ಹಿಜಾಬ್ ಹಾಕಿದವರ ಮೇಲೆ ಅತ್ಯಾಚಾರ ಆಗಲ್ಲ: ವಿವಾದಕ್ಕೀಡಾದ ಮಲಯಾಳಂ ಸಿನಿಮಾ

Public TV
2 Min Read
The Kerala Story 5

ದಿ ಕಾಶ್ಮೀರ್ ಫೈಲ್ಸ್ ನಂತರ ಮಲಯಾಳಂನ ‘ದಿ ಕೇರಳ ಸ್ಟೋರಿ’ (The Kerala Story) ಹೆಚ್ಚು ಸದ್ದು ಮಾಡುತ್ತಿದೆ. ಹಿಂದೂ (Hindu) ಹುಡುಗಿಯೊಬ್ಬಳು ಮುಸ್ಲಿಂ (Muslim) ಧರ್ಮಕ್ಕೆ ಮತಾಂತರಗೊಂಡು ಆಕೆ ಉಗ್ರ ಸಂಘಟನೆಯನ್ನು ಸೇರುವ ಕಥೆಯನ್ನು ಈ ಸಿನಿಮಾ ಹೊಂದಿದೆ ಎಂದು ಹೇಳಲಾಗುತ್ತಿದ್ದು, ನಿನ್ನೆಯಷ್ಟೇ ಬಿಡುಗಡೆಯಾಗಿರುವ ಟ್ರೈಲರ್ ವಿವಾದಕ್ಕೀಡಾಗಿದೆ (Controversy). ಅದರಲ್ಲೂ ಮುಸ್ಲಿಂ ಹುಡುಗಿಯೊಬ್ಬಳು ಹಿಂದೂ ಹುಡುಗಿಯ ಜೊತೆ ಆಡುವ ಮಾತು ಅನೇಕರ ಕೋಪಕ್ಕೆ ಕಾರಣವಾಗಿದೆ.

The Kerala Story 1

ಆಕೆ ಶಾಲಿನಿ ಉನ್ನೀಕೃಷ್ಣ. ಕೇರಳದ ಹಿಂದೂ ಹುಡುಗಿ. ಅಪಾರ ಶಿವನ ಭಕ್ತೆ. ಶಿಕ್ಷಣಕ್ಕಾಗಿ ಹಾಸ್ಟೇಲ್ ಸೇರಿಒಕೊಳ್ಳುತ್ತಾಳೆ. ಅಲ್ಲಿ ಮುಸ್ಲಿಂ ಹುಡುಗಿಯೊಬ್ಬಳ ಪರಿಚಯ. ನಂತರ ಶಾಲಿನಿಗೆ ಸಾರ್ವಜನಿಕವಾಗಿಯೇ ಲೈಂಗಿಕ ಕಿರುಕುಳ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಮುಸ್ಲಿಂ ಹುಡುಗಿಯು ‘ಹಿಜಾಬ್ ಹಾಕಿದವರ ಮೇಲೆ ಅತ್ಯಾಚಾರವಾಗಲ್ಲ, ಯಾಕೆಂದರೆ ಅಲ್ಲಾಹ್ ನಮ್ಮನ್ನು ಕಾಯುತ್ತಿರುತ್ತಾನೆ’ ಎಂದು ಡೈಲಾಗ್ ಹೇಳಿಸಿದ್ದಾರೆ. ಈ ಮಾತೇ ಹಿಂದೂ ಹುಡುಗಿಯ ಮೇಲೆ ಪರಿಣಾಮ ಬೀರಿ, ಮತಾಂತರವಾಗುತ್ತಾಳೆ. ಇಷ್ಟೇ ಅಲ್ಲದೇ, ಮತಾಂತರಗೊಂಡ ಆ ಹುಡುಗಿ ಉಗ್ರ ಸಂಘಟನೆ ಸೇರುತ್ತಾಳೆ.

