ನೀವು ಮಾಡಿದ್ದೆಲ್ಲಾ ಸಹಿಸಿಕೊಂಡು ಬಿರಿಯಾನಿ ಹಾಕುವ 47ರ ಕಾಲವಲ್ಲ- SDPI ಮುಖಂಡನಿಗೆ ಸಿ.ಟಿ ರವಿ ವಾರ್ನಿಂಗ್

Public TV
2 Min Read
CT Ravi

ಚಿಕ್ಕಮಗಳೂರು: ಇದು 1947ರ ಭಾರತವಲ್ಲ. ನೀವು ಮಾಡಿದ್ದೆಲ್ಲಾ ಸಹಿಸಿಕೊಂಡು ಬಿರಿಯಾನಿ ಹಾಕುವ ಭಾರತವಲ್ಲ. ಈಗ ಇರುವ ಸರ್ಕಾರ ಬಾಲ ಉದ್ದ ಮಾಡಿದ್ರೆ ಕಟ್ ಮಾಡುವುದು ಹೇಗೆಂದು ಗೊತ್ತಿರುವ ಸರ್ಕಾರ ಎಂದು ಚಿತ್ರದುರ್ಗದ ಎಸ್.ಡಿ.ಪಿ.ಐ (SDPI) ಮುಖಂಡ ಜಾಕೀರ್ ಹುಸೇನ್ (Zakir Hussain) ವಿರುದ್ಧ ಶಾಸಕ ಸಿ.ಟಿ.ರವಿ (CT Ravi) ಕಿಡಿಕಾರಿದ್ದಾರೆ.

sdpi 2

ನಗರದ ಬಸವನಹಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ನಮ್ಮ ಹಕ್ಕನ್ನು ವಾಪಸ್ ಕೊಡದಿದ್ರೆ ಸಿಎಂ ಬೊಮ್ಮಾಯಿಗೆ ಚಡ್ಡಿ ಬಿಚ್ಚುಸ್ತೀವಿ ಎಂದು ಹೇಳಿಕೆ ನೀಡಿದ್ದ ಎಸ್.ಡಿ.ಪಿ.ಐ. ಮುಖಂಡನ ಹೇಳಿಕೆ ಪ್ರತಿಕ್ರಿಯೆ ನೀಡಿದ್ದಾರೆ. ಅದೇನು ಹೋಗುತ್ತೋ, ತಲೆ ತೆಗೀತಿಯೋ, ನಿನ್ನ ತಾಕತ್ತು ತೋರ್ಸು, ನಿಮ್ಮ ತಾಕತ್ ತೋರಿಸಿ ಆಮೇಲೆ ನಾವು ಅದಕ್ಕೆ ಏನು ಉತ್ತರ ಕೋಡಬೇಕು ಕೊಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದಬ್ಬಾಳಿಕೆಯಿಂದ ದೇಶ ಉಳಿಸಲು ಬಯಸುವ ಪ್ರತಿಯೊಬ್ಬರ ಮನೆಯೂ ನಿಮ್ಮ ಮನೆ – ರಾಗಾ ಬೆಂಬಲಿಸಿದ ಪ್ರಕಾಶ್‌ ರಾಜ್‌

CT Ravi

ಇದು 1947ರ ಭಾರತವಲ್ಲ. ನೀವು ಮಾಡಿದ್ದೆಲ್ಲವನ್ನೂ ಸಹಿಸಿಕೊಂಡು ಬಿರಿಯಾನಿ ಹಾಕುವ ಭಾರತವೂ ಅಲ್ಲ. ನಿಮ್ಮ ಮೇಲಿನ ಕೇಸ್‍ಗಳನ್ನ ಹಿಂಪಡೆದು ಮೆರೆಯಲು ಅವಕಾಶ ನೀಡುವ ಸರ್ಕಾರವೂ ಈಗಿಲ್ಲ. ಈಗ ಇರುವ ಸರ್ಕಾರ ಬಾಲ ಉದ್ದ ಮಾಡಿದರೆ ಕಟ್ ಮಾಡುವುದು ಹೇಗೆಂದು ಗೊತ್ತಿರುವ ಸರ್ಕಾರ ಎಂದು ಎಚ್ಚರಿಕೆ ನೀಡಿದ್ದಾರೆ. ಬಾಂಬ್ ಹಾಕುವವರ ತಲೆ ಮೇಲೆಯೇ ಬಾಂಬ್ ಹಾಕಲು ತಾಕತ್ತಿರುವ ಸರ್ಕಾರ. ಭಯೋತ್ಪಾದನೆ ಮಾಡುವವರಿಗೆ ಸರ್ಜಿಕಲ್ ಸ್ಟ್ರೈಕ್ ಮಾಡಿ ತಲೆ ಎತ್ತದಂತೆ ಮಾಡುವ ತಾಕತ್ತಿನ ಸರ್ಕಾರ ಎಂದು ತಿರುಗೇಟು ನೀಡಿದ್ದಾರೆ.

PFI AND SDPI

ನಿಮ್ಮ ಎಸ್‍ಡಿಪಿಐ ಹುಟ್ಟಿದ್ದೇ ಕೇರಳ (Kerala) ದಲ್ಲಿ. ಅಲ್ಲಿಯೇ ಮೀಸಲಾತಿ ಇಲ್ಲ. ಕೋಮು ಆಧಾರಿತ, ಮತ ಆಧಾರಿತ ಮೀಸಲಾತಿ ಕೇರಳದಲ್ಲೇ ಇಲ್ಲ, ಆಂಧ್ರದಲ್ಲಿ ಕೊಟ್ಟಿದ್ದರು. ಆದರೆ ಸಂವಿಧಾನ ಬಾಹಿರ ಎಂದು 7 ಜನರ ಲಾರ್ಜರ್ ಬೆಂಚ್ ಕ್ಯಾನ್ಸಲ್ ಮಾಡಿತ್ತು. ಕರ್ನಾಟಕದಲ್ಲಿ ಸಂವಿಧಾನ ಬಾಹಿರ ಮೀಸಲಾತಿ ಯಾರಿಗೂ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಸಂವಿಧಾನ ಬಾಹಿರವಾಗಿರುವುದಕ್ಕೆ ಸಮರ್ಥನೆಗೆ ಯಾರು ನಿಲ್ಲುತ್ತಾರೋ ಅವರು ನಿಲ್ಲಲಿ, ಧಮ್ಕಿ ಹಾಕುವ ತಾಲಿಬಾನ್ ಮಾದರಿ ಇಲ್ಲಿ ನಡೆಯಲ್ಲ. ಆ ಸರ್ಕಾರ ಈಗಿಲ್ಲ. ತಾಲಿಬಾನ್ ಆಡಳಿತವಿರುವ ರಾಜ್ಯ ಎಂದು ಭಾವಿಸಿದ್ರೆ ಇದು ತಾಲಿಬಾನ್ ಆಡಳಿತದ ರಾಜ್ಯ ಅಲ್ಲ ಎಂದು ಎಚ್ಚರಿಕೆ ನೀಡಿದರು.

Share This Article