ಇಬ್ರಾಹಿಂ ಅಲಿ ಖಾನ್ ಜೊತೆಗಿನ ಡೇಟಿಂಗ್ ಸುದ್ದಿ ನಿಜಾನಾ? ಪಾಲಕ್ ತಿವಾರಿ ಸ್ಪಷ್ಟನೆ

Public TV
1 Min Read
palak tiwari

ಬಾಲಿವುಡ್ (Bollywood) ನಟಿ ಶ್ವೇತಾ ತಿವಾರಿ (Shwetha Tiwari) ಪುತ್ರಿ ಪಾಲಕ್ ತಿವಾರಿ (Palak Tiwari) ಕೂಡ ಬಿಟೌನ್ ಅಂಗಳದಲ್ಲಿ ನಾಯಕಿಯಾಗಿ ಮಿಂಚ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಿರುವ ನಟಿ ಪಾಲಕ್, ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಅಲಿ ಖಾನ್ (Ibrahim Ali Khan) ಜೊತೆಗಿನ ಡೇಟಿಂಗ್ ಸುದ್ದಿಗೆ ಸ್ಪಷ್ಟನೆ ನೀಡಿದ್ದಾರೆ.

palak tiwari 1

ಸಲ್ಮಾನ್ ಖಾನ್ – ಪೂಜಾ ಹೆಗ್ಡೆ ನಟನೆಯ `ಕಿಸಿ ಕಾ ಭಾಯ್ ಕಿಸಿ ಕಾ ಜಾನ್’ ಚಿತ್ರದ ಮೂಲಕ ಪಾಲಕ್ ಎಂಟ್ರಿ ಕೊಡ್ತಿದ್ದಾರೆ. ಮತ್ತೊಂದಿಷ್ಟು ಸಿನಿಮಾಗಳು ನಟಿಯ ಕೈಯಲ್ಲಿದೆ. ಇದೀಗ ಸಂದರ್ಶನವೊಂದರಲ್ಲಿ ಇಬ್ರಾಹಿಂ ಜೊತೆಗಿನ ಲವ್ ರಿಲೇಷನ್‌ಶಿಪ್ ಬಗ್ಗೆ ನಟಿ ಪಾಲಕ್‌ ಅವರಿಗೆ ಕೇಳಲಾಗಿದೆ. ‘ನಾವಿಬ್ಬರೂ ಒಳ್ಳೆಯ ಸ್ನೇಹಿತರುʼ ಎಂದು ನಟಿ ಮಾತನಾಡಿದ್ದಾರೆ.

palak tiwari 2

ಎರಡು ಚಿತ್ರಗಳ ಶೂಟಿಂಗ್ ನನ್ನನ್ನು ತುಂಬಾ ಬ್ಯುಸಿಯಾಗಿರುವಂತೆ ಮಾಡಿದೆ, ಜೀವನದಲ್ಲಿ ತೃಪ್ತಿ ನೀಡಿದೆ. ಇದು ನನ್ನ ಏಕೈಕ ಗಮನ. ನನಗಿದು ಮಹತ್ವದ ವರ್ಷ, ನಾನು ವೃತ್ತಿಯಲ್ಲಿ ಒಂದು ಭಾಗವಾಗಿರುವುದರಿಂದ ಈ ವದಂತಿಗೆಲ್ಲಾ ಕಿವಿಗೊಡುವುದಿಲ್ಲ. ಕೆಲಸದ ಮೇಲೆ ಹೆಚ್ಚು ಗಮನ ಹರಿಸುತ್ತೇನೆ. ಪ್ರೀತಿಯನ್ನು ಎಂದಿಗೂ ಲೆಕ್ಕಾಚಾರ ಮಾಡಲು ಅಥವಾ ಊಹಿಸಲು ಸಾಧ್ಯವಿಲ್ಲ. ನನ್ನ ಕೆರಿಯರ್ ನನ್ನ ಮೊದಲ ಪ್ರಾಮುಖ್ಯತೆ. ಆದ್ದರಿಂದ ನಾನು ಅದರ ಮೇಲೆ ನನ್ನ ಶಕ್ತಿಯನ್ನು ಕೇಂದ್ರೀಕರಿಸುತ್ತಿದ್ದೇನೆ ಎಂದು ಪಾಲಕ್ ತಿವಾರಿ ಹೇಳಿದ್ದಾರೆ. ಇದನ್ನೂ ಓದಿ:‘ವೀರಂ’ ಮೂಲಕ ವಿಷ್ಣುವರ್ಧನ್ ಅಭಿಮಾನಿಯಾದ ಪ್ರಜ್ವಲ್ ದೇವರಾಜ್

palak

ಈ ಹಿಂದೆ, ಪಾಲಕ್- ಇಬ್ರಾಹಿಂ ಜೊತೆ ರೆಸ್ಟೋರೆಂಟ್‌ನಿಂದ ಹೊರ ಬರುವಾಗ ಪಾಪರಾಜಿಗಳು ಫೋಟೋ ಕ್ಲಿಕ್ಕಿಸಿದ್ದರು. ಈ ವೇಳೆ ಪಾಲಕ್ ಮುಖ ಮುಚ್ಚಿಕೊಳ್ಳಲು ಪ್ರಯತ್ನಿಸಿದ್ದರು. ಈ ಬಗ್ಗೆ ಇದೀಗ ನಟಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಅಮ್ಮನಿಗೆ ಫ್ರೆಂಡ್ಸ್ ಜೊತೆ ಹೊರಗಡೆ ಬರುವ ಬಗ್ಗೆ ಸುಳ್ಳು ಹೇಳಿದ್ದೆ, ಹಾಗಾಗಿ ಮುಖ ಮುಚ್ಚಿಡಲು ಪ್ರಯತ್ನಿಸಿದೆ ಎಂದು ನಟಿ ಮಾತನಾಡಿದ್ದಾರೆ.

Share This Article