ಮಡಿಕೇರಿ: ಕಾಡಾನೆಯೊಂದು (Wild Elephant) ದಾಳಿ ಮಾಡಿ ಮನೆಮುಂದೆ ನಿಲ್ಲಿಸಿದ್ದ ಕಾರನ್ನು (Car) ಹೆದ್ದಾರಿಗೆ ತಳ್ಳಿಕೊಂಡು ಬಂದಿರುವ ಘಟನೆ ಕುಶಾಲನಗರ (Kushalnagara) ತಾಲೂಕಿನ ಸುಂಟಿಕೊಪ್ಪ (Suntikoppa) ಸಮೀಪದ 7ನೇ ಹೊಸಕೋಟೆಯ ಮೆಟ್ನಳ್ಳದಲ್ಲಿ ನಡೆದಿದೆ.
ಶನಿವಾರ ಮುಂಜಾನೆ 4:30ರ ಸುಮಾರಿಗೆ ಈ ಘಟನೆ ನಡೆದಿದ್ದು, ಮೆಟ್ನಳ್ಳದ ರಾಷ್ಟ್ರೀಯ ಹೆದ್ದಾರಿ (National Highway) ಬದಿಯ ಮನೆಯ ಸಮೀಪದ ಖಾಲಿ ಜಾಗದಲ್ಲಿ ಸ್ವಿಫ್ಟ್ ಮತ್ತು ಸ್ಯಾಂಟ್ರೋ ಕಾರುಗಳು ನಿಲುಗಡೆಗೊಳಿಸಲಾಗಿತ್ತು. ಮೊದಲು ಕಾಡಾನೆ ಸ್ಯಾಂಟ್ರೋ ಕಾರಿನ ಮೇಲೆರಗಿದೆ. ನಂತರ ಸಾನಿಪ್ ಎಂಬವರ ಸ್ವಿಫ್ಟ್ ಕಾರಿನ ಮೇಲೆ ದಾಳಿ (Attack) ಮಾಡಿ ಹೆದ್ದಾರಿವರೆಗೆ ತಳ್ಳಿಕೊಂಡು ಬಂದಿದೆ. ಬಳಿಕ ಕಾರನ್ನು ಅಲ್ಲಿಯೇ ಬಿಟ್ಟು ಕಾಡಾನೆ ಅಲ್ಲಿಂದ ಕಾಲ್ಕಿತ್ತಿದೆ. ಇದರಿಂದಾಗಿ ಕಾರಿಗೆ ಸಣ್ಣಪುಟ್ಟ ಡ್ಯಾಮೇಜ್ ಆಗಿದೆ. ಇದನ್ನೂ ಓದಿ: ಕುಖ್ಯಾತ ಮನೆಗಳ್ಳರ ಅರೆಸ್ಟ್ – 20 ಲಕ್ಷ ಮೌಲ್ಯದ ವಸ್ತುಗಳು ಜಪ್ತಿ
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿ ಕಾರಿನ ಮಾಲಿಕರಿಗೆ ಪರಿಹಾರಕ್ಕೆ ಅರ್ಜಿ ಹಾಕುವಂತೆ ಹೇಳಿ ತೆರಳಿದ್ದಾರೆ. ಇದನ್ನೂ ಓದಿ: ಮತದಾರರಿಗೆ ಗಿಫ್ಟ್ ಆಮಿಷ ಆರೋಪ – ಕಾಂಗ್ರೆಸ್ ಅಭ್ಯರ್ಥಿ ಕುಸುಮಾ, ಡಿ.ಕೆ ಸುರೇಶ್ ವಿರುದ್ಧ ಕೇಸ್