ಬಾಲಿವುಡ್ (Bollywood) ನಿರ್ಮಾಪಕ ಕರಣ್ ಜೋಹರ್ (Karan Johar) ಅವರು ಈಗಾಗಲೇ ಸಾಕಷ್ಟು ಟೀಕೆಗಳನ್ನ ಎದುರಿಸುತ್ತಿದ್ದಾರೆ. ನೆಪೋಟಿಸಂ ವಿಷ್ಯ ಸೇರಿದಂತೆ ಹಲವು ವಿಚಾರಗಳಿಗೆ ಕರಣ್ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೀಗ ಪ್ರಿಯಾಂಕಾ ಚೋಪ್ರಾ ವಿವಾದದ ಬೆನ್ನಲ್ಲೇ ಅನುಷ್ಕಾ ಶರ್ಮಾ (Anushka Sharma) ಸಿನಿಮಾ ಕೆರಿಯರ್ (Career) ನಾಶ ಮಾಡಿಬಿಡುತ್ತಿದ್ದೆ ಎಂದು ಸಂದರ್ಶನವೊಂದರಲ್ಲಿ ಕರಣ್ ಜೋಹರ್ ಒಪ್ಪಿಕೊಂಡಿದ್ದಾರೆ.
Rab Ne Bana Di Jodi ಸಿನಿಮಾ 2008ರಲ್ಲಿ ಸೂಪರ್ ಡೂಪರ್ ಹಿಟ್ ಆಗಿತ್ತು. ಶಾರುಖ್ ಖಾನ್- ಅನುಷ್ಕಾ ಶರ್ಮಾ ಜೋಡಿ ತೆರೆಯ ಮೇಲೆ ಮೋಡಿ ಮಾಡಿತ್ತು. ಆದರೆ ತೆರೆಯ ಹಿಂದೆ, ಈ ಸಿನಿಮಾ ಶೂಟಿಂಗ್‌ಗಿಂತ ಮುಂಚೆ ನಿರ್ದೇಶಕ ಆದಿತ್ಯಾ ಚೋಪ್ರಾಗೆ ತಮ್ಮ ಸಿನಿಮಾದಿಂದ ಅನುಷ್ಕಾರನ್ನು ಕೈ ಬಿಡುವಂತೆ ಸಲಹೆ ನೀಡಿದ್ದನ್ನು ಒಪ್ಪಿಕೊಂಡಿದ್ದಾರೆ. ಈ ಚಿತ್ರಕ್ಕೆ ಅನುಷ್ಕಾ ಬೇಡ ಎಂದಿದ್ದೇಕೆ? ಬೇರೆ ಯಾವ ನಟಿಯ ಹೆಸರನ್ನು ಸೂಚಿಸಿದ್ದರು? ಅಸಲಿ ವಿಚಾರವೇನು ಎಂಬುದನ್ನ ಕರಣ್ ಜೋಹರ್ ಬಾಯ್ಬಿಟ್ಟಿದ್ದಾರೆ.
ನಿರ್ದೇಶಕ ಆದಿತ್ಯ ಚೋಪ್ರಾ ‘ರಬ್ ನೆ ಬನಾ ದಿ ಜೋಡಿ’ ಸಿನಿಮಾ ಮಾಡಲು ಹೊರಟಿದ್ದರು. ಶಾರುಖ್ ಖಾನ್‌ಗೆ (Sharukh Khan) ಲೀಡ್ ರೋಲ್‌ಗೆ ಆಯ್ಕೆ ಮಾಡಲಾಗಿತ್ತು. ಇತ್ತ ಹೀರೊಯಿನ್ ಹುಡುಕಾಟ ನಡೆಯುತ್ತಿತ್ತು. ಈ ವೇಳೆ ಆದಿತ್ಯ ಚೋಪ್ರಾ, ಕರಣ್ ಬಳಿ ಅನುಷ್ಕಾ ಶರ್ಮಾ ಫೋಟೊ ತೋರಿಸಿ ಅಭಿಪ್ರಾಯ ಕೇಳಿದ್ದರು. ಆಗ ಕರಣ್ ಮತ್ತೊಬ್ಬ ನಟಿ ಸೋನಮ್ ಕಪೂರ್ (Sonam Kapoor) ಹೆಸರನ್ನು ಸೂಚಿಸಿದ್ದರು. ಇದನ್ನೂ ಓದಿ:ರಾಜಕೀಯಕ್ಕೆ ಶುಭಾ ಪೂಂಜಾ ಎಂಟ್ರಿ ಕೊಡ್ತಾರಾ? ಸ್ಪಷ್ಟನೆ ನೀಡಿದ ನಟಿ
ಬೇಡ ಬೇಡ.. ಅನುಷ್ಕಾರನ್ನ ಸಿನಿಮಾಗೆ ಹಾಕಿಕೊಳ್ಳೋಕೆ ಹುಚ್ಚು ಹಿಡಿದಿದೆಯಾ? ಈ ಸಿನಿಮಾಗಾಗಿ ಅನುಷ್ಕಾ ಜೊತೆ ಒಪ್ಪಂದ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದ್ದೆ ಈ ಬಗ್ಗೆ ಕರಣ್ ಜೋಹರ್ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದಾರೆ. ಈ ಮೂಲಕ ಅನುಷ್ಕಾ ಶರ್ಮಾ ಸಿನಿಮಾ ಬದುಕು ನಾಶವಾಗುತ್ತಿತ್ತು ಎಂದು ಮಾತನಾಡಿದ್ದಾರೆ. ರಿಲೀಸ್ ಸಮಯದಲ್ಲಿ ಒಲ್ಲದ ಮನಸ್ಸಿನಿಂದ ಸಿನಿಮಾ ನೋಡಿದ್ದೆ, ಆ ಚಿತ್ರದ ಯಶಸ್ಸನ್ನ ತಡೆಯಲಾಗಲಿಲ್ಲ. ಈ ವಿಚಾರವಾಗಿ ಅನುಷ್ಕಾ ಬಳಿ ಕ್ಷಮೆಯಾಚಿಸುತ್ತೇನೆ ಎಂದು ಕರಣ್ ಜೋಹರ್ ಹೇಳಿದ್ದಾರೆ.
‘ರಬ್ ನೆ ಬನಾ ದಿ ಜೋಡಿ’ ಸಿನಿಮಾ ಬಳಿಕ ‘ಬ್ಯಾಂಡ್ ಬಾಜಾ ಬಾರಾತ್’ ಚಿತ್ರದಲ್ಲಿ ಅನುಷ್ಕಾ ಶರ್ಮಾ ನಟನೆ ನೋಡಿ ಮೆಚ್ಚಿಕೊಂಡರು. ಮುಂದೆ ತಮ್ಮದೇ ನಿರ್ಮಾಣದ ‘ಏ ದಿಲ್ ಹೇ ಮುಷ್ಕಿಲ್’ ಚಿತ್ರಕ್ಕೆ ಅನುಷ್ಕಾ ಶರ್ಮಾರನ್ನ ನಾಯಕಿಯಾಗಿ ಆಯ್ಕೆ ಮಾಡಿಕೊಂಡರು. ರಣ್‌ಬೀರ್ ಕಪೂರ್, ಐಶ್ವರ್ಯ ರೈ ಜೊತೆ ಅನುಷ್ಕಾ ಶರ್ಮಾ ಅದ್ಭುತವಾಗಿ ನಟಿಸಿದರು.