ಆ ಒಂದು ಕ್ಯಾಸೆಟ್‌ನಿಂದ ಪ್ರಭುದೇವ ಭವಿಷ್ಯ ಬದಲಾಯಿಸಿತು

Public TV
2 Min Read
prabhudeva

ಸಾಧಕನ ಸಾಧನೆಯ ಕಥೆ ಹೇಳುವ ಜನಪ್ರಿಯ Weekend with Ramesh 5 ಶೋನಲ್ಲಿ ತಮ್ಮ ಬದಕು ಬದಲಾದ ಕಥೆಯನ್ನ ಹೇಳಿದ್ದಾರೆ. ಪ್ರಭುದೇವ (Prabhudeva) ಕೈಗೆ ಸಿಕ್ಕ ಆ ಒಂದು ಕ್ಯಾಸೆಟ್‌ನಿಂದ ಅವರ ಭವಿಷ್ಯ ಬದಲಾಗಿದ್ದು, ಹೇಗೆ? ಎಂದು ಹೇಳಿದ್ದಾರೆ.

prabhudeva

ಬಾಲ್ಯದಿಂದಲೇ ನೃತ್ಯ ರಂಗದಲ್ಲಿ ಪ್ರಭುದೇವಗೆ ಒಲವಿತ್ತು. ಹಾಗಾಗಿ ಭರತನಾಟ್ಯ ಸೇರಿದಂತೆ ಹಲವು ಶೈಲಿಯ ನೃತ್ಯವನ್ನ ನಟ ಕರಗತ ಮಾಡಿಕೊಂಡರು. ತಂದೆಯ ಹಾದಿಯಲ್ಲಿಯೇ ಪ್ರಭುದೇವ ಸಾಗಿದ್ದರು. ಪ್ರಭುದೇವ ನೃತ್ಯ ಕಲಿಯುವಾಗ ಅವರಿಗೆ ಥ್ರಿಲ್ಲರ್ ಹೆಸರಿನ ಕ್ಯಾಸೆಟ್ ಸಿಕ್ಕಿತ್ತು. ವಿಶ್ವಪ್ರಸಿದ್ಧ ಡ್ಯಾನ್ಸರ್ ಮೈಕಲ್ ಜಾಕ್ಸನ್ ಅವರ 1982ರ ಸೂಪರ್ ಹಿಟ್ ಆಲ್ಬಂ ಥ್ರಿಲ್ಲರ್. ಬೀಟ್ ಇಟ್ ಸೇರಿದಂತೆ ಹಲವು ಹಾಡುಗಳು ಆ ಆಲ್ಬಂನಲ್ಲಿದ್ದವು. ಪ್ರಭುದೇವ ಅವರು ಆ ಆಲ್ಬಂನ ವಿಸಿಆರ್ ಕ್ಯಾಸೆಟ್ ಅನ್ನು ತೆಗೆದುಕೊಂಡು ಅದನ್ನು ನೋಡಲು ವಿಸಿಆರ್ ಅನ್ನು ಬಾಡಿಗೆ ತಂದಿದ್ದರಂತೆ. ಆ ಕ್ಯಾಸೆಟ್ ನೋಡುತ್ತಲೇ ನನಗೆ ರೋಮಾಂಚನವಾಗಿ ಬಿಟ್ಟಿತು. ನಾನು ಹೊಸದೇನನ್ನೋ ನೋಡಿದೆ. ಅಲ್ಲಿಯವರೆಗೆ ನಾನು ಆ ರೀತಿಯ ಡ್ಯಾನ್ಸ್ ನೋಡಿರಲೇ ಇಲ್ಲ. ಮೈಕಲ್ ಜಾಕ್ಸನ್ ಡ್ಯಾನ್ಸ್ ಮಾಡಿದ ರೀತಿ ನನ್ನನ್ನು ಬೆರಗಾಗಿಸಿತು ಎಂದು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: `ನಾಟು ನಾಟು’ ಹಾಡಿಗೆ ಹೆಜ್ಜೆ ಹಾಕಿದ ಆಲಿಯಾ ಭಟ್- ರಶ್ಮಿಕಾ ಮಂದಣ್ಣ

