ರಾಜ್ಯ ಬಿಜೆಪಿ ವಿರುದ್ಧ ಹೈಕಮಾಂಡ್ ಗರಂ

Public TV
1 Min Read
amit shah

ಬೆಂಗಳೂರು: ಎಲೆಕ್ಷನ್‌ಗೆ (Karnataka Assembly Election) ದಿನಗಣನೆ ಇರುವಾಗಲೇ ಪಕ್ಷಾಂತರ ಪರ್ವ ಜೋರಾಗಿದೆ. ಬಿಜೆಪಿಗೆ (BJP) ಕಳೆದ 3-4 ತಿಂಗಳಲ್ಲಿ ಸರಣಿ ರಿವರ್ಸ್ ಆಪರೇಷನ್ ಶಾಕ್ ಎದುರಾಗಿದೆ.

ಇತ್ತೀಚೆಗೆ ಶಾಸಕ ಎನ್‌ವೈ ಗೋಪಾಲಕೃಷ್ಣ ಪಕ್ಷಕ್ಕೆ ಗುಡ್‌ಬೈ ಹೇಳಿ, ಕಾಂಗ್ರೆಸ್ ಸೇರ್ಪಡೆ ಆಗಿದ್ದರು. ಕಳೆದ ದಿನ ಮಾಜಿ ಸಚಿವ ಎಬಿ ಮಾಲಕರೆಡ್ಡಿ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಹೀಗೆ ಒಬ್ಬೊಬ್ಬರಾಗಿ ಪಕ್ಷ ಬಿಡುತ್ತಿರುವುದಕ್ಕೆ ರಾಜ್ಯ ನಾಯಕರ ಮೇಲೆ ಬಿಜೆಪಿ ಹೈಕಮಾಂಡ್ ಗರಂ ಆಗಿದೆ. ಇದೀಗ ಪಕ್ಷ ಬಿಡುವುದಕ್ಕೆ ಕಾರಣ ಏನು ಎಂಬ ವರದಿ ನೀಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಸೂಚಿಸಿದ್ದಾರೆ. ಇದನ್ನೂ ಓದಿ: ಅಮಿತ್ ಶಾ ಭೇಟಿ ರದ್ದಾದ ಪ್ರದೇಶದಲ್ಲಿ ಬಾಂಬ್ ಸ್ಫೋಟ – ಐವರಿಗೆ ಗಾಯ

amit shah 1

ಬಿಜೆಪಿಗೆ ಕಾಂಗ್ರೆಸ್-ಜೆಡಿಎಸ್‌ನಿಂದ ವಲಸೆ ಬಂದವರು 6-7 ಜನ ಅಷ್ಟೇ. ಆದರೆ ಬಿಜೆಪಿಯಿಂದ ವಲಸೆ ಹೋದವರು 14ಕ್ಕೂ ಹೆಚ್ಚು ಜನ. ಅಂದು ಬಿಜೆಪಿ ಉತ್ತಮ ಎಂದು ಬಂದವರು ಈಗ ಯಾಕೆ ಪಕ್ಷ ತೊರೆಯುತ್ತಿದ್ದಾರೆ? ಅವರನ್ನು ತಡೆಯುವ ಪ್ರಯತ್ನ ಕೈಕೊಟ್ಟಿದ್ದೇಕೆ? ಬೇರೆ ಪಕ್ಷದ ಪ್ರಭಾವಿಗಳು ನಮ್ಮೊಂದಿಗೆ ಬರುತ್ತಿಲ್ಲ ಯಾಕೆ ಎಂಬ ಪ್ರಶ್ನೆಗೆ ವರದಿ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮತ್ತೆ ರಾಜ್ಯಕ್ಕೆ ಮೋದಿ – ಕಾಂಗ್ರೆಸ್‌, ಜೆಡಿಎಸ್‌ ಭದ್ರಕೋಟೆಯಲ್ಲೇ ನಡೆಯಲಿದೆ ಸಮಾವೇಶ

Share This Article