ಐಸ್ ಥೆರಪಿಗೆ ಒಳಗಾದ ಸಮಂತಾ: ಮಯೋಸೈಟೀಸ್ ನಿಂದ ಬಳಲುತ್ತಿರುವ ನಟಿ

Public TV
1 Min Read
samantha

ತೆಲುಗಿನ ಹೆಸರಾಂತ ನಟಿ ಸಮಂತಾ (Samantha) ಮಯೋಸೈಟೀಸ್ (Myositis) ಕಾಯಿಲೆಯಿಂದ ಬಳಲುತ್ತಿದ್ದಾರೆ. ಅದಕ್ಕಾಗಿ ಅವರು ಅನೇಕ ರೀತಿಯ ಚಿಕಿತ್ಸೆಯನ್ನೂ ಪಡೆಯುತ್ತಿದ್ದಾರೆ. ಇದೀಗ ಮತ್ತೊಂದು ಥೆರಪಿಗೆ ಒಳಗಾಗಿರುವ ಸಮಂತಾ ಆ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೊಂದು ಯಾತನೆ ಥೆರಪಿ ಎಂದು ಅವರು ಬರೆದುಕೊಂಡಿದ್ದಾರೆ. ಅಲ್ಲದೇ, ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ಕುರಿತು ತಿಳಿಸಿದ್ದಾರೆ.

samantha 3

ಕೆಲ ವರ್ಷಗಳಿಂದ ಅವರು ಮಯೋಸೈಟೀಸ್ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದು, ಅದರ ಭಾಗವಾಗಿ ಈಗ ಐಸ್ ಥೆರಪಿ (Ice Bath Therapy) ಮಾಡಿಸಿಕೊಂಡಿದ್ದಾರೆ. ಈ ಐಸ್ ಬಾತ್ ಥೆರಪಿಯು ಚಿತ್ರಹಿಂಸೆಯಿಂದ ಕೂಡಿರುವಂಥದ್ದು. ಆದರೂ, ಅನಿವಾರ್ಯ ಎಂದು ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಹಿಂಸೆ ಅನಿಸಿದರೂ ದೇಹಕ್ಕೆ ಚೈತನ್ಯವನ್ನು ನೀಡುವಂಥದ್ದು ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಹೆಣ್ಮಕ್ಕಳ ಬಟ್ಟೆಯ ಬಗ್ಗೆ ಸಲ್ಮಾನ್‌ ಮಾತು ವ್ಯಂಗ್ಯವಾಗಿ ಕಾಣುತ್ತಿದೆ- ಚೇತನ್‌ ಸಿಡಿಮಿಡಿ

samantha 1 1

ದೇಹಕ್ಕೆ ಚೈತನ್ಯ ಬರುವುದಕ್ಕಾಗಿ ಕನಿಷ್ಠ 15 ನಿಮಿಷಗಳ ಕಾಲ ಐಸ್ ಬಾತ್ ಥೆರಪಿಗೆ ಒಳಗಾಗಬೇಕಂತೆ. ಇದರಿಂದಾಗಿ ಸಾಕಷ್ಟು ಪ್ರಯೋಜನೆಗಳು ಇವೆ ಎನ್ನುತ್ತದೆ ವೈದ್ಯಲೋಕ. ಸದ್ಯ ಸಮಂತಾ ಸಿಟಾಡೆಲ್ (Citadel) ಹಿಂದಿ ವೆಬ್ ಸರಣಿಯಲ್ಲಿ ನಟಿಸುತ್ತಿದ್ದು, ಅದೊಂದು ಸಾಹಸಮ ಸರಣಿಯಾಗಿದೆ. ಸಮಂತಾ ನಾಯಕಿಯಾಗಿ ನಟಿಸುತ್ತಿದ್ದರೆ, ವರುಣ್ ಧವನ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

Share This Article