ಬಿಜೆಪಿ (BJP) ನಾಯಕಿ ಹಾಗೂ ನಟಿ ಶೃತಿ (Shruti) ವಿರುದ್ಧ ದೂರು (Complaint) ದಾಖಲಾಗಿದೆ. ಕಳೆದ ವಾರದ ಹಿಂದೆ ಹಿರೆಕೇರೂರಿನಲ್ಲಿ (Hirekerur) ನಡೆದ ಸಮಾವೇಶದಲ್ಲಿ ಅವರು ಮಾನಹಾನಿಯಾಗುವಂತಹ ಭಾಷಣ ಮಾಡಿದ್ದರು.
ನಟ ಹಾಗೂ ಮಾಜಿ ಸಚಿವ ಬಿ ಸಿ ಪಾಟೀಲ್ (BC Patil) ಪರ ಪ್ರಚಾರಕ್ಕೆ ಆಗಮಿಸಿದ್ದ ಶ್ರುತಿ, ಬಿಜೆಪಿ ಮಹಿಳಾ ಮೋರ್ಚಾ ಸಮಾವೇಶದಲ್ಲಿ ನಾಲಿಗೆಹರಿಬಿಟ್ಟಿದ್ದರು. ಪಕ್ಷ ಪಕ್ಷಗಳ ನಡುವೆ ವೈರತ್ವ, ದ್ವೇಷ, ಹಾಗೂ ಭಯ ಭೀತಿಯನ್ನುಂಟು ಮಾಡಿದ ಆರೋಪದ ಹಿನ್ನೆಲೆಯಲ್ಲಿ ಕಲಂ 505(2) ರಡಿ ಹಿರೆಕೇರೂರು ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ಇದನ್ನೂ ಓದಿ: ಬೋಲ್ಡ್ ಅವತಾರ ತಾಳಿದ ‘ಕಬ್ಜ’ ಸುಂದರಿ ಶ್ರೀಯಾ
ಶ್ರುತಿಯ ಭಾಷಣದ ಕುರಿತಾಗಿ ಹಿರೆಕೇರೂರು ನೋಡಲ್ ಅಧಿಕಾರಿ ಪಂಪಾಪತಿ ಎಂಬುವವರಿಂದ ದೂರು ನೀಡಿದ್ದರು. ಅಷ್ಟಕ್ಕೂ ಆ ಸಮಾವೇಶದಲ್ಲಿ ಶ್ರುತಿ, ‘ಮೇಜರ್ ಆಗಿ ರಾಜ್ಯದಲ್ಲಿ ಮೂರು ಪಕ್ಷಗಳಿವೆ. ಯಾವುದೇ ಬೇರೆ ಪಕ್ಷದ ಬಗ್ಗೆ ನಾನು ಜಾಸ್ತಿ ಮಾತನಾಡಲ್ಲ. ಆದರೆ ಒಂದೆ ಮಾತಿನಲ್ಲಿ ಹೇಳಿ ಮುಗಿಸಿಬಿಡ್ತೇನಿ. ನಿಮ್ಮ ವಂಶ ಬಿಟ್ಟು ಬೇರೆಯವರ ವಂಶ ಅಭಿವೃದ್ದಿ ಆಗಬೇಕಾದ್ರೆ ಜೆಡಿಎಸ್ ಗೆ ಮತ ಹಾಕಿ. ನಿಮ್ಮ ವಂಶ ಬಿಟ್ಟು ಹೊರದೇಶದ ವಂಶ ಅಭಿವೃದ್ಧಿ ಆಗಬೇಕಾದ್ರೆ ಕಾಂಗ್ರೇಸ್ ಗೆ ಮತ ಹಾಕಿ. ಭಾರತದಲ್ಲಿ ಭಾರತೀಯರ ವಂಶ ಅಭಿವೃದ್ಧಿ ಆಗಬೇಕಾದ್ರೆ ಭಾರತೀಯ ಜನತಾ ಪಾರ್ಟಿ ಗೆ ಮತ ಹಾಕಿ ಎಂದು ವ್ಯಂಗ್ಯ ಮಾಡಿದ್ದರು.
ಕೈ- ದಳ ಪಕ್ಷದ ಕುಟುಂಬ ರಾಜಕಾರಣ ಕುರಿತು ಅಪಹಾಸ್ಯ ಮಾಡಿದ ಹಿನ್ನೆಲೆಯಲ್ಲಿ ದೂರು ದಾಖಲಾಗಿತ್ತು. ದೂರು ಸ್ವೀಕರಿಸಿರುವ ಹಿರೆಕೇರೂರು ಪೊಲೀಸರು ಶ್ರುತಿ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ.