ವಾಷಿಂಗ್ಟನ್: ಇತ್ತೀಚೆಗೆ ವಿಮಾನಗಳಲ್ಲಿ ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಏರ್ ಇಂಡಿಯಾ (Air India), ಗೋ ಫಸ್ಟ್ ಬಳಿಕ ಅಮೆರಿಕನ್ ಏರ್‌ಲೈನ್ಸ್ (American Airlines) ವಿಮಾನದಲ್ಲೂ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ಅಮೆರಿಕನ್ ಏರ್‌ಲೈನ್ಸ್‌ನ ನ್ಯೂಯಾರ್ಕ್-ನವದೆಹಲಿ (New York-Delhi Flight) ವಿಮಾನದಲ್ಲಿ ಭಾರತದ ಪ್ರಯಾಣಿಕನೊಬ್ಬ ಕುಡಿದ ಅಮಲಿನಲ್ಲಿ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ವಿಮಾನ ದೆಹಲಿಗೆ ಬಂದಿಳಿದ ನಂತರ ಆರೋಪಿಯನ್ನ ಸಿಐಎಸ್ಎಫ್ ಅಧಿಕಾರಿಗಳು ಬಂಧಿಸಿದ್ದಾರೆ.
ವಿಮಾನಯಾನ ಸಂಸ್ಥೆ ಸಹಪ್ರಯಾಣಿಕನ ಹೇಳಿಕೆಯನ್ನ ದಾಖಲಿಸಿಕೊಂಡಿದ್ದು, ಆರೋಪಿ ವಿರುದ್ಧ ನಾಗರಿಕ ವಿಮಾನಯಾನ ಕಾಯ್ದೆ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಇದನ್ನೂ ಓದಿ: ಕೇದಾರನಾಥ ಯಾತ್ರೆ ಇಂದಿನಿಂದ ಆರಂಭ – ಯಾತ್ರಾರ್ಥಿಗಳಿಗೆ ಬಾಗಿಲು ತೆರೆದ ದೇವಾಲಯ
ಏನಿದು ಘಟನೆ?
ಅಮೆರಿಕನ್ ಏರ್‌ಲೈನ್ಸ್‌ನ AA-292 ವಿಮಾನವು ನ್ಯೂಯಾರ್ಕ್‌ನಿಂದ ದೆಹಲಿಗೆ ಹೊರಟಿತ್ತು. ಈ ವೇಳೆ ಭಾರತದ ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಈ ಸಂಬಂಧ ಅಮೆರಿಕನ್ ಏರ್‌ಲೈನ್ಸ್ ವಿಮಾನ ಲ್ಯಾಂಡಿಂಗ್ ಆಗುವ ಮೊದಲೇ ದೆಹಲಿ ವಿಮಾನ ನಿಲ್ದಾಣಕ್ಕೆ (Delhi Airport) ವಿಷಯ ವರದಿ ಮಾಡಿತ್ತು. ಭಾನುವಾರ ರಾತ್ರಿ 9 ಗಂಟೆಗೆ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ ಆರೋಪಿಯನ್ನ ಬಂಧಿಸಲಾಗಿದೆ. ಇದನ್ನೂ ಓದಿ: ಯಾವುದೇ ಅಹಂ ಇಲ್ಲ, ಬಿಜೆಪಿ ವಿರುದ್ಧ ಹೋರಾಡಲು ಸಿದ್ಧ: ಮಮತಾ ಬ್ಯಾನರ್ಜಿಯನ್ನು ಭೇಟಿಯಾದ ನಿತೀಶ್
ಕಳೆದ ವರ್ಷ ನವೆಂಬರ್‌ನಲ್ಲಿ ಏರ್ ಇಂಡಿಯಾದಲ್ಲಿ ವ್ಯಕ್ತಿಯೊಬ್ಬ ಸಹ ಪ್ರಯಾಣಿಕ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ. ಮತ್ತೊಂದು ಘಟನೆಯಲ್ಲಿ ಡಿಸೆಂಬರ್ 6 ರಂದು ಪ್ಯಾರಿಸ್-ನವದೆಹಲಿ ಏರ್ ಇಂಡಿಯಾ ವಿಮಾನದಲ್ಲೂ ಇದೇ ಘಟನೆ ನಡೆದಿತ್ತು. ಈ ವರ್ಷದ ಮಾರ್ಚ್ ತಿಂಗಳಲ್ಲೂ ಅಮೆರಿಕನ್ ಏರ್‌ಲೈನ್ಸ್‌ನಲ್ಲಿ ಇದೇ ರೀತಿ ಘಟನೆ ವರದಿಯಾಗಿತ್ತು.