ಇಸ್ಲಾಮಾಬಾದ್: ಉಚಿತ ಪಡಿತರ ವಿವತರಣೆ (Free Ration Distribution) ವೇಳೆ ಕಾಲ್ತುಳಿತಕ್ಕೆ ಸಿಕ್ಕಿ ಮಹಿಳೆಯರು, ಮಕ್ಕಳು ಸೇರಿದಂತೆ 11 ಮಂದಿ ಸಾವನ್ನಪ್ಪಿರುವ ಘಟನೆ ದಕ್ಷಿಣ ಪಾಕಿಸ್ತಾನದ (Southern Pakistan) ಕರಾಚಿ ನಗರದಲ್ಲಿ ಶುಕ್ರವಾರ ನಡೆದಿದೆ.
At least 11 dead in #stampede at #freeration distribution point in #Karachi #Pakistan #PakistanEconomicCrisis pic.twitter.com/osQhFqmsim
— Siraj Noorani (@sirajnoorani) March 31, 2023
ಕರಾಚಿಯ SITE (ಸಿಂಧ್ ಇಂಡಸ್ಟ್ರಿಯಲ್ ಟ್ರೇಡಿಂಗ್ ಎಸ್ಟೇಟ್) ಪ್ರದೇಶದಲ್ಲಿ ಘಟನೆ ನಡೆದಿದ್ದು, 8 ಮಹಿಳೆಯರು ಹಾಗೂ ಮೂವರು ಮಕ್ಕಳು ಮೃತಪಟ್ಟಿದ್ದಾರೆ. ಇನ್ನೂ ಹಲವು ಮಂದಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಪೋರ್ನ್ ಸ್ಟಾರ್‌ಗೆ ಹಣ – ಟ್ರಂಪ್ ವಿರುದ್ಧ ದೋಷಾರೋಪಣೆ
ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನದಲ್ಲಿ ಉಚಿತ ಪಡಿತರ ಸಂಗ್ರಹಿಸಲು ಏಕಕಾಲಕ್ಕೆ ಸಾಕಷ್ಟು ಮಂದಿ ವಿತರಣಾ ಕೇಂದ್ರಕ್ಕೆ ನುಗ್ಗಿದ್ದಾರೆ. ಇದರಿಂದ ಕಾಲ್ತುಳಿತಕ್ಕೆ ಸಿಕ್ಕಿ ಜನ ಸಾವನ್ನಪ್ಪಿದ್ದಾರೆ. ಇನ್ನೂ ಕೆಲವರು ಗಾಯಗೊಂಡಿದ್ದಾರೆ. ಘಟನೆ ಸಂಬಂಧ 7 ಮಂದಿಯನ್ನ ಕರಾಚಿ ಪೊಲೀಸರು ಬಂಧಿಸಿದ್ದು, ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಕಳೆದ ವಾರವೂ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಸರ್ಕಾರಿ ಪಡಿತರ ವಿತರಣಾ ಕೇಂದ್ರದಲ್ಲಿ ಇದೇ ರೀತಿ ಕಾಲ್ತುಳಿತ ಉಂಟಾಗಿ 4 ವೃದ್ಧರು ಪ್ರಾಣ ಕಳೆದುಕೊಂಡಿದ್ದರು. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಹಿಂದೂ ವೈದ್ಯನ ಗುಂಡಿಕ್ಕಿ ಹತ್ಯೆ – ತಿಂಗಳಲ್ಲಿ 2ನೇ ಘಟನೆ
ದಿನ ಕಳೆದಂತೆ ಪಾಕಿಸ್ತಾನದಲ್ಲಿ ಆರ್ಥಿಕ ದಿವಾಳಿತನ ಹೆಚ್ಚಾಗುತ್ತಿದ್ದು, ಜನರು ಆಹಾರ ಸಾಮಗ್ರಿಗಳಿಗೂ ಪರದಾಡುವಂತಾಗಿದೆ. ಇತ್ತ ಆಹಾರ ಪದಾರ್ಥಗಳ ಬೆಲೆಯೂ ದುಬಾರಿಯಾಗಿರುವುದರಿಂದ ಟ್ರಕ್‌ಗಳು ಮತ್ತು ಪಡಿತರ ವಿತರಣಾ ಕೇಂದ್ರಗಳಿಂದ ಸಾವಿರಾರು ಚೀಲದಷ್ಟು ಗೋದಿ ಹಿಟ್ಟನ್ನ ಲೂಟಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.