ದಾವಣಗೆರೆ: ಮಹಿಳೆಯೊಂದಿಗೆ ಅಶ್ಲೀಲವಾಗಿ ವೀಡಿಯೋ ಮಾಡಿ ಬೆದರಿಸಿ (Honey trap) 1,50,000 ರೂ. ದೋಚಿದ್ದ ಆರೋಪಿಗಳನ್ನು ವಿದ್ಯಾನಗರ (Vidyanagar) ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ (Davanagere) ವಾಸಿಗಳಾದ ಹರೀಶ, ಚಂದ್ರು, ಗಂಗಾ ಹಾಗೂ ಗಿಡ್ಡ ಗಂಗಮ್ಮಳನ್ನು ಬಂಧಿಸಿ ಆರೋಪಿಗಳಿಂದ ಒಟ್ಟು 1,30,000 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಶಾಸಕ ಪ್ರೀಥಮ್ ಗೌಡರಿಂದ 100 ಕೋಟಿ ಗುಳುಂ- ಹೆಚ್.ಕೆ.ಮಹೇಶ್ ಆರೋಪ
ಆರೋಪಿ ಗಂಗಾ ದೂರುದಾರನಿಗೆ ಕರೆ ಮಾಡಿ ಮಿಸ್ ಕಾಲ್ (Miss Call) ಆಗಿದೆ ಎಂದು ಪರಿಚಯಿಸಿಕೊಂಡಿದ್ದಳು. ನಂತರ ಪ್ರತಿನಿತ್ಯ ಫೋನ್‌ನಲ್ಲಿ ಮಾತನಾಡಿ ಹಣ ಪಡೆದಿದ್ದಾಳೆ. ಬಳಿಕ ಗಂಗಾ, ಹರೀಶ, ಚಂದ್ರು, ಗಿಡ್ಡ ಗಂಗಮ್ಮ ಹಾಗೂ ಇನ್ನೊಬ್ಬ ಮಹಿಳೆ ಮತ್ತು ವ್ಯಕ್ತಿಯೋರ್ವನ ಜೊತೆ ಸೇರಿ ಒಳಸಂಚು ಮಾಡಿ ಮಾ.26 ರಂದು ದಾವಣಗೆರೆಗೆ ಬಂದಿದ್ದ ದೂರುದಾರನ್ನು ಊಟಕ್ಕೆ ಬರಬೇಕೆಂದು ಒತ್ತಾಯ ಮಾಡಿ ಸಿದ್ದವೀರಪ್ಪ ಬಡಾವಣೆಯ ಗಂಗಮ್ಮನ ಮನೆಗೆ ಕರೆಯಿಸಿಕೊಂಡಿದ್ದಾಳೆ. ಊಟ ಮುಗಿಸಿ ರೂಮ್‍ಗೆ ಕರೆದೊಯ್ದಿದ್ದಾಳೆ. ನಂತರ ಬೇರೆ ಅಡಗಿದ್ದ ಗ್ಯಾಂಗ್‍ನ ಸದಸ್ಯರು ಅವರಿದ್ದ ರೂಮ್‍ಗೆ ಹೋಗಿ ವೀಡಿಯೋ ಮಾಡಿ ಹೆದರಿಸಿದ್ದಾರೆ.
ಬಳಿಕ ಆರೋಪಿಗಳೆಲ್ಲ ಸೇರಿಕೊಂಡು ಹೆದರಿಸಿ 30 ಲಕ್ಷ ರೂ.ಗೆ ಬೇಡಿಕೆ ಇಟ್ಟು 1,50,000 ರೂ. ವಸೂಲಿ ಮಾಡಿದ್ದಾರೆ. ಅಲ್ಲದೆ ಗಂಗಮ್ಮ ಕೂಡ ಹೆದರಿಕೊಂಡಂತೆ ನಾಟಕವಾಡಿ ಹಣ ಕೊಟ್ಟುಬಿಡಿ ಎಂದು ಹೇಳಿದ್ದಾಳೆ. ಅಲ್ಲದೆ ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಕೊಲ್ಲುವುದಾಗಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ವಿದ್ಯಾನಗರ ಪೊಲೀಸರು ಪ್ರಕರಣದ ಬೆನ್ನು ಹತ್ತಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: 8 ಕ್ವಿಂಟಾಲ್ ಗೋಮಾಂಸವಿದ್ದ ಮೀನಿನ ವಾಹನ ಪಲ್ಟಿ