The Kerala Story 4

ಇಂತಹ ದೃಶ್ಯಗಳನ್ನು ಹೊಂದಿರುವ ಟ್ರೈಲರ್ ನಿನ್ನೆಯಷ್ಟೇ ರಿಲೀಸ್ ಆಗಿದ್ದು, ಭಾರೀ ಸಂಚಲನ ಮೂಡಿಸಿದೆ. ಅಲ್ಲದೇ ಈ ಟ್ರೈಲರ್ ಬಗ್ಗೆ ಪರ ಮತ್ತು ವಿರೋಧದ ಮಾತುಗಳು ಕೇಳಿ ಬರುತ್ತಿವೆ. ನಿನ್ನೆಯಿಂದಲೇ ಸೋಷಿಯಲ್ ಮೀಡಿಯಾದಲ್ಲಿ ‘ದಿ ಕೇರಳ ಸ್ಟೋರಿ’ ಟ್ರೆಂಡಿಂಗ್ ನಲ್ಲಿದ್ದು, ಈ ಸಿನಿಮಾ ಬ್ಯಾನ್ ಮಾಡಬೇಕು ಎನ್ನುವ ಮಾತುಗಳು ಕೂಡ ಕೇಳಿ ಬಂದಿವೆ. ಇದನ್ನೂ ಓದಿ:ಪತಿ ಜೊತೆ ವಿದೇಶಕ್ಕೆ ಹಾರಿದ ‘ಬಿಗ್ ಬಾಸ್’ ಬೆಡಗಿ ಅಕ್ಷತಾ ಕುಕಿ

The Kerala Story 2

ಕೇರಳದಿಂದ ವಿದೇಶಕ್ಕೆ ಉದ್ಯೋಗ ಅರಸಿಕೊಂಡು ಹೋದ ಮಹಿಳೆಯ ಕಥೆಯನ್ನು ಒಳಗೊಂಡಿರುವ ಈ ಸಿನಿಮಾದಲ್ಲಿ ವಿವಾದಿತ (Controversy) ಅಂಶಗಳು ಇವೆ ಎಂದು ವಿರೋಧ ವ್ಯಕ್ತವಾಗಿತ್ತು. ಬುರ್ಖಾ ಧರಿಸಿದ ಪ್ರಧಾನ ಪಾತ್ರಧಾರಿ ‘ನಾನು ಶಾಲಿನಿ, ನರ್ಸ್ ಆಗಿ ಜನಸೇವೆ ಮಾಡಬೇಕು ಅಂತಿದ್ದೆ. ಆದರೆ, ನಾನು ಫಾತಿಮಾ ಆಗಿ ಐಸಿಎಸ್ ಉಗ್ರಸಂಘಟನೆಗೆ ಸೇರಿಕೊಂಡು ಭಯೋತ್ಪಾದಕಿ ಆಗಿದ್ದೇನೆ’ ಈ ರೀತಿಯ ಸಂಭಾಷಣೆ ಇತ್ತು. ಇಂತಹ ಮಾತು ಮತ್ತು ಕಥೆ ವಿವಾದಕ್ಕೀಡಾಗಿತ್ತು.

The Kerala Story 3

ಇದರ ಜೊತೆಗೆ ಕೇರಳದಲ್ಲಿ ಮಹಿಳೆಯನ್ನು ವಿದೇಶಕ್ಕೆ ಕರೆದುಕೊಂಡು ಹೋಗಿ ಭಯೋತ್ಪಾದನೆ ಚಟುವಟಿಕೆಗೆ ಹಚ್ಚುವ ಸಂಘಟನೆಗಳು ಇವೆ ಎಂದು ಸಿನಿಮಾದಲ್ಲಿ ಹೇಳಲಾಗಿದೆ. ಇದರಿಂದಾಗಿ ಕೇರಳಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನವನ್ನು ಸಿನಿಮಾದಲ್ಲಿ ಮಾಡಲಾಗಿದೆ. ಇಂತಹ ಚಿತ್ರಗಳು ಬಿಡುಗಡೆಯಾದರೆ, ದೇಶಕ್ಕೆ ಮತ್ತು ರಾಜ್ಯಕ್ಕೆ ಎಂತಹ ಕೆಟ್ಟ ಹೆಸರು ಬರಬಹುದು ಯೋಚಿಸಿ ಎಂದು ಹಲವು ರಾಜಕೀಯ ಮುಖಂಡರು ಸಿಎಂಗೆ ಬರೆದ ಪತ್ರದಲ್ಲಿ ತಿಳಿಸಿದ್ದರು.

Share This Article