ತಂದೆ-ಮಗ ಆಯ್ತು, ಇದೀಗ ಅವರ ಮಗ: ರಾಮನಗರದಲ್ಲಿ ಸುಮಲತಾ ವಾಗ್ದಾಳಿ

Public TV
2 Min Read
MANDYA SUMALATHA INVITE 3

ರಾಮನಗರ: 4 ತಲೆಮಾರಿನಿಂದ ಒಂದೇ ಕುಟುಂಬಕ್ಕೆ ಅವಕಾಶ ಕೊಟ್ಟಿದ್ದೀರಾ. ತಂದೆ ಆಯ್ತು, ಮಗ ಆಯ್ತು ಇದೀಗ ಅವರ ಮಗ ಎಂದು ದೇವೇಗೌಡರ (H.D.Deve Gowda) ಕುಟುಂಬ ರಾಜಕಾರಣದ ಬಗ್ಗೆ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ವಾಗ್ದಾಳಿ ನಡೆಸಿದರು.

ಬಿಜೆಪಿ (BJP) ಬೂತ್ ಮಟ್ಟದ ಕಾರ್ತಕರ್ತರ ಸಭೆಯಲ್ಲಿ ಮಾತನಾಡಿದ ಸುಮಲತಾ ಅವರು, ಅಂಬರೀಶ್ ಅವರ ರಾಜಕೀಯ ಜೀವನ ಪ್ರಾರಂಭವಾಗಿದ್ದೇ ರಾಮನಗರದಿಂದ (Ramanagara). ರಾಮನಗರಕ್ಕೂ ನಮ್ಮ ಕುಟುಂಬಕ್ಕೂ ಸವಿಯಾದ ಸಂಬಂಧ ಇದೆ. ಬಿಜೆಪಿಯಲ್ಲಿ ಮಹಿಳೆಗೆ ಗೌರವ ಕೊಡುತ್ತಾರೆ. ಮಂಡ್ಯದಲ್ಲಿ ನನ್ನ ವಿರುದ್ಧ ಸ್ಪರ್ಧೆ ಮಾಡಿದವರೇ ಇಲ್ಲಿ ಸ್ಪರ್ಧೆ ಮಾಡಿದ್ದಾರೆ. ನಾನು ಒಂದು ಕುಟುಂಬದ ವಿರುದ್ಧ ಸ್ಪರ್ಧೆ ಮಾಡಿದ್ದೇ ಅವರ ದೃಷ್ಟಿಯಲ್ಲಿ ದೊಡ್ಡ ತಪ್ಪಾಯಿತು. ಹೆಣ್ಣು ಎಂಬ ಗೌರವ ಇಲ್ಲದೆ, ಮಾತುಗಳನ್ನಾಡಿದರು ಎಂದು ಜೆಡಿಎಸ್ ವಿರುದ್ಧ ಟೀಕಾಪ್ರಹಾರ ನಡೆಸಿದರು. ಇದನ್ನೂ ಓದಿ: ಅಂಬರೀಶ್ ಅಂತಿಮ ದರ್ಶನ ಪಡೆಯಲು ಬರದಿದ್ದಕ್ಕೆ ರಮ್ಯಾ ಮೊದಲ ಪ್ರತಿಕ್ರಿಯೆ

nikhil kumaraswamy 3

ಚುನಾವಣೆಗೆ ಒಟ್ಟು 150 ಕೋಟಿ ಹಣ ಖರ್ಚು ಮಾಡಿದರು. ಆದರೆ ಮಂಡ್ಯದ ಜನ ನನ್ನ ಪರ ನಿಂತರು. ಭದ್ರಕೋಟೆ, ಜಾತಿ ಏನೆಲ್ಲಾ ತಂದರೂ ಮಂಡ್ಯದ ಜನ ಸ್ವಾಭಿಮಾನ ಮೆರೆದರು. ಅವರು ಆಡಳಿತ ಯಂತ್ರ ದುರ್ಬಳಕೆ ಮಾಡಿಕೊಂಡರು. ನಮ್ಮೂರಿಗೆ ನಮ್ಮೂರವರೇ ಸಾಕು. 4 ತಲೆಮಾರಿನಿಂದ ಒಂದೇ ಕುಟುಂಬಕ್ಕೆ ಅವಕಾಶ ಕೊಟ್ಟಿದ್ದೀರಾ. ತಂದೆ ಆಯ್ತು, ಮಗ ಆಯ್ತು, ಇದೀಗ ಅವರ ಮಗ. ಸಮರ್ಥ ಕಾರ್ಯಕರ್ತರು ಇಲ್ಲದ ಕ್ಷೇತ್ರದಲ್ಲಿ ಮಾತ್ರ ನಮ್ಮ ಕುಟುಂಬದವರು ನಿಲ್ಲಿಸುತ್ತೇನೆ ಎಂದು ಹೇಳುತ್ತಾರೆ. ಇವರಿಗೆ ರಾಮನಗರ, ಮಂಡ್ಯ, ಹಾಸನದಲ್ಲಿ ಒಬ್ಬರೇ ಒಬ್ಬ ಸಮರ್ಥ ಕಾರ್ಯಕರ್ತರನ್ನು ಬೆಳೆಸಲು ಸಾಧ್ಯವಾಗಲಿಲ್ಲವಾ ಎಂದು ಖಾರವಾಗಿ ಪ್ರಶ್ನಿಸಿದರು.

