ಹೆಚ್‍ಡಿಡಿ ಮುಂದೆ ಗಳಗಳನೆ ಅತ್ತ ನಿಖಿಲ್ ಕುಮಾರಸ್ವಾಮಿ

Public TV
1 Min Read
nikhil kumaraswamy 3

ರಾಮನಗರ: ರಾಮನಗರ (Ramanagara) ಕ್ಷೇತ್ರದ ಜೆಡಿಎಸ್ (JDS) ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆಗೆ ಹೋಗುವ ವೇಳೆ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರ ನಿವಾಸದಲ್ಲಿ ಭಾವುಕ ವಾತಾವರಣ ಸೃಷ್ಟಿಯಾಗಿತ್ತು.

ಸೋಮವಾರ ರಾಮನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಕುಟುಂಬ ಸಮೇತರಾಗಿ ಮಾಜಿ ಪ್ರಧಾನಿ ದೇವೆಗೌಡರಿಂದ (HD Devegowda) ಬಿ. ಫಾರಂ ಪಡೆದು ಆಶೀರ್ವಾದ ಪಡೆದುಕೊಳ್ಳಲು ಬಂದಿದ್ದರು. ಈ ವೇಳೆ ಹೆಚ್.ಡಿ ದೇವೇಗೌಡರು ಬಿ. ಫಾರಂ ನೀಡುತ್ತಿದ್ದಂತೆ ನಿಖಿಲ್ ಭಾವುಕರಾಗಿ ಕಣ್ಣೀರು ಹಾಕಿದರು. ಇದನ್ನೂ ಓದಿ: ಲಿಂಗಾಯತ ನಾಯಕ ಶೆಟ್ಟರ್‌ಗೆ ಬಿಜೆಪಿಯಿಂದಾದ ಅವಮಾನ ಯಾವ ನಾಯಕನಿಗೂ ಆಗದಿರಲಿ: ಸಿದ್ದು

ಅದಾದ ಬಳಿಕ ಹೆಚ್‍ಡಿಡಿ ಅವರಿಂದ ಬಿ. ಫಾರಂ ಪಡೆದರು. ಚುನಾವಣೆಯಲ್ಲಿ ಗೆಲುವು ಸಾಧಿಸಲು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹಾಗೂ ಚೆನ್ನಮ್ಮರ ಆಶೀರ್ವಾದ ಪಡೆದರು. ನಿಖಿಲ್ ಕುಮಾರಸ್ವಾಮಿ ಬಿ ಫಾರಂ ಪಡೆಯುವ ವೇಳೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ಶಾಸಕಿ ಅನಿತಾ ಕುಮಾರಸ್ವಾಮಿ, ಹಾಗೂ ಪತ್ನಿ ರೇವತಿ ಭಾಗಿಯಾಗಿದ್ದರು. ಇದನ್ನೂ ಓದಿ: ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ – ಪೊಲಿಟಿಕಲ್ ಸೂಸೈಡ್ ಎಂದ ಸುಧಾಕರ್

Share This Article