ವಾಷಿಂಗ್ಟನ್: ಇಬ್ಬರು ಮಕ್ಕಳಿಗೆ ಬಲವಂತದಿಂದ ಹಚ್ಚೆ (Tattoo) ಹಾಕಿಸಿ ನಂತರ ಚರ್ಮವನ್ನು ಕಿತ್ತು ಹಾಕುವ ಮೂಲಕ ಹಚ್ಚೆ ಅಳಿಸಲು ಪ್ರಯತ್ನಿಸಿದ ಆರೋಪದಡಿ ದಂಪತಿಯನ್ನು ಬಂಧಿಸಿದ (Arrest) ಘಟನೆ ಅಮೆರಿಕಾದ (America) ಟೆಕ್ಸಾಸ್‌ನಲ್ಲಿ (Texas) ನಡೆದಿದೆ.
ಮೇಗನ್ ಮೇ ಫರ್ (27) ಹಾಗೂ ಗನ್ನರ್ ಫರ್ (23) ಬಂಧಿತ ದಂಪತಿ. ದಂಪತಿ ತಮ್ಮ 9 ಮತ್ತು 5 ವರ್ಷದ ಇಬ್ಬರು ಮಕ್ಕಳನ್ನು ಹಗ್ಗದಿಂದ ಕಟ್ಟಿಹಾಕಿ, ಕಿರುಚದಂತೆ ಬಾಯಿಗೆ ಟೇಪ್ ಹಾಕಿ ಬಲವಂತವಾಗಿ ಹಚ್ಚೆ ಹಾಕಿಸಿದ್ದಾರೆ. ಒಂದು ಮಗುವಿಗೆ ಪಾದದ ಮೇಲೆ ಹಚ್ಚೆ ಹಾಕಿಸಿದರೆ ಇನ್ನೊಂದು ಮಗುವಿಗೆ ಭುಜದ ಮೇಲೆ ಹಾಕಲಾಗಿದೆ. ಇದನ್ನೂ ಓದಿ: 1 ಕೆಜಿ ಗಾಂಜಾ ಕಳ್ಳಸಾಗಣೆ ಆರೋಪ – ಭಾರತ ಮೂಲದ ವ್ಯಕ್ತಿಯನ್ನು ಗಲ್ಲಿಗೇರಿಸಿದ ಸಿಂಗಾಪುರ
ಆ ಮಕ್ಕಳ ನಿಜವಾದ ತಂದೆ ಹಾಗೂ ಮಲತಾಯಿ ಹಚ್ಚೆ ನೋಡಿ ಮಕ್ಕಳ ರಕ್ಷಣಾ ಸೇವೆಗಳಿಗೆ (CPS) ವಿಷಯ ತಿಳಿಸಿದ್ದಾರೆ. ಸಿಪಿಎಸ್ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದ ತಕ್ಷಣ ನಿಜವಾದ ತಾಯಿ ಹಾಗೂ ಆಕೆಯ ಗಂಡ ಎಚ್ಚೆತ್ತುಕೊಂಡು ಬಲವಂತವಾಗಿ ಹಚ್ಚೆಗಳನ್ನು ಅಳಿಸುವ ಪ್ರಯತ್ನ ಮಾಡಿದ್ದಾರೆ. ಈ ಮೂಲಕ ಬಂಧನದಿಂದ ತಪ್ಪಿಸಿಕೊಳ್ಳಬಹುದು ಎಂದುಕೊಂಡಿದ್ದರು. ಇದನ್ನೂ ಓದಿ: ಸುಡಾನ್ ಹಿಂಸಾಚಾರ – ವಿಮಾನ ನಿಲ್ದಾಣಗಳ ಸ್ಥಗಿತ; ಪ್ರಜೆಗಳನ್ನು ಕರೆತರಲು ಭೂಮಾರ್ಗ ಹುಡುಕಾಟದಲ್ಲಿ ಭಾರತ
ಚರ್ಮವನ್ನು ಕಿತ್ತುತೆಗೆದು ಬಳಿಕ ನಿಂಬೆರಸದಿಂದ ಉಜ್ಜುವ ಮೂಲಕ ಹಚ್ಚೆಯನ್ನು ಅಳಿಸಿದ್ದರು ಎನ್ನಲಾಗಿದೆ. ಹಚ್ಚೆ ಹಾಕಿಸಿದ್ದ ನಿರ್ದಿಷ್ಟ ಜಾಗದಲ್ಲಿ ಗಾಯಗಳು ಕಂಡು ಬಂದಿವೆ. ಅಲ್ಲದೇ ಅದೇ ಜಾಗದಿಂದ ಸ್ವಲ್ಪ ಪ್ರಮಾಣದ ಚರ್ಮವನ್ನೂ ಕಿತ್ತು ತೆಗೆದಿರುವುದು ಕಂಡುಬಂದಿದೆ. ಈ ಕುರಿತು ಮಗುವಿಗೆ ಗಾಯ ಹಾಗೂ ಕಾನೂನು ಬಾಹಿರ ಸಂಯಮಗಳ ಆರೋಪದಡಿಯಲ್ಲಿ ದಂಪತಿಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಪಾಕ್‌ನಲ್ಲಿ ಭೀಕರ ಸ್ಫೋಟ – 12 ಮಂದಿ ಪೊಲೀಸರ ದಾರುಣ ಸಾವು, 40ಕ್ಕೂ ಹೆಚ್ಚು ಮಂದಿಗೆ ಗಾಯ
ಇಬ್ಬರು ಮಕ್ಕಳನ್ನು ಸಿಪಿಎಸ್‌ನಲ್ಲಿ ಇರಿಸಲಾಗಿದ್ದು, ತನಿಖೆ ಮುಂದುವರೆದಿದೆ. ಇದನ್ನೂ ಓದಿ: ವಿಮಾನದಲ್ಲಿ ಬಾಟಲಿ ಹಿಡಿದು ಬಡಿದಾಟ; ಫ್ಲೈಟ್ ತುರ್ತು ಭೂಸ್ಪರ್ಶ – ಇಬ್ಬರು ಮಹಿಳೆಯರು ಸೇರಿ ನಾಲ್ವರು ಅರೆಸ್ಟ್