ಪಾಲಕ್ ಜೊತೆ ಕಿಸ್ ಮಾಡುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಇಬ್ರಾಹಿಂ ಅಲಿ ಖಾನ್

Public TV
1 Min Read
palak tiwari

ಚಿತ್ರರಂಗ ಅಂದ ಮೇಲೆ ಇಲ್ಲಿ ಡೇಟಿಂಗ್, ಲವ್, ರೊಮ್ಯಾನ್ಸ್, ಬ್ರೇಕಪ್ ಎಲ್ಲವೂ ಕಾಮನ್ ಆಗಿಬಿಟ್ಟಿದೆ. ಸಾಕಷ್ಟು ದಿನಗಳಿಂದ ಪಾಲಕ್ ತಿವಾರಿ- ಇಬ್ರಾಹಿಂ ಅಲಿ ಖಾನ್ ಡೇಟಿಂಗ್ ಸುದ್ದಿ ಇತ್ತು. ಇಬ್ಬರೂ ನಮ್ಮ ನಡುವೆ ಏನಿಲ್ಲ ಎಂದು ಸ್ಪಷ್ಟನೆ ನೀಡುತ್ತಲೇ ಬಂದಿದ್ದರು. ಇದೀಗ ಪಾಲಕ್ ತಿವಾರಿಗೆ(Palak Tiwari)  ಕಿಸ್ ಮಾಡುವಾಗ ಫ್ಯಾನ್ಸ್ ಕೈಗೆ ರೆಡ್ ಹ್ಯಾಂಡ್ ಆಗಿ ಸೈಫ್ ಅಲಿ ಖಾನ್ (Saif Ali Khan) ಪುತ್ರ ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ:ನಟಿ ಮೇಘನಾ ರಾಜ್ ಹುಟ್ಟು ಹಬ್ಬಕ್ಕೆ ತತ್ಸಮ ತದ್ಭವ ಪೋಸ್ಟರ್ ರಿಲೀಸ್

palak tiwari 1

ಸಲ್ಮಾನ್ ಖಾನ್ (Salman Khan) ನಟನೆಯ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ (Kisi Ka Bhai Kisi Ki Jaan) ಚಿತ್ರದ ಮೂಲಕ ಬಾಲಿವುಡ್‌ಗೆ ಶ್ವೇತಾ ತಿವಾರಿ (Shwetha Tiwari) ಪುತ್ರಿ ಪಾಲಕ್ ಎಂಟ್ರಿ ಕೊಟ್ಟರು. ಸಿನಿಮಾ ಕಲೆಕ್ಷನ್‌ನಲ್ಲಿ ಸೋತಿದ್ರು ಕೂಡ ಪಾಲಕ್ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಸಿನಿಮಾದ ಸಂದರ್ಶನವೊಂದರಲ್ಲಿ ಇಬ್ರಾಹಿಂ ಜೊತೆಗಿನ ಡೇಟಿಂಗ್ ಸುದ್ದಿ ಬಗ್ಗೆ ಪ್ರಶ್ನೆ ಕೇಳಿದಾಗ, ತಾನೂ ಯಾರ ಜೊತೆನೂ ಡೇಟ್ ಮಾಡುತ್ತಿಲ್ಲ. ನನ್ನ ಕೆರಿಯರ್ ಕಡೆಗೆ ನಾನು ಗಮನ ವಹಿಸುತ್ತಿದ್ದೇನೆ ಎಂದು ನಟಿ ಹೇಳಿದ್ದರು.

palak tiwari 2

ಇದೀಗ ಪಾಲಕ್‌ಗೆ ಕಿಸ್ ಮಾಡುವಾಗ ಇಬ್ರಾಹಿಂ ಅಲಿ ಖಾನ್ ಫ್ಯಾನ್ಸ್ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ. ಇತ್ತೀಚೆಗೆ ಪಾಲಕ್ ತಿವಾರಿ ವಿಮಾನ ನಿಲ್ದಾಣದಲ್ಲಿ ಏಕಾಂಗಿಯಾಗಿ ಕಾಣಿಸಿಕೊಂಡರು, ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈ ವಿಡಿಯೋದ ಕಾಮೆಂಟ್ ವಿಭಾಗದಲ್ಲಿ, ಮುಂಬೈನ ‘ವರ್ಲಿ ಕ್ಲಬ್ ಸ್ಲಿಂಕ್ & ಬಾರ್’ ನಲ್ಲಿ ಪಾಲಕ್ ತಿವಾರಿ ಮತ್ತು ಇಬ್ರಾಹಿಂ ಅಲಿ ಖಾನ್ (Ibrahim Ali Khan) ಸ್ವಲ್ಪ ಸಮಯದ ಹಿಂದೆ ತುಟಿಗಳಿಗೆ ಚುಂಬಿಸುವುದನ್ನು ನೋಡಿದ್ದೇವೆ ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ.

ಇದೀಗ ನಾವಿಬ್ಬರೂ ಜಸ್ಟ್ ಫ್ರೆಂಡ್ಸ್ ಎಂದು ಪಾಲಕ್ ಹೇಳಿದ್ದ ಹೇಳಿಕೆ ಇದೀಗ ಸದ್ದು ಮಾಡ್ತಿದೆ. ಪಾಲಕ್-ಇಬ್ರಾಹಿಂ ಲಿಪ್‌ಲಾಕ್ ವಿಚಾರಕ್ಕೆ ಗೇಲಿ ಮಾಡ್ತಿದ್ದಾರೆ. ಈ ವಿಚಾರ ಅದೆಷ್ಟರ ಮಟ್ಟಿಗೆ ನಿಜಾ ಎಂಬುದನ್ನ ಕಾದುನೋಡಬೇಕಿದೆ.

Share This Article