ವಿಮಾನದಲ್ಲಿ ಬಾಟಲಿ ಹಿಡಿದು ಬಡಿದಾಟ; ಫ್ಲೈಟ್‌ ತುರ್ತು ಭೂಸ್ಪರ್ಶ – ಇಬ್ಬರು ಮಹಿಳೆಯರು ಸೇರಿ ನಾಲ್ವರು ಅರೆಸ್ಟ್

Public TV
2 Min Read
Flight
ಸಾಂದರ್ಭಿಕ ಚಿತ್ರ

ಕ್ಯಾನ್ಬೆರಾ: ಕೈರ್ನ್ಸ್‌ನಿಂದ ಆಸ್ಟ್ರೇಲಿಯಾದ (Australia) ಉತ್ತರಕ್ಕೆ ತೆರಳುತ್ತಿದ್ದ ವಿಮಾನದ ತುರ್ತು ಭೂಸ್ಪರ್ಶಕ್ಕೆ ಕಾರಣವಾದ ನಾಲ್ವರು ಪ್ರಯಾಣಿಕರನ್ನ ಬಂಧಿಸಿರುವುದಾಗಿ ಆಸ್ಟ್ರೇಲಿಯನ್ ಫೆಡರಲ್ ಪೊಲೀಸರು (AFP) ಹಾಗೂ ಎನ್‌ಟಿ ಪೊಲೀಸರು (NT Police) ತಿಳಿಸಿದ್ದಾರೆ.

ಇದೇ ತಿಂಗಳ ಏಪ್ರಿಲ್ 20 ರಂದು ಕೈರ್ನ್ಸ್‌ನಿಂದ ಗ್ರೂಟ್ ಐಲ್ಯಾಂಡ್‌ಗೆ ತೆರಳುತ್ತಿದ್ದ ವಿಮಾನದಲ್ಲಿ ಪ್ರಯಾಣಿಕರ ಗುಂಪೊಂದು ಪರಸ್ಪರ ಬಡಿದಾಟಕ್ಕೆ ಮುಂದಾಗಿದೆ. ಈ ವೇಳೆ ಸಹ ಪ್ರಯಾಣಿಕ ಮಹಿಳೆಯೊಬ್ಬಳು ಬಾಟಲಿ ಹಿಡಿದುಕೊಂಡು ಮತ್ತೋರ್ವ ಪ್ರಯಾಣಿಕನಿಗೆ ಹೊಡೆಯಲು ಮುಂದಾಗಿದ್ದಾಳೆ. ಈ ಕುರಿತ ವೀಡಿಯೋ ತುಣುಕು ಜಾಲತಾಣದಲ್ಲಿ ಹರಿದಾಡುತ್ತಿದೆ. ಘಟನೆ ನಡೆಯುತ್ತಿದ್ದಂತೆ ವಿಮಾನ ಕ್ವೀನ್ಸ್ಲ್ಯಾಂಡ್‌ಗೆ ಹಿಂತಿರುಗಿಸಿ, ಮಹಿಳೆಯರ ಮೇಲೆ ಆರೋಪ ಹೊರಿಸಲಾಗಿದೆ. ಇದನ್ನೂ ಓದಿ: ಪಾಕ್‌ನಲ್ಲಿ ಭೀಕರ ಸ್ಫೋಟ – 12 ಮಂದಿ ಪೊಲೀಸರ ದಾರುಣ ಸಾವು, 40ಕ್ಕೂ ಹೆಚ್ಚು ಮಂದಿಗೆ ಗಾಯ

Female Passenger

ವಿಮಾನದಲ್ಲಿ ಅಸಭ್ಯ ವರ್ತನೆ, ಸಹಜ ಹಲ್ಲೆ ಹಾಗೂ ಕ್ಯಾಬಿನ್ ಸಿಬ್ಬಂದಿಯಿಂದ ಸುರಕ್ಷತಾ ಕ್ರಮಗಳನ್ನ ಪಾಲಿಸುವಲ್ಲಿ ವಿಫಲರಾದ ಮಹಿಳಾ ಪ್ರಯಾಣಿಕರನ್ನ ಗ್ರೂಟ್ ಐಲ್ಯಾಂಡ್‌ನಲ್ಲಿರುವ ಅಲಿಯಾಂಗುಲಾದಲ್ಲಿ ಬಂದಿಳಿದ ನಂತರ ಎನ್‌ಟಿ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ತವರಿನಲ್ಲಿ ಸೇಡು ತೀರಿಸಿಕೊಳ್ಳಲು RCB ಕಾತರ – ಆದ್ರೆ KGF ಬಿಟ್ರೆ ಬ್ಯಾಟಿಂಗ್‌ನದ್ದೇ ಚಿಂತೆ

23 ವರ್ಷದ ವ್ಯಕ್ತಿಯೊಬ್ಬನ ಮೇಲೆ ಉದ್ದೇಶಪೂರ್ವಕವಾಗಿ ಹಲ್ಲೆ ನಡೆಸಲಾಗಿದೆ. ಇದರಿಂದ ವಿಮಾನಕ್ಕೆ ಹಾನಿಯಾಗಿದ್ದು, ಸಾರ್ವಜನಿಕ ಸ್ಥಳದಲ್ಲಿ ದುರ್ನಡತೆ ಹಾಗೂ ಕೌಟುಂಬಿಕ ಹಿಂಸಾಚಾರ ಆದೇಶವನ್ನು ಉಲ್ಲಂಘಿಸಿದಂತಾಗಿದೆ. ಹಾಗಾಗಿ 23 ವರ್ಷದ ಮತ್ತೊಬ್ಬ ಮಹಿಳೆಯ ಮೇಲೆ ನಿಯಮ ಉಲ್ಲಂಘನೆ ಆರೋಪ ಹೊರಿಸಲಾಗಿದೆ. ಇದೇ ವೇಳೆ 22 ವರ್ಷದ ಮತ್ತೊಬ್ಬ ಪ್ರಯಾಣಿಕ ವಾಣಿಜ್ಯ ಔಷಧ ಪೂರೈಕೆ ಹಾಗೂ ಮಾದಕ ವಸ್ತುಗಳನ್ನು ಹೊಂದಿದ್ದಲ್ಲದೇ ಅಸಭ್ಯ ವರ್ತನೆ ತೋರಿದ್ದಾನೆ. ಜೊತೆಗೆ ನಿಷೇಧಿತ ಪ್ರದೇಶದಲ್ಲಿ ಮದ್ಯ ಸಾಗಿಸುತ್ತಿರುವುದು ಕಂಡುಬಂದಿದೆ ಅದಕ್ಕಾಗಿ ಅವರನ್ನ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article