ಕರ್ನಾಟಕದ ನೆಲದಲ್ಲಿ ಆರೋಗ್ಯ ವಿಮೆ ಜಾರಿಯ ಹಿಂದೆ ಮಹಾರಾಷ್ಟ್ರ ಕುತಂತ್ರ

Public TV
1 Min Read
MAHARASHTRA INSURANCE copy

ಬೆಳಗಾವಿ: ಕರ್ನಾಟಕದ (Karnataka) ನೆಲದಲ್ಲಿ ಆರೋಗ್ಯ ವಿಮೆ (Health Insurance) ಜಾರಿಯ ಹಿಂದೆ ಮಹಾರಾಷ್ಟ್ರದ (Maharashtra) ಕುತಂತ್ರ ಅಡಗಿದೆಯಾ ಎಂಬ ಪ್ರಶ್ನೆ ಮೂಡಿದೆ. ಮಹಾರಾಷ್ಟ್ರ ಆರೋಗ್ಯ ವಿಮೆಯ ಲಾಭ ಪಡೆಯಬೇಕೆಂದರೆ ‘ನಾನು ಮರಾಠಾ ಭಾಷಿಕ’ ಎಂದು ಸ್ವಯಂ ಘೋಷಣಾ ಪತ್ರ ನೀಡಬೇಕೆಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ.

ಕಳೆದ ಎರಡು ದಿನಗಳ ಹಿಂದೆ ಮಹಾರಾಷ್ಟ್ರ ಸರ್ಕಾರ ಕರ್ನಾಟಕದ ಗಡಿ ಭಾಗದಲ್ಲಿರುವ 865 ಗ್ರಾಮಗಳ ಜನರಿಗೆ 54 ಕೋಟಿ ವೆಚ್ಚದ ಆರೋಗ್ಯ ವಿಮೆ ಘೋಷಿಸಿದೆ. ಬೆಳಗಾವಿ, ಬೀದರ್, ಕಲಬುರಗಿ, ಉತ್ತರ ಕನ್ನಡ ಜಿಲ್ಲೆಯ 865 ಹಳ್ಳಿ, ಪಟ್ಟಣಗಳ ಜನರಿಗಾಗಿ ಯೋಜನೆ ಜಾರಿ ಮಾಡಿದ್ದು, ನಾನು ಮರಾಠಾ ಭಾಷಿಕ ಎಂದು ಘೋಷಣಾ ಪತ್ರ ಸಲ್ಲಿಸಿದವರಿಗೆ ಮಾತ್ರ ಆರೋಗ್ಯ ವಿಮೆ ನೀಡಲು ಮಹಾರಾಷ್ಟ್ರ ನಿರ್ಧಾರ ಮಾಡಿದೆ. ಈಗಾಗಲೇ ಏಕನಾಥ ಶಿಂಧೆ (Eknath Shinde) ಸರ್ಕಾರ ಘೋಷಣಾ ಪತ್ರದ ಅರ್ಜಿಯನ್ನು ಬಿಡುಗಡೆ ಮಾಡಿದ್ದು, ಅರ್ಜಿ ಭರ್ತಿ ಮಾಡಿದವರಿಗೆ ಮಾತ್ರ ಮಹಾತ್ಮಾ ಜ್ಯೋತಿರಾವ್ ಫುಲೆ ಜನಾರೋಗ್ಯ ವಿಮೆಯ ಲಾಭ ಸಿಗಲಿದೆ. ಇದನ್ನೂ ಓದಿ: ಅಮಿತ್ ಶಾ ಸೂಚನೆಯನ್ನೇ ಧಿಕ್ಕರಿಸಿದ ಏಕನಾಥ ಶಿಂಧೆ  

Eknath Shinde 2

ಏಕನಾಥ ಶಿಂಧೆ ನಿರ್ಧಾರದ ಹಿಂದೆ ಜನರನ್ನು ಭಾವನಾತ್ಮಕವಾಗಿ ಮಹಾರಾಷ್ಟ್ರದತ್ತ ಸೆಳೆಯುವ ಹುನ್ನಾರ ಅಡಗಿದ್ದು, ಕೇವಲ ಮರಾಠಾ ಭಾಷಿಕರಷ್ಟೇ ಅಲ್ಲದೇ ಯಾವುದೇ ಭಾಷಿಕರೂ ‘ನಾನು ಮರಾಠಾ’ ಎಂಬ ಘೋಷಣಾ ಪತ್ರ ನೀಡಲು ಅವಕಾಶ ಕಲ್ಪಿಸಲಾಗಿದೆ. ಈ ಘೋಷಣಾ ಪತ್ರ ಸಂಗ್ರಹಿಸಿ ಮಹಾರಾಷ್ಟ್ರ ಪರ ದಾಖಲೆಗಳನ್ನು ಸೃಷ್ಟಿಸುವ ಒಳಸಂಚನ್ನು ಮಹಾರಾಷ್ಟ್ರ ಸರ್ಕಾರ ಮಾಡುತ್ತಿದೆ. ಕರ್ನಾಟದಲ್ಲಿ ನೆಲೆಸಿರುವ ಇತರ ಭಾಷಿಕರನ್ನು ಮರಾಠಾ ಭಾಷಿಕರೆಂದು ಪರಿವರ್ತಿಸುವ ಹುನ್ನಾರ ಮಾಡುತ್ತಿದ್ದು, ಈ ಎಲ್ಲ ಸ್ವಯಂ ಘೋಷಣಾ ಪತ್ರಗಳನ್ನು ಸುಪ್ರೀಂಕೋರ್ಟ್ ಗೆ (Supreme Court) ಸಲ್ಲಿಸಲು ಮಹಾರಾಷ್ಟ್ರ ಸರ್ಕಾರ ಹುನ್ನಾರ ನಡೆಸಿದೆ. ನಮ್ಮ ಯೋಜನೆ ಕರ್ನಾಟಕದ ಮರಾಠಾ ಭಾಷಿಕರು ಪಡೆಯುತ್ತಿದ್ದಾರೆ. ಕರ್ನಾಟಕ ಸರ್ಕಾರ ಮರಾಠಾ ಭಾಷಿಕರನ್ನು ಕಡೆಗಣಿಸುತ್ತಿದೆ ಎಂದು ಬಿಂಬಿಸುವ ಕುತಂತ್ರವನ್ನು ಮಹಾರಾಷ್ಟ್ರ ಸರ್ಕಾರ ಮಾಡುತ್ತಿದೆ. ಇದನ್ನೂ ಓದಿ: ಸುದೀಪ್ ಬಿಜೆಪಿಗೆ ಬೆಂಬಲ – ಕಾಂಗ್ರೆಸ್‌ನವರಿಗೆ ಸಹಿಸೋಕಾಗ್ತಿಲ್ಲ: ಬಿಎಸ್‌ವೈ

Share This Article