ಬೆಂಗಳೂರು: ದೇವೇಗೌಡರ (HD DeveGowda) ಮಕ್ಕಳು ಯಾವತ್ತು ಜಗಳ ಆಡುವುದಿಲ್ಲ. ಜಗಳ ಆಡ್ತಾರೆ ಅಂದುಕೊಂಡರೆ ನೀವು ಸುಳ್ಳಾಗ್ತೀರಾ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ (CM Ibrahim) ಸ್ಪಷ್ಟಪಡಿಸಿದರು.
ಹಾಸನ (Hassan) ಟಿಕೆಟ್ ವಿಚಾರದಲ್ಲಿ ರೇವಣ್ಣ ಹೇಳಿಕೆ ವಿಚಾರ ಮತ್ತು ಸ್ವರೂಪ್ ಯಾರು ಅಂತ ಗೊತ್ತಿಲ್ಲ ಎಂಬ ರೇವಣ್ಣ (HD Revanna) ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ದೇವೇಗೌಡರ ಮಕ್ಕಳಲ್ಲಿ ಜಗಳ, ಭಿನ್ನಾಭಿಪ್ರಾಯ ಗೋಚಾರ ಆಗುವುದಿಲ್ಲ. ಆಗೋದು ಇಲ್ಲ. ಅವರು 4 ಜನರು ಒಂದೇ. ಅವರಲ್ಲಿ ಜಗಳ ಅಂತ ನೀವು ನಂಬಿದ್ರೆ ನೀವು ಸುಳ್ಳಾಗ್ತೀರಾ ಎಂದರು. ಇದನ್ನೂ ಓದಿ: ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿಶಂಕರ್ ಅನರ್ಹ
ರೇವಣ್ಣ ಹೇಳಿಕೆಯಲ್ಲಿ ಬೇರೆ ಅರ್ಥ ಬೇಡ. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಅವರು ತಮಾಷೆಗೂ ಹೇಳಿರಬಹುದು. 4-5 ದಿನಗಳಲ್ಲಿ ಎರಡನೇ ಪಟ್ಟಿ ರಿಲೀಸ್ ಆಗುತ್ತದೆ. ಆಗ ಹಾಸನ ಟಿಕೆಟ್ ಕೂಡಾ ಘೋಷಣೆ ಆಗುತ್ತದೆ. ಹಾಸನ ಟಿಕೆಟ್ ವಿಚಾರದಲ್ಲಿ ಯಾವುದೇ ಗೊಂದಲ ನಮಗೆ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ಮೊಹಮ್ಮದ್ ನಲಪಾಡ್ ವಿರುದ್ಧ ದೂರು ದಾಖಲು