ನೆಟ್ಟಿಗರ ಹಾಸ್ಯಕ್ಕೆ ಗುರಿಯಾದ ‘ಬಿಗ್ ಬಾಸ್’ ಸೋನು ಗೌಡ ಬ್ರಾ ವೀಡಿಯೋ

Public TV
2 Min Read
sonu gowda

ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಆಗಾಗ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಈ ಹಿಂದೆ ಇವರ ಕೆಲ ಖಾಸಗಿ ಫೋಟೋ- ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು. ಹಸಿಬಿಸಿ ದೃಶ್ಯಗಳನ್ನು ನೋಡಿ ಪಡ್ಡೆ ಹುಡುಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದರು. ಸದ್ಯ ಸೋನು ಗೌಡ ಹೊಸ ವೀಡಿಯೋವೊಂದನ್ನು ಶೇರ್ ಮಾಡಿದ್ದು, ಹುಡುಗಿಯರಿಗೆ ಮಾತ್ರ ಹುಡುಗರು ನೋಡಬೇಡಿ ಎಂದಿದ್ದಾರೆ.

sonu srinivas gowda 1 1

ಟಿಕ್‌ ಟಾಕ್ ರೀಲ್ಸ್‌ನಿಂದ ಸೋಷಿಯಲ್ ಮೀಡಿಯಾದಲ್ಲಿ ಗುರುತಿಸಿಕೊಂಡಿದ್ದ ಸೋನು ಗೌಡ ಬಳಿಕ ಬಿಗ್ ಬಾಸ್ ಒಟಿಟಿ (Bigg Boss Ott) ಅಂಗಳಕ್ಕೆ ಕಾಲಿಟ್ಟು ಜನಪ್ರಿಯತೆ ಗಳಿಸಿದ್ದರು. ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ, ಸಾನ್ಯ ಅಯ್ಯರ್ ಜೊತೆ ಸೋನು ಮಿಂಚಿದ್ದರು. ದೊಡ್ಮನೆ ಆಟ ಮುಗಿದ ಮೇಲೆ ತಮ್ಮ ಯುಟ್ಯೂಬ್‌ನಲ್ಲಿ ಒಂದಲ್ಲಾ ಒಂದು ವಿಚಾರದೊಂದಿಗೆ ಚರ್ಚೆ ಮಾಡುತ್ತಾರೆ. ಹೋಮ್ ಟೂರ್, ಸ್ಕಿನ್ ಕೇರ್ ಅಂತಾ ವಿಚಾರಗಳ ಬಗ್ಗೆ ಸೋನು ಮಾತನಾಡುತ್ತಾರೆ.‌ ಇದನ್ನೂ ಓದಿ:ಪವಿತ್ರಾ ಲೋಕೇಶ್-ನರೇಶ್ ‘ಮತ್ತೆ ಮದುವೆ’: ನಾಳೆ ಏನ್ ಕಾದಿದೆಯೋ?

SONU SRINIVAS GOWDA 1 3

ಆದರೆ ಇದೀಗ ಹೊಸ ವಿಚಾರಕ್ಕೆ ಸೋನು ಗೌಡ ಮತ್ತೊಮ್ಮೆ ನೆಟ್ಟಿಗರ ಹಾಸ್ಯಕ್ಕೆ ಗುರಿಯಾಗಿದ್ದಾರೆ. ಹೌದು, ಕಂಪನಿಯೊಂದರ ಜಾಹಿರಾತಿಗೆ ಸೋನು ಗೌಡ ಬ್ರಾ ಹೇಗೆ ಧರಿಸುವುದು ಎಂಬ ವೀಡಿಯೋ ಮಾಡಿದ್ದಾರೆ. ಹೆಣ್ಣುಮಕ್ಕಳು ಹೇಗೆ ಬ್ರಾ ಹಾಕಬೇಕು, ಯಾವ ರೀತಿಯ ಬ್ರಾ ತೆಗೆದುಕೊಳ್ಳಬೇಕು ಎಂಬುವುದು ಸ್ಪಷ್ಟವಾಗಿ ವಿಡಿಯೋದಲ್ಲಿ ಸೂಚಿಸಿದ್ದಾರೆ. ಜೊತೆಗೆ ಅದನ್ನು ಯಾವ ರೀತಿ ಹಾಕಬೇಕು ಎಂಬುವುದರ ಬಗ್ಗೆ ಕೂಡ ವೀಡಿಯೋ ಮೂಲಕ ತಿಳಿಸಿದ್ದಾರೆ.

ವೀಡಿಯೋದ ಆರಂಭದಲ್ಲಿಯೇ ಇದು ಕೇವಲ ಹುಡುಗಿಯರಿಗಾಗಿ ಇರುವ ವೀಡಿಯೋ. ಹುಡುಗರಿಗಾಗಿ ಅಲ್ಲ ಎಂದು ಹೇಳಿದ್ದಾರೆ. ಹುಡುಗಿಯರಿಗೆ ಬ್ರಾ ಧರಿಸುವಾಗ ಹಲವು ಗೊಂದಲಗಳು ಇರುತ್ತವೆ. ಕೆಲವರಿಗೆ ಬ್ರಸ್ಟ್ ಹೆವಿಯಾಗಿ ಕಾಣಲಿ ಎಂದಿರುತ್ತೆ. ಇನ್ನು ಕೆಲವರಿಗೆ ಹೆವಿಯಾಗಿ ಕಾಣದಿರಲಿ ಎಂದಿರುತ್ತೆ. ಹೀಗಿರುವಾಗ ಯಾವ ರೀತಿಯ ಬ್ರಾ ಧರಿಸಬೇಕು ಎಂದು ಸೋನು ಗೌಡ ಸೂಚಿಸಿದ್ದಾರೆ. ಹೀಗಿರುವಾಗ ಪ್ಯಾಡೆಡ್ ಬ್ರಾ ಹಾಕಬೇಕಾ ಅಥವಾ ನಾನ್-ಪ್ಯಾಡೆಡ್ ಬ್ರಾ ಹಾಕಬೇಕಾ ಎಂಬ ಬಗ್ಗೆ ಸಾಕಷ್ಟು ಗೊಂದಲಗಳಿರುತ್ತವೆ. ಕೇವಲ ಬ್ರಾ ಬಗ್ಗೆ ಮಾತ್ರವಲ್ಲ ಪ್ಯಾಂಟಿ ಬಗ್ಗೆಯೂ ಅನೇಕರಿಗೆ ಗೊಂದಲಗಳಿವೆ. ಹುಡುಗಿಯರಿಗೆ ತುಂಬಾ ಪ್ರಯೋಜನವಾಗುವ ಕಾರಣ ಈ ವೀಡಿಯೋ ಮಾಡಿದ್ದಾಗಿ ತಿಳಿಸಿದ್ದಾರೆ. ಪ್ರಮೋಷನ್‌ಗಾಗಿ ಮಾಡಿದ ಸೋನು ಬ್ರಾ ವೀಡಿಯೋ, ಇದೀಗ ನೆಟ್ಟಿಗರ ಹಾಸ್ಯಕ್ಕೆ ಗುರಿಯಾಗಿದೆ. ದುಡ್ಡಿಗಾಗಿ ಏನು ಬೇಕಾದರೂ ಮಾಡ್ತೀರಾ ಎಂದು ನಟಿಗೆ ಬಗೆ ಬಗೆಯ ರೀತಿಯಲ್ಲು ಕಾಮೆಂಟ್‌ ಮಾಡ್ತಿದ್ದಾರೆ.

Share This Article