ನೆದರ್‌ಲ್ಯಾಂಡ್‌ನಲ್ಲಿ ಹಳಿ ತಪ್ಪಿದ ಪ್ಯಾಸೆಂಜರ್ ರೈಲು – ಒಂದು ಸಾವು, 30 ಮಂದಿಗೆ ಗಾಯ

Public TV
1 Min Read
TRAIN DERAILED

ಆಮ್ಸ್ಟರ್ಡ್ಯಾಮ್: ಸುಮಾರು 50 ಜನರನ್ನು ಹೊತ್ತೊಯ್ಯುತ್ತಿದ್ದ ಪ್ಯಾಸೆಂಜರ್ ರೈಲೊಂದು (Passenger Train) ಹಳಿಗಳ ನಿರ್ಮಾಣ ಉಪಕರಣಗಳಿಗೆ ಡಿಕ್ಕಿ ಹೊಡೆದು ಹಳಿ ತಪ್ಪಿರುವ ಘಟನೆ ನೆದರ್‌ಲ್ಯಾಂಡ್‌ನಲ್ಲಿ ನಡೆದಿದೆ.

ನೆದರ್‌ಲ್ಯಾಂಡ್‌ನ (Netherland) ವೂರ್‌ಸ್ಕೊಟೆನ್‌ನಲ್ಲಿ (Voorschoten) ಈ ಘಟನೆ ನಡೆದಿದ್ದು, ಒಬ್ಬರು ಸಾವನ್ನಪ್ಪಿ 30 ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ 19 ಜನರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಉಳಿದವರಿಗೆ ಸ್ಥಳದಲ್ಲಿಯೇ ಚಿಕಿತ್ಸೆಯನ್ನು ನೀಡಲಾಗಿದೆ ಎಂದು ಡಚ್ ತುರ್ತು ಸೇವೆಗಳು ತಿಳಿಸಿವೆ. ಇದನ್ನೂ ಓದಿ: ಅರುಣಾಚಲ ಪ್ರದೇಶದ 11 ಸ್ಥಳಗಳಿಗೆ ಮರುನಾಮಕರಣ ಮಾಡಿದ ಚೀನಾ 

TRAIN DERAILED 1

ರೈಲು ಸೋಮವಾರ ರಾತ್ರಿ ಲೈಡೆನ್ (Leiden) ನಗರದಿಂದ ಹೇಗ್‌ಗೆ (Hague) ಹೊರಟಿತ್ತು. ಮಂಗಳವಾರ ಮುಂಜಾನೆ ಸುಮಾರು 3:25ರ ವೇಳೆಗೆ ರೈಲಿನ ಮುಂಭಾಗ ಹಳಿಗಳ ನಿರ್ಮಾಣಕ್ಕೆಂದು ಇರಿಸಿದ್ದ ಉಪಕರಣಗಳಿಗೆ ಡಿಕ್ಕಿ ಹೊಡೆದು ಹಳಿ ತಪ್ಪಿದೆ. ಅಲ್ಲದೇ ರೈಲಿನ ಹಿಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದನ್ನು ನಂದಿಸಲಾಗಿದೆ ಎಂದು ವರದಿಗಳು ಹೇಳಿವೆ. ಇದನ್ನೂ ಓದಿ: ಚಿನ್ನದ ಗಣಿ ಕುಸಿದು 15 ಕಾರ್ಮಿಕರು ಸಾವು 

TRAIN DERAILED 2

ಅಪಘಾತದ (Accident) ಕಾರಣದಿಂದಾಗಿ ಲೈಡೆನ್ ಮತ್ತು ಹೇಗ್ ಭಾಗಕ್ಕೆ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ಡಚ್ ರೈಲ್ವೇಸ್ (Dutch Railways) ಟ್ವೀಟ್ ಮುಖಾಂತರ ತಿಳಿಸಿದೆ. ಇದನ್ನೂ ಓದಿ: ಇಟಲಿಯಲ್ಲಿ ಇಂಗ್ಲಿಷ್ ಭಾಷೆ ಬ್ಯಾನ್ – ಸಂವಹನ ನಡೆಸಿದರೆ ಭಾರೀ ದಂಡ

Share This Article