ಅಕ್ಟೋಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ

Public TV
1 Min Read
PARINEETI CHOPRA

ಸಿದ್ಧಾರ್ಥ್- ಕಿಯಾರಾ ಅಡ್ವಾಣಿ ಮದುವೆಯ ಬಳಿಕ ಮತ್ತೊಂದು ಜೋಡಿ ಸದ್ದಿಲ್ಲದೇ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಗುಟ್ಟಾಗಿ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ (Raghav chadha) ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಮದುವೆ ಡೇಟ್‌ ಕೂಡ ಫಿಕ್ಸ್‌ ಆಗಿದೆ.

parineeti chopra

ನಟಿ ಪರಿಣಿತಿ ಚೋಪ್ರಾ (Parineeti Chopra)ಸಿನಿಮಾಗಿಂತ ಇತ್ತೀಚಿಗೆ ರಾಜಕಾರಣಿ ರಾಘವ್ ಚಡ್ಡಾ ಜೊತೆಗಿನ ಲವ್ ರಿಲೇಷನ್‌ಶಿಪ್ ವಿಚಾರವಾಗಿಯೇ ಹೆಚ್ಚೆಚ್ಚು ಸುದ್ದಿಯಾಗ್ತಿದ್ದಾರೆ. ಇತ್ತೀಚಿಗೆ ನಟಿಯ ಎಂಗೇಜ್‌ಮೆಂಟ್ ಸುದ್ದಿ ಹಬ್ಬಿತ್ತು. ಇದೀಗ ಪರಿಣಿತಿ-ರಾಘವ್ ಇಬ್ಬರು ಗುಟ್ಟಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ:ನಯನತಾರಾ ಬಗ್ಗೆ ಕನ್ನಡದ ‘ಗೂಳಿ’ ನಟಿ ಶಾಕಿಂಗ್ ಹೇಳಿಕೆ

Parineeti Chopra 4

ಇತ್ತೀಚಿಗೆ ಪ್ರಿಯಾಂಕಾ ಚೋಪ್ರಾ -ನಿಕ್ ಜೋನಸ್ ಭಾರತಕ್ಕೆ ಬಂದಿದ್ದರು. ಈ ವೇಳೆ ಕುಟುಂಬಸ್ಥರ ಸಮ್ಮುಖದಲ್ಲಿ ಸರಳವಾಗಿ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಈ ವರ್ಷ ಅಕ್ಟೋಬರ್‌ನಲ್ಲಿ ಮದುವೆ (Wedding) ಡೇಟ್ ಕೂಡ ಫಿಕ್ಸ್ ಆಗಿದ್ದು, ಮದುವೆ ತಯಾರಿ ನಡೆಯುತ್ತಿದೆ.

Raghav Chadha Parineeti Chopra

ಪಾಪರಾಜಿಗಳ ಕಣ್ಣಿಗೆ ಪರಿಣಿತಿ ಚೋಪ್ರಾ ಕಾಣಿಸಿಕೊಂಡಾಗ, ರಾಘವ್ ಚಡ್ಡಾ ಜೊತೆಗಿನ ಮದುವೆ ಬಗ್ಗೆ ಕೇಳಲಾಗುತ್ತಿದೆ. ಎಲ್ಲರ ಪ್ರಶ್ನೆಗೂ ನಗುವಿನ ಮೂಲಕ ಉತ್ತರ ನೀಡಿ ಹೋಗ್ತಿದ್ದಾರೆ. ಈಗ ಖ್ಯಾತ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಮನೆಗೆ ಪರಿಣಿತಿ ಭೇಟಿ ನೀಡಿದ್ದಾರೆ. ಮದುವೆಗೆ ಡ್ರೆಸ್ ಆರ್ಡರ್ ನೀಡಿ ಬಂದಿದ್ದಾರೆ. ಈ ವೇಳೆ ಮತ್ತೆ ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ಬಿದ್ದಾಗ, ರಾಘವ್ ಚಡ್ಡಾ ಬಗ್ಗೆ ಕೇಳಲಾಗಿದೆ. ಯಾವುದೇ ಪ್ರಶ್ನೆಗೂ ಉತ್ತರಿಸದೇ ನಕ್ಕು ಸುಮ್ಮನಾಗಿದ್ದಾರೆ.

ಪರಿಣಿತಿ ಚೋಪ್ರಾ ಈ ನಡೆ ಮದುವೆ ಅಂತೆ- ಕಂತೆಗೆ ಮತ್ತಷ್ಟು ಪುಷ್ಟಿ ನೀಡಿದೆ. ಅಕ್ಟೋಬರ್‌ನಲ್ಲಿ ಪರಿಣಿತಿ-ರಾಘವ್ ದಾಂಪತ್ಯ ಜೀವನಕ್ಕೆ ಕಾಲಿಡುವ ಸುದ್ದಿ ಅದೆಷ್ಟರ ಮಟ್ಟಿಗೆ ನಿಜ? ಎಂಬುದನ್ನ ಕಾದುನೋಡಬೇಕಿದೆ.

Share This Article