ರಾಹುಲ್‌ ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್ ಎಂದಿಗೂ ಉದ್ಧಾರವಾಗದು: ಗುಲಾಂ ನಬಿ ಆಜಾದ್

Public TV
1 Min Read
rahul gandhi ghulam nabi azad

ನವದೆಹಲಿ: ರಾಹುಲ್‌ ಗಾಂಧಿ (Rahul Gandhi) ನಾಯಕತ್ವದಲ್ಲಿ ಕಾಂಗ್ರೆಸ್ (Congress) ಪಕ್ಷ ಎಂದಿಗೂ ಉದ್ಧಾರವಾಗದು ಎಂದು ಮಾಜಿ ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್ (Ghulam Nabi Azad ) ಹೇಳಿದ್ದಾರೆ.

ಗುಲಾಂ ನಬಿ ಆಜಾದ್ ತಮ್ಮ ರಾಜಕೀಯ ಜೀವನದ ಬಗ್ಗೆ ಬರೆದಿರುವ ‘ಆಜಾದ್’ ಕೃತಿಯಲ್ಲಿಯೂ ರಾಹುಲ್ ಗಾಂಧಿ ನಾಯಕತ್ವವನ್ನು ಟೀಕಿಸಿದ್ದಾರೆ.ರಾಹುಲ್ ಗಾಂಧಿ ನಾಯಕನೇ ಅಲ್ಲ. ಅವರಿಗೆ ಜನ ಬೆಂಬಲವಿಲ್ಲ. ಬಾಯಿ ಮುಚ್ಚಿ ಕುಳಿತವರಿಗೆ ಮಾತ್ರ ಪಕ್ಷದಲ್ಲಿ ಸ್ಥಾನ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಶಾಸಕನ ಫೋಟೋವಿದ್ದ ಅಂಬುಲೆನ್ಸ್ ಸೀಜ್ – ಕೇಸ್ ದಾಖಲು

Ghulam Nabi Azad

ನಾನು ಸೇರಿದಂತೆ ಇಂದು ಹಲವು ಹಿರಿಯ ಮತ್ತು ಯುವ ರಾಜಕಾರಣಿಗಳು ಕಾಂಗ್ರೆಸ್‌ನಲ್ಲಿ ಇಲ್ಲದಿರುವುದಕ್ಕೆ ರಾಹುಲ್ ಗಾಂಧಿಯೇ ಮುಖ್ಯ ಕಾರಣ. 2013ರಲ್ಲಿ ಯುಪಿಎ ಸರ್ಕಾರ (UPA Government) ತಂದಿದ್ದ ಸುಗ್ರೀವಾಜ್ಞೆಯನ್ನು (Oridance) ರಾಹುಲ್ ಗಾಂಧಿ ವಿರೋಧಿಸದೇ ಇದ್ದಿದ್ದರೆ ಅವರು ಸಂಸದ ಸ್ಥಾನದಿಂದ ಅನರ್ಹಗೊಳ್ಳುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇಂದಿರಾ ಗಾಂಧಿ, ರಾಜೀವ್‌ ಗಾಂಧಿ ಅವರ ಆಡಳಿತವನ್ನು ಮೆಚ್ಚಿಕೊಂಡ ಅಜಾದ್‌, ಇಂದಿರಾ, ರಾಜೀವ್‌ ಅವರು ಮಾಡಿದ ಕೆಲಸಗಳ ಪೈಕಿ 1/50 ಮಾಡಿದರೆ ರಾಹುಲ್‌ ಗಾಂಧಿ ಉದ್ಧರವಾಗಬಹುದು ಎಂದು ಹೇಳಿದರು.

ತನಿಖಾ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಪಕ್ಷದ ಹಿರಿಯ ನಾಯಕರು ಹಾಜರಾಗುವಾಗ ಸ್ವಯಂಪ್ರೇರಿತವಾಗಿ ನಾಯಕರು ಬರಬೇಕೇ ಹೊರತು ಕಡ್ಡಾಯವಾಗಿ ಹಾಜರಾಗಬೇಕೆಂದು ವಿಪ್‌ ಹೊರಡಿಸಬಾರದು. ಆದರೆ ಸೂರತ್‌ ನ್ಯಾಯಾಲಯಕ್ಕೆ ರಾಹುಲ್‌ ಹಾಜರಾಗುವಾಗ ನಾಯಕರು ಕಡ್ಡಾಯವಾಗಿ ಬರಬೇಕೆಂದು ವಿಪ್‌ ಜಾರಿಗೊಳಿಸಲಾಗಿತ್ತು. ಬೆನ್ನುಮೂಳೆ ಇಲ್ಲದ ಕಾಂಗ್ರೆಸ್‌ ನಾಯಕರಿಗೆ ಚಿಕಿತ್ಸೆ ನೀಡಲು ಮೂಳೆ ಚಿಕಿತ್ಸಕರ ಅಗತ್ಯವಿದೆ ಎಂದು ಗುಲಾಂ ನಬಿ ಆಜಾದ್ ಟಾಂಗ್‌ ನೀಡಿದರು.

Share This Article