ರಾಜಕೀಯ ಭವಿಷ್ಯವೇ ಬದಲಿಸಿದ ಒಂದೇ ಒಂದು ಮತ!

Public TV
2 Min Read
MYSURU ELECTION

ಮೈಸೂರು: ಪ್ರಜಾತಂತ್ರ ವ್ಯವಸ್ಥೆಯಲ್ಲಿ ಒಂದೊಂದು ಮತವೂ ಮುಖ್ಯ. ಒಂದೇ ಒಂದು ಮತ ಗೆದ್ದ ವ್ಯಕ್ತಿಯ ರಾಜಕೀಯ ದಿಕ್ಕನ್ನೇ ಬದಲಿಸಿದರೆ! ಸೋತ ವ್ಯಕ್ತಿ ಈವರೆಗೆ ರಾಜಕೀಯವಾಗಿ ಮೇಲೆಳಲು ಆಗಿಲ್ಲ ಎಂದರೆ ನಂಬುತ್ತಿರಾ? ನೀವು ನಂಬಲೇಬೇಕು. ಇಂತಹ ಪ್ರಕರಣ ಅವಿಭಜಿತ ಮೈಸೂರು ಜಿಲ್ಲೆಯ ಸಂತೇಮರಹಳ್ಳಿ ವಿಧಾನಸಭಾ ಕ್ಷೇತ್ರ (Vidhanasabha Constituency) ದಲ್ಲಿ 2004 ರಲ್ಲಿ ಜರುಗಿದೆ.

ಸಂತೇಮರಹಳ್ಳಿ ಪ. ಜಾತಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಮೈಸೂರು ಭಾಗದ ಹಿರಿಯ ರಾಜಕಾರಣಿ ಬಿ. ರಾಚಯ್ಯ ಅವರು ಸತತವಾಗಿ ಆಯ್ಕೆಯಾಗುತ್ತಿದ್ದರು. 1989ರ ಚುನಾವಣೆಯಲ್ಲಿ ತಮ್ಮ ಮಗ ಎ.ಆರ್. ಕೃಷ್ಣಮೂರ್ತಿ (A R Krishna Murthy) ಗೆ ಜನತಾದಳ ಟಿಕೆಟ್ ಕೊಡಿಸಿದರು. ಆದರೆ ಆ ಚುನಾವಣೆಯಲ್ಲಿ ಗೆದ್ದಿದ್ದು ಮಾತ್ರ ಕಾಂಗ್ರೆಸ್‍ನ ಕೆ. ಸಿದ್ದಯ್ಯ, ನಂತರ 1994 ರಲ್ಲಿ ಜನತಾದಳ, 1999 ರಲ್ಲಿ ಜೆಡಿಯು (JDU) ಟಿಕೆಟ್ ಮೇಲೆ ಕೃಷ್ಣಮೂರ್ತಿ ಸತತ ಎರಡು ಬಾರಿ ಆ ಕ್ಷೇತ್ರದಿಂದ ಆಯ್ಕೆಯಾದರು. 1999 ರಲ್ಲಿ ಜೆಡಿಯು ಹಾಗೂ ಬಿಜೆಪಿ (BJP) ನಡುವೆ ಸ್ಥಾನ ಹೊಂದಾಣಿಕೆಯಾಗಿತ್ತು. ಆದರೂ ಈ ಕ್ಷೇತ್ರದಲ್ಲಿ ಜೆಡಿಯುನಿಂದ ಎ.ಆರ್. ಕೃಷ್ಣಮೂರ್ತಿ, ಬಿಜೆಪಿಯಿಂದ ಧ್ರುವನಾರಾಯಣ ಅಭ್ಯರ್ಥಿಗಳಾಗಿದ್ದರು. ಕೃಷ್ಣಮೂರ್ತಿ ಅವರು 33,977 ಮತಗಳನ್ನು ಪಡೆದು, 28,071 ಮತಗಳನ್ನು ಪಡೆದ ಧ್ರುವನಾರಾಯಣ ಅವರನ್ನು ಸೋಲಿಸಿದರು. ಇದನ್ನೂ ಓದಿ: ರಾಷ್ಟ್ರ ರಾಜಕಾರಣಕ್ಕೆ ಹೋಗಲು ಯತ್ನಿಸಿ ಸೋತರು; ರಾಜ್ಯ ರಾಜಕಾರಣದಲ್ಲೇ ಗೆಲುವು ಕಂಡರು!

