ರಾಯ್ಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (RSS) ಯಾವುದೇ ಗ್ರಂಥ, ಗುರು ಇಲ್ಲ ಎಂದು ಶಂಕರಾಚಾರ್ಯ ಸ್ವಾಮಿ ನಿಶ್ವಲಾನಂದ ಸರಸ್ವತಿ (Shankaracharya Swami Nischalanand Saraswati) ಟೀಕಿಸಿದರು.
ಬೃಹತ್ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯ (BJP) ಸೈದ್ಧಾಂತಿಕ ಗುರುವಾದ ಆರ್‌ಎಸ್‍ಎಸ್ ವಿರುದ್ಧ ಕಿಡಿಕಾರಿದರು. ಆಧ್ಯಾತ್ಮಿಕ ನಾಯಕರ ಅನುಪಸ್ಥಿತಿಯಲ್ಲಿ ದಾರಿ ತಪ್ಪಿದ್ದಾರೆ ಎಂದು ಆರೋಪಿಸಿದರು.
ಆರ್‌ಎಸ್‍ಎಸ್‍ಗೆ ಯಾವುದೇ ಧರ್ಮಗ್ರಂಥದ ಬೆಂಬಲವಿಲ್ಲ, ಯಾವುದೇ ಗುರುವಿಲ್ಲ, ಐತಿಹಾಸಿಕ ಬೆಂಬಲ ಹೊಂದಿರುವ ನಾಯಕನೂ ಇಲ್ಲ. ಅದು ಗ್ರಂಥ, ಗುರು ಇಲ್ಲದೆ ಎಲ್ಲಿಗೆ ಹೋಗುತ್ತದೆ? ಅದು ಎಲ್ಲಿಗೆ ಹೋದರೂ ಅದು ಹಿಂತಿರುಗುತ್ತದೆ. ಇಲ್ಲೇ ಅಲೆದಾಡುತ್ತಿರಿ ಎಂದು ಆರ್‍ಎಸ್‍ಎಸ್ ವಿರುದ್ಧ ಕಿಡಿಕಾರಿದರು.
ರಾಜಕೀಯ ಮತ್ತು ಧರ್ಮದ ಪರಸ್ಪರ ಸಂಬಂಧದ ಕುರಿತು ಪ್ರತಿಕ್ರಿಯಿಸಿದ ಅವರು, ಮಿತಿ ಮೀರಿದ ರಾಜಕೀಯ ಎಂದಿಗೂ ಇಲ್ಲ. ಧರ್ಮ, ರಾಜಕೀಯ ಎಂದರೆ ರಾಜಧರ್ಮ. ಅವು ಒಂದಕ್ಕೊಂದು ಸಮಾನಾರ್ಥಕ ಪದಗಳು. ಮಠ-ಮಂದಿರಗಳ ಘನತೆಯನ್ನು ಕೆಡಿಸುವುದು ರಾಜಕೀಯವಲ್ಲ. ರಾಜಕೀಯದ ಹೆಸರಲ್ಲಿ ನಡೆಸುವ ಹುನ್ನಾರವಾಗಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನಕಲಿ ಔಷಧಗಳ ಹಾವಳಿ- 18 ಫಾರ್ಮಾ ಕಂಪನಿಗಳ ಪರವಾನಗಿ ರದ್ದು
ಹಿಂದೂಗಳು ಅಪಾಯದಲ್ಲಿದ್ದಾರೆ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಹಿಂದೂಗಳು ಅಪಾಯದಲ್ಲಿಲ್ಲ. ಹಿಂದೂ ಧರ್ಮವನ್ನು ನಂಬದವರು ಅಪಾಯದಲ್ಲಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಸುಧಾಕರ್ ನಾಮಪತ್ರ ಸಲ್ಲಿಕೆ