ಅಭಿಮಾನ ಏನೇ ಇರಲಿ. ಒಂದು ಕುಟುಂಬ ಮಾತ್ರ ಅಭಿವೃದ್ಧಿಯಾಗ್ತಿದೆ ಎಂದರೆ ಮನೆ ಮಕ್ಕಳು ಏನಾಗಬೇಕು? ಹಾಸನ ಅಭಿವೃದ್ಧಿ ಮಾಡೋದಕ್ಕೆ ನೀವು ವೋಟ್ ಹಾಕ್ಬೇಕಾ? ಹಾಸನದ ಅಭಿವೃದ್ಧಿಗೆ ಹಾಸನದವರು ವೋಟ್ ಹಾಕಿಕೊಳ್ಳಲಿ. ಮಂಡ್ಯ, ರಾಮನಗರದಲ್ಲಿ ಸ್ಥಳೀಯರನ್ನ ಅಯ್ಕೆ ಮಾಡಿ ಎಂದು ಜನತೆಗೆ ಕರೆ ನೀಡಿದರು. ಇದನ್ನೂ ಓದಿ: ನಾನು ಮಂಡ್ಯದವಳೇ, ಗೌಡ್ತಿ, ನಾನು ಗೌಡ್ತಿ ಎನ್ನುವುದನ್ನು ಯಾರೂ ಕಿತ್ತುಕೊಳ್ಳಲು ಆಗಲ್ಲ: ರಮ್ಯಾ

ಮಾತೆತ್ತಿದರೆ ರೈತರ ಮಕ್ಕಳು ಅಂತಾರೆ. ಯಾವ ರೈತರು ನೂರಾರು ಕೋಟಿ ಆಸ್ತಿ ಮಾಡಿದ್ದಾರೆ. ಡಿಕ್ಲೇರ್ ಮಾಡಿರೋದು ಇಷ್ಟು. ಮಾಡದೇ ಇರೋ ಲೆಕ್ಕ ಬೇರೆ ಇದೆ. ಜನಸಾಮಾನ್ಯರು ಇದನ್ನ ಪ್ರಶ್ನಿಸಬೇಕು. ರಾಮನಗರದಲ್ಲಿ ಎಷ್ಟು ಅಭಿವೃದ್ಧಿಯಾಗಿದೆ. ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು.

ಉಚಿತ ಯೋಜನೆಗಳು ನೀಡಲು ಸಾವಿರಾರು ಕೋಟಿ ರೂ. ಹಣ ಸರ್ಕಾರಿ ಖಜಾನೆಯಲ್ಲಿ ಇದೆಯಾ? ಶಿಕ್ಷಣ ಆರೋಗ್ಯ ನೀಡಲು ಸಮರ್ಪಕ ಯೋಜನೆ ಬೇಕು. ಕೇಂದ್ರದಿಂದ ನಾನು ಕೋಟ್ಯಂತರ ರೂ. ಅನುದಾನ ತಂದಿದ್ದೇನೆ. ಡಬ್ಬಲ್ ಎಂಜಿನ್ ಸರ್ಕಾರ ತನ್ನಿ. ಮಂಡ್ಯದ ಜನರ ರೀತಿ ರಾಮನಗರದಲ್ಲೂ ಸ್ವಾಭಿಮಾನ ಮೆರೆಯಿರಿ ತಿಳಿಸಿದರು. ಇದನ್ನೂ ಓದಿ: ಹಿಂದೆ ರಾಮನನ್ನು ಬಂಧಿಸಿಟ್ಟಿತ್ತು, ಈಗ ಹನುಮಾನ್ ಜನ್ಮಸ್ಥಳದಲ್ಲೇ ಭಜರಂಗಬಲಿಯನ್ನು ಬಂಧಿಸಿಡಲು ಮುಂದಾಗಿದೆ: ಮೋದಿ ಕಿಡಿ

Share This Article