dhruvanarayana

ಧ್ರುವನಾರಾಯಣ (DhruvaNarayan) ಮೂಲತಃ ಕಾಂಗ್ರೆಸ್ಸಿಗರು. ರಾಜ್ಯ ಹಾಗೂ ಕೇಂದ್ರದಲ್ಲಿಯ ಇತಿಹಾಸ ಸಚಿವರಾಗಿದ್ದ ದಿವಂಗತ ಎಂ. ರಾಜಶೇಖರಮೂರ್ತಿ ಅವರ ಕಟ್ಟಾ ಬೆಂಬಲಿಗರು, ಹೀಗಾಗಿ ಅವರು ಮೂರ್ತಿ ಅವರೊಂದಿಗೆ ಬಿಜೆಪಿಗೆ ಹೋಗಿದ್ದರು. 2004ರ ಚುನಾವಣೆ ವೇಳೆಗೆ ಧ್ರುವನಾರಾಯಣ ಕಾಂಗ್ರೆಸ್ಸಿಗೆ ಮರಳಿದ್ದರು. ಆ ಚುನಾವಣೆಯಲ್ಲಿ ಅವರು ಸಂತೇಮರಹಳ್ಳಿಯಿಂದ ಕಾಂಗ್ರೆಸ್ ಅಭ್ಯರ್ಥಿ. ಎ.ಆರ್. ಕೃಷ್ಣಮೂರ್ತಿ ಜೆಡಿಎಸ್ (JDS) ಅಭ್ಯರ್ಥಿ. ಮತದಾನಕ್ಕೆ ಎಲೆಕ್ಟ್ರಾನಿಕ್ ಮತಯಂತ್ರ ಬಳಕೆಯಾಗಿತ್ತು. ಮತ ಎಣಿಕೆ ನಡೆದಾಗ ಧ್ರುವನಾರಾಯಣ ಅವರಿಗೆ 19,752 ಮತ್ತು ಕೃಷ್ಣಮೂರ್ತಿ ಅವರಿಗೆ 19,751 ಮತಗಳು ಬಂದವು. ಇದನ್ನೂ ಓದಿ: ಒಂದು ಕಾಲದಲ್ಲಿ ನಿವೃತ್ತರ ಸ್ವರ್ಗ – ಈಗ ನಿವೃತ್ತರಿಗೇ ಇಲ್ಲ ಅಧಿಕಾರ!

congress

ಮರು ಎಣಿಕೆ ಮಾಡಿದರೂ ಅಷ್ಟೇ. ಕೇವಲ ಒಂದೇ ಒಂದು ಮತದಿಂದ ಧ್ರುವನಾರಾಯಣ ಗೆದ್ದರು. ಕೃಷ್ಣಮೂರ್ತಿ ಸೋತರು. ಒಂದೇ ಒಂದು ಮತದಿಂದ ಗೆದ್ದ ಧೃವನಾರಾಯಣ ಎರಡು ಬಾರಿ ಶಾಸಕರು ಎರಡು ಬಾರಿ ಸಂಸದರು ಆಗಿದ್ದರು. ಆದರೆ ಒಂದು ಮತದಿಂದ ಸೋತಿದ್ದ ಎ.ಆರ್. ಕೃಷ್ಣಮೂರ್ತಿ ರಾಜಕೀಯವಾಗಿ ಮೇಲೆ ಏಳುವುದಕ್ಕೆ ಆಗದಷ್ಟು ಸಾಲು ಸಾಲು ಸೋಲು ಕಂಡರು. ಇದನ್ನೂ ಓದಿ: 12 ಚುನಾವಣೆಗಳಲ್ಲಿ ಒಂದೇ ಕುಟುಂಬದವರ ಆಯ್ಕೆ – ಎನ್.ಆರ್‌. ಕ್ಷೇತ್ರದಲ್ಲಿ ಸೇಠ್ ಫ್ಯಾಮಿಲಿ ಅಧಿಪತ್ಯ!

Share This Article