ರಣಬೀರ್ ಕಪೂರ್ ನರಕಕ್ಕೆ ಹೋಗಲಿ : ಸಿಟ್ಟಾದ ಉರ್ಫಿ ಜಾವೇದ್

Public TV
2 Min Read
ranbir kapoor and urfi

ಸಿಕ್ಕಿದ್ದೆಲ್ಲವನ್ನೂ ಬಟ್ಟೆ ಮಾಡಿಕೊಂಡು ಧರಿಸುವ ಬಿಗ್ ಬಾಸ್ ಹಿಂದಿ ಮಾಜಿ ಸ್ಪರ್ಧಿ ಉರ್ಫಿ ಜಾವೇದ್ (Urfi Javed, ), ಬಾಲಿವುಡ್ ನ ಖ್ಯಾತ ನಟ ರಣಬೀರ್ ಕಪೂರ್ (Ranbir Kapoor) ಮೇಲೆ ಗರಂ ಆಗಿದ್ದಾರೆ. ತನ್ನ ಮೇಲೆ ಕಾಮೆಂಟ್ ಮಾಡಿದ್ದಕ್ಕಾಗಿ ರಣಬೀರ್ ನರಕಕ್ಕೆ ಹೋಗಲಿ ಎಂದು ಶಾಪ ಹಾಕಿದ್ದಾರೆ. ಸಿಟ್ಟುಮಾಡಿಕೊಂಡು ಆಡಿರುವ ಮಾತುಗಳು ವೈರಲ್ ಆಗಿವೆ.

Urfi Javed 4

ಸಂದರ್ಶನವೊಂದರಲ್ಲಿ ಉರ್ಫಿ ಜಾವೇದ್ ಕಾಸ್ಟ್ಯೂಮ್ ಬಗ್ಗೆ ಮಾತನಾಡಿದ್ದ ರಣಬೀರ್ ಕಪೂರ್, ‘ಆಕೆಯದ್ದು ಅತೀ ಕೆಟ್ಟ ಟೇಸ್ಟು. ಬಟ್ಟೆ ಧರಿಸುವ ಕ್ರಮ ಸರಿಯಾಗಿಲ್ಲ’ ಎಂದು ಮಾತನಾಡಿದ್ದರು. ಈ ಮಾತು ಉರ್ಫಿಗೆ ಹಿಡಿಸಿದಂತೆ ಕಾಣುತ್ತಿಲ್ಲ. ಹಾಗಾಗಿಯೇ ರಣಬೀರ್ ಮೇಲೆ ಮುಗಿ ಬಿದ್ದಿದ್ದಾರೆ. ನನ್ನ ಬಗ್ಗೆ ಕೆಟ್ಟ ಮಾತುಗಳನ್ನು ಆಡುವ ಅವರು ನರಕಕ್ಕೆ ಹೋಗಲಿ ಎಂದು ಹಿಡಿ ಶಾಪ ಹಾಕಿದ್ದಾರೆ. ಇದನ್ನೂ ಓದಿ: ಬಾಯ್‌ಫ್ರೆಂಡ್ ಜೊತೆಗಿನ ಫೋಟೋ ಹಂಚಿಕೊಂಡ ‘ಬಿಗ್ ಬಾಸ್’ ದಿವ್ಯಾ ಸುರೇಶ್

Urfi Javed 3

ಈ ಉರ್ಫಿ ಉರಿದುಕೊಳ್ಳುತ್ತಿರುವುದು ಮೊದಲೇನೂ ಅಲ್ಲ. ಈ ಹಿಂದೆ ಖಾನ್ ಗಳ (Khan) ವಿಚಾರದಲ್ಲಿ ಕಂಗನಾ ಟ್ವೀಟ್ ವೊಂದನ್ನು ಮಾಡಿದ್ದರು. ಅದರಲ್ಲಿ ಈ ದೇಶವು ಎಲ್ಲ ಖಾನ್ ಗಳನ್ನು ಮಾತ್ರ ಪ್ರೀತಿಸುತ್ತದೆ ಎಂದು ಬರೆದುಕೊಂಡಿದ್ದರು. ಅಲ್ಲದೇ, ಮುಸ್ಲಿಂ ನಟಿಯರ ಮೇಲೆ ಗೀಳನ್ನು ಅದು ಹೊಂದಿದೆ ಎಂದೂ ಬರೆದುಕೊಂಡಿದ್ದರು. ಈ ಬರಹ ಉರ್ಫಿಗೆ ಇಷ್ಟವಾಗಿರಲಿಲ್ಲವಂತೆ. ಹಾಗಾಗಿ ಕಂಗನಾಗೆ ತಿರುಗೇಟು ನೀಡಿದ್ದ ಉರ್ಫಿ, ‘ಮುಸ್ಲಿಂ ನಟ, ಹಿಂದು ನಟ ಅಂತ ವಿಂಗಡಣೆ ಏಕೆ? ಕಲೆಯಲ್ಲಿ ಧರ್ಮವಿಲ್ಲ. ಕಲಾವಿದರ ಮಾತ್ರ ಇರುತ್ತಾರೆ’ ಎಂದು ಮಾರ್ಮಿಕವಾಗಿ ಉತ್ತರಿಸಿದ್ದರು.

