2005ರಿಂದ ವಾಸವಿದ್ದ ಸರ್ಕಾರಿ ಬಂಗಲೆ ತೊರೆದ ರಾಹುಲ್ ಗಾಂಧಿ

Public TV
1 Min Read
rahul gandhi 8

ನವದೆಹಲಿ: ಕಾಂಗ್ರೆಸ್ (Congress) ಮುಖಂಡ ರಾಹುಲ್ ಗಾಂಧಿ (Rahul Gandhi) ಅವರು ಕೇಂದ್ರ ದೆಹಲಿಯಲ್ಲಿರುವ ತಮ್ಮ ಅಧಿಕೃತ ನಿವಾಸವನ್ನು ಖಾಲಿ ಮಾಡಿದ್ದಾರೆ.

ರಾಹುಲ್ ಗಾಂಧಿ ಹಾಗೂ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi) ಅವರು ಬೆಳಗ್ಗೆಯಿಂದ 2 ಬಾರಿ ಬಂಗಲೆಗೆ ಭೇಟಿ ನೀಡಿದ್ದಾರೆ. ನಂತರ ಮಧ್ಯಾಹ್ನದ ವೇಳೆಗೆ ರಾಹುಲ್ ಗಾಂಧಿ ಕೀಗಳನ್ನು ಹಸ್ತಾಂತರಿಸಿದ್ದಾರೆ.

rahul gandhi 5

2005 ರಿಂದ ರಾಹುಲ್ ಗಾಂಧಿ 12 ತುಘಲಕ್ ಲೇನ್ ಬಂಗಲೆಯಲ್ಲಿ ವಾಸಿಸುತ್ತಿದ್ದರು. ಆದರೆ ಕಳೆದ ತಿಂಗಳ ಕೊನೆಯಲ್ಲಿ ಸಂಸತ್ ಸದಸ್ಯ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹಗೊಂಡಿದ್ದರು. ಇದರ ಬೆನ್ನಲ್ಲೇ ಬಿಜೆಪಿ ಸಂಸದ ಸಿ.ಆರ್. ಪಾಟೀಲ್ ನೇತೃತ್ವದ ಲೋಕಸಭೆಯ ವಸತಿ ಸಮಿತಿಯು ಏಪ್ರಿಲ್ 22ರೊಳಗೆ ದೆಹಲಿಯಲ್ಲಿರುವ (Delhi) ತುಘಲಕ್ ಲೇನ್ (Tughlaq Lane) ಬಂಗಲೆ ತೊರೆಯುವಂತೆ ಲೋಕಸಭಾ ವಸತಿ ಸಮಿತಿ ನೋಟಿಸ್ ನೀಡಿತ್ತು. ಮನೆ ಖಾಲಿ ಮಾಡಲು ಒಪ್ಪಿಗೆ ಸೂಚನೆ ನೀಡುತ್ತಿದ್ದಂತೆ ರಾಹುಲ್ ಗಾಂಧಿಗೆ ಪಕ್ಷದ ನಾಯಕರಿಂದ ಮನೆ ಆಫರ್‌ಗಳು ಹರಿದು ಬಂದಿತ್ತು.

congress

ಆದರೆ ರಾಹುಲ್ ಗಾಂಧಿ ಅವರು ಸೋನಿಯಾ ಗಾಂಧಿ (Sonia Gandhi) ಅವರ ಜನಪಥ್ ನಿವಾಸಕ್ಕೆ ತೆರಳುತ್ತಿದ್ದಾರೆ. ಆದರೂ ರಾಹುಲ್ ಗಾಂಧಿ ಅವರು ಕೆಲವು ನಿಯಮಗಳ ಪ್ರಕಾರ ಬಂಗಲೆಯಿಂದ ಹೊರಹೋಗಬೇಕಾಗಿದೆ. ಕಾಂಗ್ರೆಸ್ ನಾಯಕರು ಕೇಂದ್ರದ ವಿರುದ್ಧ ರಾಜಕೀಯ ಸೇಡಿನ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ರಾಮಲಲ್ಲಾನ ಜಲಾಭಿಷೇಕಕ್ಕೆ ಪಾಕಿಸ್ತಾನ ಸೇರಿದಂತೆ 155 ದೇಶದ ನದಿಗಳ ನೀರು

ಕಳೆದ ವಾರ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ತಮ್ಮ ಮನೆಯನ್ನು ಖಾಲಿಗೊಳಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ತುಘಲಕ್ ಲೇನ್‍ನ ಬಂಗಲೆ ಹೊರಗೆ 2 ಟ್ರಕ್‍ಗಳಲ್ಲಿ ಕಾರ್ಮಿಕರು ಮನೆಯಲ್ಲಿದ್ದ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಮನೆ ಖಾಲಿ ಮಾಡುತ್ತಿರುವ ರಾಹುಲ್ ಗಾಂಧಿ – 2 ಟ್ರಕ್‍ಗಳಲ್ಲಿ ವಸ್ತುಗಳ ಸಾಗಣೆ

Share This Article