ಚಿಕ್ಕಬಳ್ಳಾಪುರ: ಮುಸ್ಲಿಮರಿಗೆ (Muslims) ತೊಂದರೆ ಕೊಡುವ ಉದ್ದೇಶದಿಂದ ಮೀಸಲಾತಿಯಲ್ಲಿ ಬಹುದೊಡ್ಡ ಅನ್ಯಾಯ, ದ್ರೋಹ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಕಿಡಿ ಕಾರಿದರು.
ಗೌರಿಬಿದನೂರು ನಗರದ ಹೊರವಲಯದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮುಸ್ಲಿಮರಿಗೆ ಪ್ರತ್ಯೇಕ ಮೀಸಲಾತಿ ರದ್ದುಮಾಡಿರುವ ಕುರಿತು ಮಾತನಾಡಿದ ಅವರು, ಇದು ಅಲ್ಪಸಂಖ್ಯಾತರಿಗೆ ಮಾಡಿರುವ ಬಹುದೊಡ್ಡ ಅನ್ಯಾಯ, ದ್ರೋಹ. ಮುಸ್ಲಿಂ ಮೀಸಲಾತಿ (Muslims Reservation) ತೆಗೆದು ಹಾಕಿ ಅಂತಾ ಯಾರಾದ್ರೂ ಅರ್ಜಿ ಕೊಟ್ಟಿದ್ದಾರಾ? ನ್ಯಾಯಾಲಯ ಆದೇಶ ಮಾಡಿದೆಯಾ? ಯಾರಾದ್ರೂ ಮನವಿ ಮಾಡಿದ್ದಾರಾ? ಮುಸ್ಲಿಮರಿಗೆ ತೊಂದರೆ ಕೊಡುವ ಉದ್ದೇಶದಿಂದ ಮಾಡಿರುವ ದ್ರೋಹ ಇದು. ಅಲ್ಪಸಂಖ್ಯಾತರನ್ನ ರಕ್ಷಣೆ ಮಾಡೋದು ನಾವೇ. ಅವರು ನಮಗೆ ವೋಟು ಹಾಕ್ತಾರೆ ಅದು ಬೇರೆ ಪ್ರಶ್ನೆ, ಆದರೆ ಶೇ.4 ಮೀಸಲಾತಿ ತೆಗೆದಿದ್ದು ಯಾಕೆ? ಇವರದ್ದು ತೆಗೆದು ಅವರಿಗೆ ಕೊಡಿ ಅಂತಾ ಕೇಳಿದ್ರಾ? ಎಂದು ಪ್ರಶ್ನಿಸಿದರು.
ಇದೇ ವೇಳೆ ರಾಹುಲ್ ಗಾಂಧಿ (Rahul Gandhi) ಸಂಸದ ಸ್ಥಾನದಿಂದ ಅನರ್ಹಗೊಳಿಸಿದ ವಿಚಾರಕ್ಕೆ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು. ಬಿಜೆಪಿಯವರು ರಾಹುಲ್ ಗಾಂಧಿಗೆ ಹೆದರಿ ಸಂಸದ ಸ್ಥಾನದಿಂದ ತೆಗೆದು ಹಾಕಿಸಿದ್ದಾರೆ. ಭಾರತ್ ಜೋಡೋ ಯಾತ್ರೆ (Bharat Jodo Yatra) ನಂತರ ರಾಹುಲ್ ಗಾಂಧಿ ವರ್ಚಸ್ಸು ಜಾಸ್ತಿಯಾಗಿತ್ತು. ಹಾಗಾಗಿ ಅವರಿದ್ರೇ ತಾನೆ ಟೀಕೆ ಮಾಡೋದು ಅಂತಾ ರಾಹುಲ್ ಗಾಂಧಿ ಸದಸ್ಯತ್ವ ರದ್ದುಮಾಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಮಾಜಿ ಸಚಿವ ಸಿಪಿವೈಗೆ ಕಾಂಗ್ರೆಸ್ ಟಿಕೆಟ್?- ಚನ್ನಪಟ್ಟಣ ಪೆಂಡಿಂಗ್ ಇಟ್ಟು ಡಿಕೆಶಿ ತಂತ್ರ
ಇದು ರಾಜಕೀಯ ದುರುದ್ದೇಶದಿಂದ ಮಾಡಿರುವ ಕುತಂತ್ರ. ದೇಶದಲ್ಲಿ ಮಲ್ಯ-ಮೋದಿ ದೇಶದ ದುಡ್ಡು ಕೊಳ್ಳೆ ಹೊಡ್ಕೊಂಡು ಹೋದ್ರು. ಅವರನ್ನ ಕಳ್ಳರು ಅನ್ನೋದು ತಪ್ಪಾ? ಅದಕ್ಕಾಗಿ ಸದಸ್ಯ ಸ್ಥಾನದಿಂದ ತೆಗೆದು ಹಾಕಿರೋದು ಸರಿನಾ? ಹೀಗೆ ತಮ್ಮ ವಿರುದ್ಧ ಟೀಕೆ ಮಾಡೋರನ್ನ ಮುಗಿಸೋ ಕೆಲಸ ಬಿಜೆಪಿಯವರು ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಹೃದಯಾಘಾತದಿಂದ `ಪಯಣ’ ಖ್ಯಾತಿಯ ನಿರ್ದೇಶಕ ಕಿರಣ್ ಗೋವಿ ನಿಧನ
ರಾಹುಲ್ ಮಾಡಬಾರದನ್ನ ಮಾಡಿದ್ದಾರಾ?
ಬಿಜೆಪಿಯವರಿಗೆ ಆಡಳಿತ ಮಾಡಿ ಗೊತ್ತಿಲ್ಲ ಲೂಟಿ ಮಾಡೋದು ಮಾತ್ರ ಗೊತ್ತಿದೆ. ಮಾತಾಡೋರ ಮೇಲೆ ಕೇಸ್ ಹಾಕಿ ಹಾಳುಮಾಡೋದು ಇವರ ಕೆಲಸ. ರಾಹುಲ್ ಗಾಂಧಿ ಕುಟುಂಬ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಕುಟುಂಬ. ಬಿಜೆಪಿಯವರು ಸ್ವಾತಂತ್ರ್ಯ ಹೋರಾಟಗಾರರಾ? ರಾಹುಲ್ ಗಾಂಧಿ ಏನ್ ಮಾಡಬಾರದನ್ನ ಮಾಡಿದ್ದಾರಾ? ಆಡಬಾರದ್ದನ್ನ ಆಡಿದ್ದಾರಾ? ಇದ್ದುದ್ದನ್ನು ಇದ್ದಹಾಗೆ ಹೇಳಿದ್ದಾರೆ, ಅದಕ್ಕೆ ಸದಸ್ಯತ್ವ ರದ್ದು ಮಾಡೋದಾ ಎಂದು ಪ್ರಶ್ನಿಸಿದ್ದಾರೆ.