`ಮೋದಿ ವಿಷ ಸರ್ಪ, ಸೋನಿಯಾ ವಿಷಕನ್ಯೆ’ ಹೇಳಿಕೆ – ಖರ್ಗೆ, ಯತ್ನಾಳ್ ವಿರುದ್ಧ ದೂರು

Public TV
1 Min Read
Mallikarjun Kharge 2

ಬೆಂಗಳೂರು/ಮೈಸೂರು: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia Gandhi) ವಿಷಕನ್ಯೆ ಅಂತಾ ಶಾಸಕ ಬಸನಗೌಡಪಾಟೀಲ್ ಯತ್ನಾಳ್ (Basanagouda Patil Yatnal) ಹೇಳಿಕೆ ವಿಚಾರ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

MODI ROAD SHOW

ಯತ್ನಾಳ್ ಹೇಳಿಕೆ ಖಂಡಿಸಿ ಮೈಸೂರಿನಲ್ಲಿ ದೂರು ದಾಖಲಾಗಿದೆ. ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆಂದು ಮೈಸೂರು ಸಿಟಿ ಪೊಲೀಸ್ ಆಯುಕ್ತರಿಗೆ ಎನ್‌ಎಸ್‌ಯುಐ ದೂರು ನೀಡಿದೆ. ಚುನಾವಣಾ ಅಧಿಕಾರಿಗಳಿಗೂ ದೂರು ನೀಡಿ ಕ್ರಮ ವಹಿಸುವಂತೆ ಮನವಿ ಮಾಡಲಾಗಿದೆ. ಇದನ್ನೂ ಓದಿ: ಮುಂದೇ ನಾನೇ ಜೀನ್ಸ್ ಪಾರ್ಕ್ ಉದ್ಘಾಟಿಸಲು ಬರುತ್ತೇನೆ – ಮಳೆಯಲ್ಲೇ ರಾಹುಲ್ ಗಾಂಧಿ ಭಾಷಣ

ಅಲ್ಲದೇ ಪ್ರಧಾನಿ ಮೋದಿ (Narendra Modi)  ಇಂದಿನಿಂದ (ಏಪ್ರಿಲ್ 29) ರಾಜ್ಯ ಪ್ರವಾಸ ಕೈಗೊಂಡಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) `ವಿಷ ಸರ್ಪ’ ಕಟು ಟೀಕೆಗೆ ಮೋದಿ ಕೌಂಟರ್ ಬಗ್ಗೆ ಕುತೂಹಲ ಮೂಡಿದೆ. ಇದನ್ನೂ ಓದಿ: ರಾಜ್ಯಕ್ಕೆ ಇಂದು ಮೋದಿ ಎಂಟ್ರಿ – ಬೀದರ್, ವಿಜಯಪುರ, ಬೆಳಗಾವಿಯಲ್ಲಿ ಕ್ಯಾಂಪೇನ್

ಖರ್ಗೆಯವರ `ವಿಷ ಸರ್ಪ’ ಆರೋಪಕ್ಕೆ ಮೋದಿ ತಿರುಗೇಟು ಏನಿರಬಹುದೆಂದು ಚರ್ಚೆಯಾಗ್ತಿದೆ. ವಿವಾದ ಸೃಷ್ಟಿಸಿರುವ ಖರ್ಗೆ ಹೇಳಿಕೆಗೆ ಈಗಾಗಲೇ ಬಿಜೆಪಿಯಿಂದ ತೀವ್ರ ಖಂಡನೆ ವ್ಯಕ್ತವಾಗಿದೆ. ಚುನಾವಣಾ ಆಯೋಗಕ್ಕೂ ಖರ್ಗೆ ವಿರುದ್ಧ ಬಿಜೆಪಿ ದೂರು ನೀಡಿದೆ. ಚುನಾವಣೆಗೂ ಮುನ್ನ ರಾಜ್ಯದಲ್ಲಿ ಆರೋಪ ಪ್ರತ್ಯಾರೋಪಗಳಿಗೆ ವೇದಿಕೆಯಾಗಿದೆ. ಖರ್ಗೆ ಹೇಳಿಕೆಯಿಂದ ಕಾಂಗ್ರೆಸ್ ಪಾಳಯದಲ್ಲೂ ತಳಮಳ ಶರುವಾಗಿದೆ. ವಿವಾದ ಹಸಿ ಇರುವಾಗಲೇ ರಾಜ್ಯಕ್ಕೆ ಮೋದಿ ಎಂಟ್ರಿ ಕೊಡುತ್ತಿದ್ದು, ಖರ್ಗೆ ಟೀಕೆಗೆ ಕೌಂಟರ್ ಕೊಡ್ತಾರಾ? ಇದರಿಂದ ಚುನಾವಣಾ ಪಾಲಿಟಿಕ್ಸ್ಗೆ ಮತ್ತಷ್ಟು ಲಾಭವಾಗುತ್ತಾ ಅನ್ನೋ ಪ್ರಶ್ನೆ ಎದ್ದಿದೆ.

Share This Article