ಗಂಡ-ಹೆಂಡ್ತಿ ಒಟ್ಟಿಗೆ ಕೂತು ಎಣ್ಣೆ ಹೊಡೆದ್ರು- ಜಗಳವಾಡಿ 12ನೇ ಪತ್ನಿಯನ್ನೇ ಮುಗಿಸಿದ!

Public TV
1 Min Read
Alcoholic Drink copy

ರಾಂಚಿ: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ತನ್ನ 12ನೇ ಪತ್ನಿಯನ್ನು ಬರ್ಬರವಾಗಿ ಕೊಲೆಗೈದ ಅಚ್ಚರಿಯ ಘಟನೆಯೊಂದು ಜಾರ್ಖಂಡ್‍ (Jharkhand) ನಲ್ಲಿ ನಡೆದಿದೆ.

ಮೃತಳನ್ನು ಸಾವಿತ್ರಿ ದೇವಿ (40) ಎಂದು ಗುರುತಿಸಲಾಗಿದ್ದು, ಈಕೆಯನ್ನು ಪತಿ ರಾಮಚಂದ್ರ ತುರಿ ಕೊಲೆ ಮಾಡಿದ್ದಾನೆ. ಪತಿ ಹಾಗೂ ಪತ್ನಿ ಇಬ್ಬರೂ ಕೋಣೆಯೊಳಗೆ ಕುಳಿತುಕೊಂಡು ಮದ್ಯಪಾನ (Alcohol) ಮಾಡಿದ್ದಾರೆ. ಹೀಗೆ ಮಾತನಾಡುತ್ತಾ ಇಬ್ಬರ ಮಧ್ಯೆ ವಿಚಾರವೊಂದಕ್ಕೆ ವಾಗ್ವಾದ ನಡೆದಿದೆ. ಪತ್ನಿಯ ಮಾತಿನಿಂದ ರೊಚ್ಚಿಗೆದ್ದ ಪತಿ, ಅಲ್ಲೇ ಇದ್ದ ಕೋಲು ತೆಗೆದುಕೊಂಡು ಚೆನ್ನಾಗಿ ಥಳಿಸಿದ್ದಾನೆ. ಪರಿಣಾಮ ಸಾವಿತ್ರಿ ದೇವಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.

police jeep 1

ಇತ್ತ ಘಟನೆಯ ವಿಚಾರ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಆರೋಪಿ ಪತಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಮೃತಳು ಆರೋಪಿಯ 12ನೇ ಪತ್ನಿಯಾಗಿದ್ದಾಳೆ. ಇದಕ್ಕೂ ಮೊದಲು ಮದುವೆಯಾಗಿರುವ 11 ಮಂದಿ ಪತ್ನಿಯರು ಕೂಡ ಈತ ನೀಡುತ್ತಿದ್ದ ಮಾನಸಿಕ ಹಿಂಸೆಯಿಂದ ಬಿಟ್ಟು ಹೋಗಿದ್ದಾರೆ. ಆರೋಪಿಗೆ ಮೂವರು ಪುತ್ರರು ಹಾಗೂ ಓರ್ವ ಮಗಳಿದ್ದು, ಎಲ್ಲರೂ ಸಾವಿತ್ರಿ ದೇವಿ ಜೊತೆ ವಾಸವಾಗಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

ಸಾವಿತ್ರಿ ದೇವಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆರೋಪಿಯ ತನಿಖೆ ನಡೆಯುತ್ತಿದೆ ಎಮದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಡಿಜೆ ಸೌಂಡ್ ನಿಲ್ಲಿಸಲು ಹೇಳಿದ್ದಕ್ಕೆ ಗರ್ಭಿಣಿ ಮೇಲೆ ಗುಂಡು ಹಾರಿಸಿದ ನೆರೆಮನೆಯಾತ

Share This Article