ಬಾಯ್‍ಫ್ರೆಂಡ್ ಬಿಡುವಂತೆ ಹೇಳಿದ ತಾಯಿಯನ್ನು ಕೊಲೆಗೈದ 14ರ ಮಗಳು!

Public TV
1 Min Read
RUSSIA MURDER

ಮಾಸ್ಕೋ: ಬಾಯ್‍ಫ್ರೆಂಡ್ (Boyfriend) ಜೊತೆ ಬ್ರೇಕಪ್ ಮಾಡಿಕೊಳ್ಳುವಂತೆ ಹೇಳಿದ ತಾಯಿಯನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ 14 ವರ್ಷದ ಮಗಳನ್ನು ರಷ್ಯಾ ಪೊಲೀಸರು (Russia Police) ಬಂಧಿಸಿದ್ದಾರೆ.

ತಾಯಿಯನ್ನು ಕತ್ತು ಹಿಸುಕಿ ಕೊಲೆಗೈದ ಬಳಿಕ ಶವವನ್ನು ಪ್ಲಾಸ್ಟಿಕ್‍ನಿಂದ ಸುತ್ತಿ ರಷ್ಯಾದ ಮಾಸ್ಕೋ ಬಳಿ ಎಸೆಯಲಾಗಿದೆ. ಸ್ವಂತ ಮಗಳೇ, 15 ವರ್ಷದ ಹುಡುಗನ ಜೊತೆ ತನ್ನ ತಾಯಿಯನ್ನು ಕೊಲೆ ಮಾಡಲು ಸೂಚಿಸಿದ್ದಾಳೆ ಎಂದು ಆರೋಪಿಸಲಾಗಿದೆ.

Lovers 2

38 ವರ್ಷದ ತಾಯಿಯನ್ನು ಕೊಲ್ಲಲು ಹುಡುಗಿ ಆಕೆಯ ಬಾಯ್‍ಫ್ರೆಂಡ್ ಸೇರಿ ಇಬ್ಬರು ಹದಿಹರೆಯದವರಿಗೆ 3,72,202 ರೂ. ನೀಡಿದ್ದಾರೆ ಎಂದು ರಷ್ಯಾದ ಪೊಲೀಸರು ಶಂಕಿಸಿದ್ದಾರೆ. ಬಾಯ್ ಫ್ರೆಂಡ್ ಹುಡುಗಿಯ ಕುಟುಂಬದ ಫ್ಲಾಟ್‍ನಲ್ಲಿಯೇ ವಾಸಿಸುತ್ತಿದ್ದನು ಎಂಬುದಾಗಿ ವರದಿಯಾಗಿದೆ. ಇದನ್ನೂ ಓದಿ: ಕೈಕೊಟ್ಟ ಪ್ರಿಯತಮ- ನಡುರಸ್ತೆಯಲ್ಲೇ ಬೇಕಾಬಿಟ್ಟಿಯಾಗಿ ಯುವತಿ ರಂಪಾಟ

POLICE JEEP 1

ಲವ್ ಮಗಳ ಮೇಲೆ ಕೆಟ್ಟ ಪ್ರಭಾವ ಬೀರಿದ ಪರಿಣಾಮ ತಾಯಿ, ಬಾಯ್‍ಫ್ರೆಂಡ್ ನನ್ನು ಬಿಟ್ಟು ಬಿಡುವಂತೆ ಹೇಳಿದ್ದಾರೆ. ಇದರಿಂದ ರೊಚ್ಚಿಗೆದ್ದ ಹುಡುಗಿ ತನ್ನ ಬಾಯ್‍ಫ್ರೆಂಡ್ ಜೊತೆ ಸೇರಿ ಕೊಲೆ ಮಾಡಿದ್ದಾಳೆ. ಇದಾದ ಎರಡು ದಿನಗಳ ನಂತರ ಆಕೆಯ ಶವವನ್ನು ಪ್ಲಾಸ್ಟಿಕ್‍ನಲ್ಲಿ ಸುತ್ತಿ ಮಾಸ್ಕೋ ಪ್ರದೇಶದ ಬಾಲಶಿಖಾ ನಗರದಲ್ಲಿರುವ ಕಸದ ರಾಶಿಯಲ್ಲಿ ಎಸೆದಿದ್ದಾರೆ. ಇನ್ನು ಕಸದ ರಾಶಿಯಲ್ಲಿ ಶವವನ್ನು ಕಂಡು ವ್ಯಕ್ತಿಯೊಬ್ಬ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ತಮ್ಮ ತಾಯಿಯು ತನ್ನನ್ನು ಪ್ರೀತಿಸುವ ಒಳ್ಳೆಯ ವ್ಯಕ್ತಿಯಾಗಿದ್ದರೂ ಸಹ, ಹುಡುಗಿ ತನ್ನ ತಾಯಿಯನ್ನು ದ್ವೇಷಿಸುತ್ತಿರುವ ಬಗ್ಗೆ ಅನೇಕ ಬಾರಿ ಹೇಳಿಕೊಂಡಿದ್ದಳು   ಎಂದು ಹುಡುಗಿಯ ಸ್ನೇಹಿತೆಯೊಬ್ಬಳು ತಿಳಿಸಿದ್ದಾಳೆ.

Share This Article