michael jackson 2

ಅಂದು ಮೈಕಲ್ ಜಾಕ್ಸನ್‌ರ ಥ್ರಿಲ್ಲರ್ ನೋಡಿದ ಬಳಿಕ ಆ ಮಾದರಿಯ ಡ್ಯಾನ್ಸ್ ನನ್ನನ್ನು ಕಾಡಲು ಆರಂಭಿಸಿತು. ನಾನು ಎಲ್ಲಿದ್ದರು ಏನು ಮಾಡುತ್ತಿದ್ದರೂ ಡ್ಯಾನ್ಸ್ ಮಾಡಲು ಆರಂಭಿಸಿದೆ. ಒಂದು ರೀತಿ ಹುಚ್ಚನಾಗಿಬಿಟ್ಟಿದ್ದೆ, ನೃತ್ಯ ಕಲಿಯುವಾಗಲು ಮಧ್ಯದಲ್ಲಿ ಒಂದೊಂದು ಬ್ರೇಕ್ ಡ್ಯಾನ್ಸ್ ಸ್ಟೆಪ್ಸ್ ಸೇರಿಸಿಬಿಡುತ್ತಿದ್ದ, ನನ್ನ ಗುರುಗಳು ನನ್ನನ್ನು ಬೈಯ್ಯುತ್ತಿದ್ದರೂ ಆದರೂ ಆ ಅಭ್ಯಾಸ ನನ್ನಿಂದ ಹೋಗುತ್ತಿರಲಿಲ್ಲ ಎಂದ ಪ್ರಭುದೇವ, ಮೈಕಲ್ ಜಾಕ್ಸನ್ ನನ್ನ ಮೇಲೆ ಬೀರಿದ ಪ್ರಭಾವ ಬಹಳ ದೊಡ್ಡದು ಎಂದು ಪ್ರಭುದೇವ ಸ್ಮರಿಸಿದರು.

ಶೋನಲ್ಲಿ ಹಲವು ಬಾರಿ ಅವರು ಮೈಕಲ್ ಜಾಕ್ಸನ್ ಅವರನ್ನು ನೆನಪು ಮಾಡಿಕೊಂಡರು ಪ್ರಭುದೇವ. ಮೈಕಲ್ ಜಾಕ್ಸನ್ (Michael Jackson) ಒಮ್ಮೆ ಮುಂಬೈಗೆ ಬಂದಾಗ ನಿರ್ಮಾಪಕರೊಬ್ಬರ ಸಹಾಯದಿಂದ ತಾವು ಅವರನ್ನು ಭೇಟಿಯಾಗಿದ್ದಾಗಿಯೂ, ಅಂದು ಅವರು ನನಗೆ ಏನೋ ಹೇಳಿದರು ಆದರೆ ಅದು ನನಗೆ ನೆನಪಿಲ್ಲ ಏಕೆಂದರೆ ಅವರನ್ನು ನೋಡಿ ನಾನು ಶಾಕ್‌ನಲ್ಲಿದ್ದೆ ಅವರನ್ನೇ ನೋಡುತ್ತಿದ್ದೆ ಎಂದಿದ್ದಾರೆ. ಶೋನ ಕೊನೆಯಲ್ಲಿ ನಿಮ್ಮ ಈ ಸಾಧನೆಗೆ ಮುಖ್ಯ ಕಾರಣಕರ್ತರು ಯಾರೆಂದಾಗ ತಮಗೆ ನೃತ್ಯ ಹೇಳಿಕೊಟ್ಟ ಧರ್ಮರಾಜ್ ಮಾಸ್ಟರ್, ಲಕ್ಷ್ಮಿನಾರಾಯಣ ಮಾಸ್ಟರ್ ಎಂದ ಪ್ರಭುದೇವ, ಮೈಕಲ್ ಜಾಕ್ಸನ್ ಸಹ ತಮಗೆ ಗುರುವೇ ಎಂದು  ಪ್ರಭುದೇವ ಮಾತನಾಡಿದ್ದಾರೆ.

Share This Article