Urfi Javed

ಉರ್ಫಿಯ ಈ ಮಾತು ಕಂಗನಾ ಕಣ್ಣುಗಳನ್ನು ಕೆಂಪಾಗಿಸಿದ್ದವು. ಹಾಗಾಗಿಯೇ ಅವರು ಏಕರೂಪ ನಾಗರಿಕ ಸಂಹಿತೆಯ ಪಾಠ ಮಾಡಿದ್ದರು. ಬಟ್ಟೆಯ ವಿಚಾರವನ್ನೂ ಅವರು ಹೇಳಿದ್ದರು. ಏಕರೂಪದ ಬಗ್ಗೆ ಕೆಟ್ಟ ಐಡ್ಯಾ, ನಾನು ಬಟ್ಟೆಯಿಂದಲೇ ಜನಪ್ರಿಯಳಾದವಳು ಎಂದು ಉರ್ಫಿ ಉತ್ತರಿಸಿದ್ದರು. ಈ ಮಾತೇ ಕಂಗನಾ ಅವರಿಗೆ ಅಕ್ಕಮಹಾದೇವಿಯನ್ನು ನೆನಪಿಸುವುದಕ್ಕೆ ಕಾರಣವಾಗಿದೆ.

urfi javed

ಅಕ್ಕಮಹಾದೇವಿಯ ಉದಾಹರಣೆಯನ್ನು ಕೊಡುತ್ತಾ, ‘ಅಕ್ಕ ಮಹಾದೇವಿ ಭಾರತದಲ್ಲಿ ರಾಣಿ ಆಗಿದ್ದವರು. ಅವರಿಗೆ ಭಗವಂತನ ಮೇಲೆ ಅತೀವ ಪ್ರೀತಿ. ನೀನು ಭಗವಂತನನ್ನೇ ಪ್ರೀತಿಸುವುದಾದರೆ, ನನ್ನಿಂದ ಯಾವುದನ್ನೂ ನೀನು ತಗೆದುಕೊಂಡು ಹೋಗಬಾರದು ಎಂದು ಗಂಡ ತಾಕೀತು ಮಾಡುತ್ತಾನೆ. ಆಕೆ ವಿವಸ್ತ್ರಳಾಗಿ ಅಲ್ಲಿಂದ ಹೊರಡುತ್ತಾಳೆ. ಯಾವತ್ತೂ ಆಕೆ ಬಟ್ಟೆ ತೊಡಲಿಲ್ಲ. ಮಹಾದೇವಿ ತುಂಬಾ ಶ್ರೇಷ್ಠಳು. ನೀನೂ ಕೂಡ ದೇಹದ ಬಗ್ಗೆ ನಿಂದಿಸಲು ಯಾರಿಗೂ ಬಿಡಬೇಡ. ನೀನು ದೈವಾಶಂವನ್ನು ಹೊಂದಿದವಳು’ ಎಂದು ಉರ್ಫಿಯನ್ನು ಹೋಲಿಸಿ ಟ್ವಿಟ್ ಮಾಡಿದ್ದಾಳೆ. ಉರ್ಫಿ ಜಾವೇದ್ ಗೂ ಮತ್ತು ಅಕ್ಕಮಹಾದೇವಿಗೂ ಹೋಲಿಕೆ ಎಷ್ಟರ ಮಟ್ಟಿಗೆ ಸರಿ ಎನ್ನುವ ಚರ್ಚೆ ಕೂಡ ಈಗ ನಡೆದಿದೆ.

Share This Article