ನಟ ಸುದೀಪ್ ಪ್ರಚಾರಕ್ಕೆ ಮಹತ್ವ ಕೊಡಬೇಕಿಲ್ಲ, ನಟರನ್ನ ನಾನು ದುರುಪಯೋಗಪಡಿಸಿಕೊಳ್ಳಲ್ಲ: ಹೆಚ್‌ಡಿಕೆ

Public TV
2 Min Read
HD Kumaraswamy 2

ಬೆಂಗಳೂರು: ನಟ ಸುದೀಪ್ (Kichcha Sudeepa) ಅವರು ಸಿಎಂ ಬೊಮ್ಮಾಯಿ (BasavarajBommai) ಪರ ಪ್ರಚಾರ ಮಾಡೋದ್ರಿಂದ ನಮಗೇನು ತೊಂದರೆ ಇಲ್ಲ. ಸುದೀಪ್‌ ಪ್ರಚಾರಕ್ಕೆ ಹೆಚ್ಚು ಮಹತ್ವ ಕೊಡಬೇಕಿಲ್ಲ ಅಂತಾ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ತಿಳಿಸಿದ್ದಾರೆ.

Kichcha Sudeepa

ನಟ ಸುದೀಪ್ ಬೆಂಬಲದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಹಿಂದಿನಿಂದಲೂ ವಿಶ್ವಾಸದ ಮೇಲೆ ಹಲವು ನಟರು ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಹೋಗ್ತಾರೆ, ಅದು ಮಾಮೂಲಿಯಾಗಿ ನಡೆಯುತ್ತಿದೆ. ಬೊಮ್ಮಾಯಿ ಮೇಲಿನ ವಿಶ್ವಾಸದಲ್ಲಿ ಸುದೀಪ್ ಪ್ರಚಾರ ಮಾಡ್ತೀನಿ ಅಂತಾ ಹೇಳಿದ್ದಾರೆ. ಇದು ಅವರ ನಡುವೆ ಇರುವ ವೈಯಕ್ತಿಕ ಸಂಬಂಧಗಳು. ಅದಕ್ಕೆ‌ ಹೆಚ್ಚು ಮಹತ್ವದ ಕೊಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಖಾಸಗಿ ವಿಡಿಯೋ ಲೀಕ್ ಬೆದರಿಕೆ ಪತ್ರ ಬರೆದದ್ದು ಚಿತ್ರರಂಗದವರೆ : ಸುದೀಪ್

ಬಿಜೆಪಿ ಅವರು ಅಭಿವೃದ್ಧಿ ಮಾಡುವುದರಲ್ಲಿ ವಿಫಲರಾಗಿದ್ದಾರೆ. ಈ ರೀತಿ ಮಾಡಿಯೇ ಚುನಾವಣೆಯಲ್ಲಿ ಮತ ಪಡೆಯೋಕೆ ಮುಂದಾಗಿದ್ದಾರೆ. ಇದ್ಯಾವುದೂ ವರ್ಕ್ ಆಗಲ್ಲ. ನಟರನ್ನ ನೋಡೋಕೆ ಜನ ಬರ್ತಾರೆ. ಅಭಿಮಾನಿಗಳು ಜೈಕಾರ ಹಾಕ್ತಾರೆ, ‌ಶಿಳ್ಳೆ ಹೊಡೆಯುತ್ತಾರೆ. ನಟರು ಅನೇಕರ ಪರ ಪ್ರಚಾರಕ್ಕೆ ಹೋಗ್ತಾರೆ. ಕಾಂಗ್ರೆಸ್ ಪರವೂ ಹೋಗ್ತಾರೆ, ಬಿಜೆಪಿಗೂ ಹೋಗ್ತಾರೆ. ಬೇರೆ ಬೇರೆ ಕಡೆ ಹೋಗ್ತಾರೆ. ನಟರಲ್ಲಿ ಸ್ಥಿರತೆ ಇಲ್ಲ. ವೈಯಕ್ತಿಕ ಬಾಂಧವ್ಯ, ಸ್ನೇಹದ ಮೇಲೆ ಹೋಗ್ತಾರೆ. ಆದ್ರೆ ಜನ ಅಂತಿಮವಾಗಿ ತೀರ್ಮಾನ ಮಾಡ್ತಾರೆ ಅಂತಾ ಹೇಳಿದ್ದಾರೆ.

ಜೆಡಿಎಸ್‌ಗೆ ಸ್ಟಾರ್ ಕ್ಯಾಂಪೇನ್ ನನ್ನ ಕಾರ್ಯಕರ್ತರು. ಪಂಚರತ್ನ ಯೋಜನೆಯೇ ಪಕ್ಷದ ಪ್ರಮುಖ ಆಕರ್ಷಣೆ. ಅ ಕಾರ್ಯಕ್ರಮ ಇಟ್ಟುಕೊಂಡು ಜನತೆ ಮುಂದೆ ಹೋಗ್ತೀನಿ. ಅಲ್ಲದೇ ಮುಖ್ಯಮಂತ್ರಿಗಳಾದ ಕೆ.ಚಂದ್ರಶೇಖರ ರಾವ್‌ ಮತ್ತು ಮಮತಾ ಬ್ಯಾನರ್ಜಿ ಅವರು ಕೆಲವು ಕಡೆ ಅವಶ್ಯಕತೆ ಇದ್ದರೆ ಪ್ರಚಾರಕ್ಕೆ ಬರ್ತೀನಿ ಅಂತಾ ಹೇಳಿದ್ದಾರೆ. ಮುಂದೆ ಅದನ್ನ ತೀರ್ಮಾನ ಮಾಡ್ತೀನಿ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: Breaking- ಬಿಜೆಪಿ ಪರವಾಗಿ ಪ್ರಚಾರಕ್ಕೆ ಹೊರಟ ಸುದೀಪ್ : ‘ಮಾಮಾ’ಗಾಗಿ ಇದೆಲ್ಲ ಎಂದ ಕಿಚ್ಚ

ನಾನು ಯಾವ ಚಿತ್ರ ನಟರನ್ನು ವಯಕ್ತಿಕವಾಗಿ ದುರುಪಯೋಗ ಪಡಿಸಿಕೊಳ್ಳಲ್ಲ. ಅವರು ಸಮಾಜದಲ್ಲಿ ಎಲ್ಲಾ ವರ್ಗಕ್ಕೆ ಸೇರಿದ ಚಿತ್ರನಟರು. ಅವರನ್ನ ಸ್ವಂತಕ್ಕೆ ದುರುಪಯೋಗ ಪಡಿಸಿಕೊಂಡು ಅವರ ಘನತೆ ಗೌರವವನ್ನ ಸ್ಥಿಮಿತ ಮಾಡೋಕೆ‌ ಇಷ್ಟಪಡಲ್ಲ. ನನ್ನ ಕಾರ್ಯಕರ್ತರೇ ಸ್ಟಾರ್ ಕ್ಯಾಂಪೇನ್ ಗಳು. ಅವರೇ ನಮ್ಮ ಪಕ್ಷದ ಪರ ಪ್ರಚಾರ ಮಾಡ್ತಿದ್ದಾರೆ. ಮುಂದೆಯೂ ಮಾಡ್ತಾರೆ ಎಂದಿದ್ದಾರೆ.

Share This Article