ಕೋಲಾರ: ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶ್ವಾನಕ್ಕೆ (Police Dog) ಕೆಜಿಎಫ್ ಠಾಣೆ ಪೊಲೀಸ್ (KGF Police Station) ಅಧಿಕಾರಿಗಳು ಸನ್ಮಾನಿಸಿ ಅದ್ದೂರಿಯಾಗಿ ಸೋಮವಾರ ಬೀಳ್ಕೊಡಿಗೆ (Farewell) ನೀಡಿದ್ದಾರೆ.
ಕೊನೆಯದಾಗಿ ಭಾನುವಾರ ನಡೆದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ (Narendra Modi) ಕಾರ್ಯಕ್ರಮದಲ್ಲಿ ಏಂಜಲ್ ಭದ್ರತಾ ಕಾರ್ಯನಿರ್ವಹಿಸಿತ್ತು. ಅಲ್ಲದೆ ಹಲವಾರು ಗಣ್ಯ ವ್ಯಕ್ತಿಗಳು ಜಿಲ್ಲೆಗೆ ಭೇಟಿ ನೀಡಿದ್ದಾಗ ಏಂಜಲ್ ಕಾರ್ಯ ನಿರ್ವಹಿಸಿತ್ತು. ಪೊಲೀಸ್ ಇಲಾಖೆಯ ಏಂಜಲ್‍ಗೆ ಈಗ ಕೆಜಿಎಫ್ ಎಸ್ಪಿ ಧರಣಿದೇವಿಯವರು ಅದ್ದೂರಿಯಾಗಿ ಸನ್ಮಾನ ಮಾಡಿ ಬೀಳ್ಕೊಡುಗೆ ನೀಡಿದ್ದಾರೆ. ಇದನ್ನೂ ಓದಿ: ಪಬ್‍ಜಿಗೆ ಬ್ರೇಕ್ ಹಾಕಿದ್ದ ತಾಯಿಯ ಕೊಲೆ – ಅಪ್ರಾಪ್ತ ಆರೋಪಿಗೆ ಜಾಮೀನು
2015ರಲ್ಲಿ ಸೇವೆಗೆ ಸೇರಿದ್ದ ಏಂಜಲ್, ಲ್ಯಾಬ್ರಡರ್ ತಳಿಯ ಹೆಣ್ಣು ಶ್ವಾನ. ಬಾಂಬ್ ಸೇರಿದಂತೆ ಸ್ಫೋಟಕ ಪತ್ತೆಯಲ್ಲಿ ಪರಿಣಿತಿ ಹೊಂದಿತ್ತು. ಕಳೆದ ಎಂಟು ವರ್ಷಗಳ ಕಾಲ ಪೊಲೀಸ್ ಶ್ವಾನದಳದಲ್ಲಿ ಸೇವೆ ಸಲ್ಲಿಸಿತ್ತು.