೆಯಾಗಿ IPL ಮ್ಯಾಚ್ ವೀಕ್ಷಿಸಿದ ನಟಿ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ

Public TV
1 Min Read
parineeti chopra

ಬಾಲಿವುಡ್ (Bollywood) ನಟಿ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ (Raghav Chadha) ಇದೇ ಮೇ 13ಕ್ಕೆ ಎಂಗೇಜ್‌ಮೆಂಟ್ ನಿಗದಿಯಾಗಿದೆ. ಈ ಸುದ್ದಿ ಬೆನ್ನಲ್ಲೇ ಒಟ್ಟಾಗಿ ಐಪಿಎಲ್ ಮ್ಯಾಚ್‌ನ ಪರಿಣಿತಿ-ರಾಘವ್ ವೀಕ್ಷಿಸಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

View this post on Instagram

 

A post shared by Viral Bhayani (@viralbhayani)

ಪರಿಣಿತಿ- ರಾಘವ್ ಚಡ್ಡಾ ಜೋಡಿ ಹಲವು ದಿಣಗಳಿಂದ ಸುದ್ದಿಯಲ್ಲಿದ್ದಾರೆ. ಇಬ್ಬರೂ ಅನೇಕ ಕಡೆಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ತಿದ್ದಾರೆ. ಆದರೆ ತಮ್ಮ ಸಂಬಂಧದ ಬಗ್ಗೆ ಅಧಿಕೃತವಾಗಿ ಎಲ್ಲೂ ತುಟಿಕ್ ಪಿಟಿಕ್ ಎನ್ನುತ್ತಿಲ್ಲ. ಇದೀಗ ಮೇ 13ಕ್ಕೆ ಎಂಗೇಜ್‌ಮೆಂಟ್ ನಿಗದಿಯಾಗಿದೆ. ಈ ಶುಭಸುದ್ದಿ ಬೆನ್ನಲ್ಲೇ ಮತ್ತೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.

ಮೊಹಾಲಿಯಲ್ಲಿ ಬುಧವಾರ(ಮೇ 3)ರಂದು ಪಂಜಾಬ್ ಕಿಂಗ್ಸ್-ಮುಂಬೈ ಇಂಡಿಯನ್ಸ್ ಮಧ್ಯೆ ಪಂದ್ಯ ನಡೆದಿದೆ. IPL ಮ್ಯಾಚ್ ನೋಡಲು ಪರಿಣಿತಿ-ರಾಘವ್ ಆಗಮಿಸಿದ್ದರು. ಮ್ಯಾಚ್ ನೋಡುತ್ತಾ ಚಿಲ್ ಮಾಡಿದ್ದಾರೆ. ಇಬ್ಬರೂ ಕಪ್ಪು ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡರು. ಇದೀಗ ಈ ಕುರಿತ ಫೋಟೋ ಸಖತ್ ಸದ್ದು ಮಾಡ್ತಿದೆ. ಇದನ್ನೂ ಓದಿ:‘ದಿ ಕೇರಳ ಸ್ಟೋರಿ’ ನಿಷೇಧಕ್ಕೆ ಹೆಚ್ಚಿದ ಒತ್ತಡ: ನಾಳೆ ಸಿನಿಮಾ ರಿಲೀಸ್

ಮ್ಯಾಚ್ ನೋಡಲು ಬಂದ ಪ್ರೇಕ್ಷಕರು ಕೂಡ ಪರಿಣಿತಿ (Parineeti Chopra) ಜೋಡಿ ನೋಡಿ ಕೂಗಿದ್ದಾರೆ. ಈ ಮೂಲಕ ತಮ್ಮ ಅಭಿಮಾನವನ್ನ ವ್ಯಕ್ತಪಡಿಸಿದ್ದಾರೆ.

Share This Article