ಶಾರುಖ್‌ ಖಾನ್‌ ನಟನೆಯ ʻಜವಾನ್‌ʼ ಸಿನಿಮಾದ ರಿಲೀಸ್‌ ಡೇಟ್‌ ಫಿಕ್ಸ್‌

Public TV
1 Min Read
sharukh khan

‘ಪಠಾಣ್’ (Pathaan) ಸಿನಿಮಾದ ಸಕ್ಸಸ್ ಅಲೆಯಲ್ಲಿರುವಾಗಲೇ ಶಾರುಖ್ ಖಾನ್ ತಮ್ಮ ಫ್ಯಾನ್ಸ್‌ಗೆ ಗುಡ್ ನ್ಯೂಸ್ ನೀಡಿದ್ದಾರೆ. ಕಳೆದ ಆರೇಳು ವರ್ಷಗಳಿಂದ ಸಿನಿಮಾ ಸಕ್ಸಸ್ ಕಾಣದೇ ಬೆಸತ್ತ ಶಾರುಖ್‌ಗೆ ‘ಪಠಾಣ್’ ಸಿನಿಮಾದಿಂದ ಮರುಜೀವ ಸಿಕ್ಕಿದೆ. ಇದೀಗ ‘ಜವಾನ್’ (Jawan) ಸಿನಿಮಾ ಮೂಲಕ ಮತ್ತೆ ತೆರೆಯ ಮೇಲೆ ಅಬ್ಬರಿಸಲು ಬರುತ್ತಿದ್ದಾರೆ. ಅದಕ್ಕೆ ಮುಹೂರ್ತ ಕೂಡ ಫಿಕ್ಸ್ ಆಗಿದೆ.

sharukh khan 2

ಸಿದ್ಧಾರ್ಥ್ ಆನಂದ್ ನಿರ್ದೇಶನದ ‘ಪಠಾಣ್’ ಚಿತ್ರೀಕರಣ ನಡೆಯುತ್ತಿರುವಾಗಲೇ ಶಾರುಖ್ ಖಾನ್, ಆಕ್ಷನ್-ಮಾಸ್ ಸಿನಿಮಾ ಒಂದನ್ನು ಒಪ್ಪಿಕೊಂಡಿದ್ದರು. ಅದುವೇ ಜವಾನ್. ತಮಿಳಿನ ಜನಪ್ರಿಯ ನಿರ್ದೇಶಕ ಅಟ್ಲಿ ನಿರ್ದೇಶನದ ಈ ಸಿನಿಮಾದ ಬಿಡುಗಡೆ ದಿನಾಂಕವನ್ನು ರಿವೀಲ್ ಮಾಡಲಾಗಿದೆ. ಇದನ್ನೂ ಓದಿ:ನಾನು ಮಾತಾಡಿದರೆ ಸಮಂತಾ ಕಥೆ ಅಷ್ಟೆ: ಮತ್ತೆ ಗುಡುಗಿದ ಚಿಟ್ಟಿ ಬಾಬು

sharukh khan 1

ಪಕ್ಕಾ ಆ್ಯಕ್ಷನ್ ಸಿನಿಮಾ ಆಗಿರುವ ‘ಜವಾನ್’ ಜೂನ್ 2ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಕಾರ್ಯವನ್ನು ಮೇ ತಿಂಗಳ ಮೊದಲ ವಾರದಿಂದ ಶಾರುಖ್ ಖಾನ್ ಹಾಗೂ ತಂಡ ಪ್ರಾರಂಭಿಸಲಿದೆ. ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಸಹ ಅಂತಿಮ ಹಂತದಲ್ಲಿವೆ. ಇವುಗಳು ಮುಗಿದ ಬಳಿಕ ಸಿನಿಮಾ ತಂಡವು ಪ್ರಚಾರ ಕಾರ್ಯ ಮಾಡಲಿದ್ದಾರೆ.

ಶಾರುಖ್ ಖಾನ್‌ಗೆ ಜೋಡಿಯಾಗಿ ಕಾಲಿವುಡ್ ಸೂಪರ್ ಸ್ಟಾರ್ ನಯನತಾರಾ (Nayanatara) ನಟಿಸಿದ್ದಾರೆ. ಹಾಸ್ಯ ನಟ ಯೋಗಿ ಬಾಬು ಕೂಡ ಸಿನಿಮಾದ ಭಾಗವಾಗಿದ್ದಾರೆ. ತಮಿಳಿನ ಸ್ಟಾರ್ ವಿಜಯ್ (Vijay) ಕೂಡ ಶಾರುಖ್ ಖಾನ್ ಜೊತೆ ‘ಜವಾನ್’ ಸಿನಿಮಾದಲ್ಲಿ ನಟಿಸಿದ್ದಾರೆ. ಅತಿಥಿ ಪಾತ್ರದಲ್ಲಿ ವಿಜಯ್ ನಟಿಸಿದ್ದಾರೆ. ಇಬ್ಬರ ಜುಗಲ್‌ಬಂದಿ ನೋಡಲು ಜೂನ್ 2ರವರೆಗೂ ಕಾದುನೋಡಬೇಕಿದೆ.

Share This Article