ಬಿಗ್ ಬೆಡಗಿ (Bigg Boss Kannada) ದಿವ್ಯಾ ಉರುಡುಗ (Divya Uruduga) ದೊಡ್ಮನೆಯಲ್ಲಿ ತಮ್ಮದೇ ಶೈಲಿಯಲ್ಲಿ ಗುರುತಿಸಿಕೊಂಡವರು. ಹೊಸ ಬಗೆಯ ಪಾತ್ರಗಳ ಮೂಲಕ ಸ್ಯಾಂಡಲ್‌ವುಡ್ (Sandalwood) ನಾಯಕಿ ಇದೀಗ ಮೋಡಿ ಮಾಡ್ತಿದ್ದಾರೆ. ಸದ್ಯ ಆರ್‌ಸಿಬಿ ಕಡೆ ತಮ್ಮ ಒಲವಿನ ಬಗ್ಗೆ ಮಾತನಾಡಿದ್ದಾರೆ.
ಕನ್ನಡಿಗರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮೇಲೆ ಎಲ್ಲಿಲ್ಲದ ಪ್ರೀತಿ. ಸಾಮಾನ್ಯರಿಂದ ಹಿಡಿದು ಸಿನಿಮಾ ತಾರೆಯರವರೆಗೂ ಆರ್‌ಸಿಬಿಗೆ ಬೆಂಬಲಿಸುತ್ತಾರೆ. ಪ್ರತಿ ಮ್ಯಾಚ್‌ನ ಮಿಸ್ ಮಾಡದೇ ನೋಡುತ್ತಾರೆ.
View this post on Instagram
ಸೋಮವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸಿಎಸ್‌ಕೆ ತಂಡದ ಹಣಾಹಣಿಯಲ್ಲಿ ಬೆಂಗಳೂರು ತಂಡ ಸೋತಿದೆ. ಅಭಿಮಾನಿಗಳು ಫಾರ್ ಎವರ್ ಆರ್‌ಸಿಬಿ ಅಂತಾ ತಮ್ಮ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಹಾಗೆಯೇ ನಟಿ ದಿವ್ಯಾ ಉರುಡುಗ ಕೂಡ ‘ಎಂದೆಂದಿಗೂ ಆರ್‌ಸಿಬಿ’ ಎಂದು ಪೋಸ್ಟ್ ಶೇರ್ ಮಾಡುವ ಮೂಲಕ ಬೆಂಬಲ ಸೂಚಿಸಿದ್ದಾರೆ. ಇದನ್ನೂ ಓದಿ:ಹಾಸ್ಯ ನಟ ಅಲ್ಲು ರಮೇಶ್ ಹೃದಯಾಘಾತದಿಂದ ನಿಧನ
‘ಅರ್ದಂ ಬರ್ಧ ಪ್ರೇಮ ಕಥೆ’ ಸಿನಿಮಾ ಮೂಲಕ ಅರವಿಂದ್ ಕೆಪಿ – ದಿವ್ಯಾ ಉರುಡುಗ ಜೋಡಿಯಾಗಿ ಬರುತ್ತಿದ್ದಾರೆ. ಸದ್ಯದಲ್ಲೇ ಈ ಸಿನಿಮಾ ತೆರೆಗೆ ಬರಲಿದೆ. ಮೊದಲ ಬಾರಿಗೆ ನಾಯಕ ನಟನಾಗಿ ಅರವಿಂದ್ ಕೆಪಿ ಬೆಳ್ಳಿಪರದೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ.