ದುನಿಯಾ ಸೂರಿ ನಿರ್ದೇಶನದ ‘ಬ್ಯಾಡ್ ಮ್ಯಾನರ್ಸ್’ (Bad Manners)ಸಿನಿಮಾ ರಿಲೀಸ್‌ಗೂ ಮೊದಲೇ ಹೊಸ ಸಿನಿಮಾಗೆ ಸೂರಿ ಕೈಜೋಡಿಸಿದ್ದಾರೆ. ಇದೇ ಮೊದಲ ಬಾರಿಗೆ ಜಯಣ್ಣ ಫಿಲಂಸ್ ಜೊತೆ ನಿರ್ದೇಶಕ ಸೂರಿ ಸಿನಿಮಾ ಮಾಡಲು ಮುಂದಾಗಿದ್ದಾರೆ. ‘ಕಿಸ್’ (Kiss) ಹೀರೋ ವಿರಾಟ್‌ಗೆ ಸೂರಿ (Duniya Suri) ನಿರ್ದೇಶನ ಮಾಡ್ತಿದ್ದಾರೆ.
ಜಯಣ್ಣ- ಬೋಗೇಂದ್ರ ಫಿಲಂಸ್ ಸಂಸ್ಥೆಯೊಂದಿಗೆ ಬಹು ಚಿತ್ರಗಳನ್ನ ಮಾಡಲು ನಟ ವಿರಾಟ್ ಸಹಿ ಮಾಡ್ತಿದ್ದಾರೆ. ಈ ಸಂಸ್ಥೆ ಜೊತೆ ದಿನಕರ್ ತೂಗುದೀಪ್ ನಿರ್ದೇಶನದ ‘ರಾಯಲ್’ (Royal) ಚಿತ್ರದಲ್ಲಿ ವಿರಾಟ್ ನಟನೆ ಮಾಡ್ತಿದ್ದಾರೆ. ಇದಾದ ಬಳಿಕ ವಿರಾಟ್‌ಗೆ ‘ಟಗರು’ ಖ್ಯಾತಿಯ ಸೂರಿ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
View this post on Instagram
ಅಭಿಷೇಕ್ ಅಂಬರೀಶ್ ನಟನೆಯ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ಮೇ ಅಂತ್ಯದಲ್ಲಿ ತೆರೆಗೆ ಬರಲಿದೆ. ಈ ಸಿನಿಮಾದ ರಿಲೀಸ್ ಬಳಿಕ ವಿರಾಟ್ ಕೈಗೆತ್ತಿಕೊಳ್ಳಲಿದ್ದಾರೆ ನಿರ್ದೇಶಕ ಸೂರಿ. ಪಕ್ಕಾ ಮಾಸ್ ಎಂಟರ್‌ಟೈನರ್ ಸಿನಿಮಾ ಮಾಡಲು ಪ್ಲ್ಯಾನ್ ಮಾಡಿದ್ದಾರೆ. ಇದನ್ನೂ ಓದಿ:ನೆಟ್ಟಿಗರ ಹಾಸ್ಯಕ್ಕೆ ಗುರಿಯಾದ ‘ಬಿಗ್ ಬಾಸ್’ ಸೋನು ಗೌಡ ಬ್ರಾ ವೀಡಿಯೋ
ಹೊಸ ಬಗೆಯ ಕಥೆ ಹೊತ್ತು ಜಯಣ್ಣ ಫಿಲಂಸ್ ಅಡಿ ವಿರಾಟ್ ಲೈಟ್, ಕ್ಯಾಮೆರಾ, ಆ್ಯಕ್ಷನ್, ಎಂದು ಹೇಳಲು ರೆಡಿಯಾಗಿದ್ದಾರೆ. ದುನಿಯಾ ಸೂರಿ- ನಟ ವಿರಾಟ್ ಕಾಂಬೋ ಅದೆಷ್ಟರ ಮಟ್ಟಿಗೆ ಮೋಡಿ ಮಾಡಲಿದ್ದಾರೆ ಎಂದು ಕಾದುನೋಡಬೇಕಿದೆ.