ಅಪಘಾತಕ್ಕೀಡಾಗಿದ್ದ ಬೀದಿ ನಾಯಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ ಶೈನ್ ಶೆಟ್ಟಿ

Public TV
2 Min Read
shine shetty

ಸ್ಯಾಂಡಲ್‌ವುಡ್ (Sandalwood) ನಟ- ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ (Shine Shetty) ಮತ್ತೆ ಸುದ್ದಿಯಲ್ಲಿದ್ದಾರೆ. ಅಪರಿಚಿತ ವಾಹನ ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡು ರಸ್ತೆ ಮಧ್ಯೆ ನರಳಾಡುತ್ತಿದ್ದ ಬೀದಿ ನಾಯಿಗೆ ‘ಬಿಗ್ ಬಾಸ್’ (Bigg Boss Kannada) ಶೈನ್ ಶೆಟ್ಟಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಅಪಘಾತವಾದ ಜಾಗಕ್ಕೆ ಬಿಟ್ಟು ಹೋಗಿರುವ ಘಟನೆ ನಡೆದಿದೆ. ಬೀದಿ ನಾಯಿಯ ಸಂಕಷ್ಟಕ್ಕೆ ಶೈನ್‌ ಶೆಟ್ಟಿ ನೆರವಾಗಿದ್ದಾರೆ.

SHINE SHETTY

ಬಿಗ್ ಬಾಸ್ ಶೋ, ‘ಕಾಂತಾರ’ (Kantara) ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಶೈನ್ ಶೆಟ್ಟಿ ಕುಟುಂಬ ಸಮೇತ ರ‍್ಮಸ್ಥಳಕ್ಕೆ ಹೋಗುತ್ತಿದ್ದರು. ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪ ಅಪರಿಚಿತ ವಾಹನವೊಂದು ಬೀದಿ ನಾಯಿಗೆ ಡಿಕ್ಕಿಯೊಡೆದು ಹೋಗಿದ್ದರು. ಬೀದಿ ನಾಯಿಯ ಕಾಲು, ಕುತ್ತಿಗೆ ಹಾಗೂ ದೇಹಕ್ಕೆ ತೀವ್ರ ಗಾಯವಾಗಿ ರಕ್ತಸ್ರಾವದಿಂದ ರಸ್ತೆ ಬಿದ್ದು ನರಳಾಡುತ್ತಿತ್ತು. ಆಗ ಅದೇ ಮರ‍್ಗದಲ್ಲಿ ರ‍್ಮಸ್ಥಳ ಹೋಗುತ್ತಿದ್ದ ಶೈನ್ ಶೆಟ್ಟಿ ಬೀದಿನಾಯಿಯನ್ನ ಬಣಕಲ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಆ ನಾಯಿ ಎಲ್ಲಿ ಅಪಘಾತಕ್ಕೀಡಾಗಿ ಬಿದ್ದಿತ್ತೋ ಅಲ್ಲಿಗೆ ಬಿಟ್ಟಿದ್ದಾರೆ. ಇದನ್ನೂ ಓದಿ:Met Gala ಕಾರ್ಯಕ್ರಮದಲ್ಲಿ 204 ಕೋಟಿ ಮೌಲ್ಯದ ಡೈಮಂಡ್ ನೆಕ್ಲೇಸ್ ಧರಿಸಿ ಬಂದ ಪ್ರಿಯಾಂಕಾ

shine

ನಾಯಿಯನ್ನ (Dog) ಆಸ್ಪತ್ರೆಗೆ ಕರೆದೊಯ್ಯುವ ಮುನ್ನ ಸ್ಥಳಿಯರ ಬಳಿ ನಂಬರ್ ತೆಗೆದುಕೊಂಡು ಬಣಕಲ್ ಪಶು ಆಸ್ಪತ್ರೆಯ ವೈದ್ಯ ಅಜೀಜ್ ಅಹಮದ್ ಅವರಿಗೆ ಕರೆ ಮಾಡಿದ್ದಾರೆ. ಕೂಡಲೇ ಕೆಲಸ ನಿಮಿತ್ತ ಹಳ್ಳಿಗೆ ಹೋಗಿದ್ದ ಅಜೀಜ್ ಅಹಮದ್ ಕೂಡ ಬಂದಿದ್ದಾರೆ. ಬಂದ ತಕ್ಷಣ ನಾಯಿಗೆ ಚಿಕಿತ್ಸೆ ನೀಡಿ ಅದು ಎಲ್ಲಿ ಬಿದ್ದಿತ್ತೋ ಅಲ್ಲಿಗೆ ಬಿಟ್ಟು ಹೋಗಿದ್ದಾರೆ. ಬಳಿಕ ಎಲ್ಲಾ ವಾಹನ ಸವಾರರಿಗೆ ಮನವಿ ಮಾಡಿದ್ದಾರೆ. ವಾಹನಗಳನ್ನ ಓಡಿಸುವಾಗ ನೋಡಿಕೊಂಡು ಓಡಿಸಿ. ಅಚಾನಕ್ಕಾಗಿ ಅಡ್ಡ ಬಂದರೆ ಏನೂ ಮಾಡಲು ಆಗಲ್ಲ. ಆದರೆ, ನೋಡಿ ವಾಹನ ಚಾಲನೆ ಮಾಡಿ. ಒಂದು ವೇಳೆ ಅಪಘಾತವಾಯಿತು ಎಂದರೆ ಕೂಡಲೇ ಕೆಳಗಡೆ ಇಳಿದು ಪ್ರಾಣಿಯ ಪರಿಸ್ಥಿತಿ ನೋಡಿ. ಚಿಕಿತ್ಸೆ ಕೊಡಿಸಿದರೆ ಬದುಕುತ್ತೆ ಎಂದರೆ ಚಿಕಿತ್ಸೆ ಕೊಡಿಸಿ. ಒಂದು ಜೀವ ಉಳಿಯುತ್ತದೆ ಎಂದು ವಾಹನ ಸವಾರರಲ್ಲಿ ಮನವಿ ಮಾಡಿದ್ದಾರೆ. ಇದೀಗ ಶೈನ್ ಶೆಟ್ಟಿ ಮಾನವೀಯ ನಡೆಗೆ ಅಭಿಮಾನಿಗಳಿಂದ ಶ್ಲಾಘನೆ ವ್ಯಕ್ತವಾಗಿದೆ.

Share This Article