ರಾಡ್ ನಿಂದ ಹೊಡೆದು ಪವನ್ ಕಲ್ಯಾಣ್ ಅಭಿಮಾನಿ ಕೊಂದ ಪ್ರಭಾಸ್ ಫ್ಯಾನ್

Public TV
1 Min Read
Prabhas 1

ತೆಲುಗು ಸಿನಿಮಾ ರಂಗದಲ್ಲಿ ಫ್ಯಾನ್ಸ್ ವಾರ್ ಕಾಮನ್ ಎನ್ನುವಂತಾಗಿದೆ. ನಟರ ಅಭಿಮಾನಿಗಳ ಮಧ್ಯ ಗುಂಪು ಘರ್ಷಣೆ ಆಗಾಗ್ಗೆ ಆಗುತ್ತಲೇ ಇರುತ್ತವೆ. ಈ ಬಾರಿ ಕ್ಷುಲ್ಲಕ ಕಾರಣಕ್ಕಾಗಿ ಪವನ್ ಕಲ್ಯಾಣ್  (Pawan Kalyan) ಅಭಿಮಾನಿಯೊಬ್ಬ ಪ್ರಭಾಸ್ (Prabhas) ಅಭಿಮಾನಿಯನ್ನು ಹೊಡೆದು ಕೊಂದಿರುವ ಘಟನೆ ಬೆಳಕಿಗೆ ಬಂದಿದೆ. ಆಂಧ್ರದ ಅತ್ತಿಲಿ ಎಂಬಲ್ಲಿ ಈ ಘಟನೆ ನಡೆದಿದೆ.

Prabhas 3

ಕಿಶೋರ್ (Kishore) ಪವನ್ ಕಲ್ಯಾಣ್ ಅಭಿಮಾನಿ. ಹರಿಕುಮಾರ್ (Harikuma) ಎನ್ನುವವ ಪ್ರಭಾಸ್ ಅಭಿಮಾನಿ. ಇಬ್ಬರೂ ಮನೆ ಪೇಂಟಿಂಗ್ ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಪವನ್ ಕಲ್ಯಾಣ್ ಅವರ ವಿಡಿಯೋವನ್ನು ಕಿಶೋರ್ ವಾಟ್ಸಾಪ್ ಸ್ಟೇಟಸ್ ಗೆ ಹಾಕಿದ್ದ. ಇದರಿಂದ ಕುಪಿತಗೊಂಡ ಹರಿಕುಮಾರ್, ಆ ಸ್ಟೇಟಸ್ ತೆಗೆದು ಪ್ರಭಾಸ್ ವಿಡಿಯೋ ಹಾಕುವಂತೆ ಹೇಳಿದ್ದಾನೆ. ತನ್ನ ಮಾತು ಕೇಳದೇ ಇರುವ ಕಾರಣದಿಂದಾಗಿ ರಾಡ್ ನಿಂದ ಹೊಡೆದು ಸಾಯಿಸಿದ್ದಾನೆ.

Pawan Kalyan 1

ಮೊದ ಮೊದಲು ಮಾತಿನಿಂದ ಶುರುವಾದ ಜಗಳ ವಿಕೋಪಕ್ಕೆ ತಿರುಗಿ ಕಿಶೋರ್ ಗೆ ರಾಡ್ ನಿಂದ ಹರಿಕುಮಾರ್ ಹಲ್ಲೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಕಿಶೋರ್ ನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸುವಾಗ ತೀವ್ರ ರಕ್ತಸ್ರಾವದಿಂದಾಗಿ ಸಾವನ್ನಪ್ಪಿದ್ದಾನೆ (Murder) ಎಂದು ತಿಳಿದು ಬಂದಿದೆ. ಹರೀಶ್ ಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ:ನಟ, ನಿರ್ದೇಶಕ ಟಪೋರಿ ಸತ್ಯ ನಿಧನ

Prabhas 2

ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಇಂತಹ ಘಟನೆಗಳು ತೆಲುಗು ಚಿತ್ರೋದ್ಯಮದಲ್ಲಿ ಸಾಕಷ್ಟು ನಡೆದಿವೆ. ಥಿಯೇಟರ್ ಗೆ ಕಲ್ಲು ತೂರುವುದು, ಪೋಸ್ಟರ್ ಗೆ ಬೆಂಕಿ ಹಚ್ಚುವುದು ಹೀಗೆ ಅಭಿಮಾನಿಗಳು ಗಲಾಟೆ ಮಾಡುತ್ತಲೇ ಇರುತ್ತಾರೆ. ಈ ಬಾರಿ ಬಡಿದು ಕೊಂದಿರುವುದು ತೀವ್ರ ಆತಂಕ ಸೃಷ್ಟಿಸಿದೆ.

Share This Article