PSI ಅಕ್ರಮ ನೇಮಕಾತಿ ಪ್ರಕರಣ- ವಿಚಾರಣೆ ಎದುರಿಸಿದ್ದ ಮಧ್ಯವರ್ತಿ ಗಣಪತಿ ಭಟ್ ಶವವಾಗಿ ಪತ್ತೆ

Public TV
1 Min Read
KARWAR GANAPATHI BHAT

ಕಾರವಾರ: ಪಿಎಸ್‍ಐ (PSI) ಅಕ್ರಮ ನೇಮಕಾತಿ ಪ್ರಕರಣದಲ್ಲಿ ವಿಚಾರಣೆಗೊಳಪಟ್ಟಿದ್ದ ಸಿದ್ದಾಪುರ ತಾಲೂಕಿನ ನೆಲೆಮಾವು ಗ್ರಾಮದ ಗಣಪತಿ ಭಟ್ (Ganapathi Bhat) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಇತ್ತೀಚೆಗೆ ರಾಜ್ಯಾದ್ಯಂತ ಸದ್ದು ಮಾಡಿದ್ದ ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಿ ಭಾಗಿಯಾಗಿದ್ದರು ಎಂಬ ಆರೋಪದಡಿ ಬಂಧಿತರಾಗಿದ್ದ ಗಣಪತಿ ಭಟ್ ತನಿಖೆ ಎದುರಿಸಿದ್ದರು. ವಿಚಾರಣೆ ಬಳಿಕ ಸಿದ್ದಾಪುರಕ್ಕೆ ಆಗಮಿಸಿದ್ದ ಗಣಪತಿ ಭಟ್ ಮೃತದೇಹ ಅವರ ಸ್ವಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸಿಕ್ಕಿದೆ.

SIDDAPURA POLICE STATION

ಸಿದ್ದಾಪುರ ತಾಲೂಕಿನ ನೆಲಮಾವಿನ ಗಣಪತಿ ಭಟ್ ನೆಲಮಾವು ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದರು. ಹಲವು ರಾಜಕಾರಣಿಗಳ ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದ ಇವರು ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಹಲವು ವಿಷಯಗಳಲ್ಲಿ ಬ್ರೋಕರಿಂಗ್ ಕೆಲಸ ಮಾಡುತ್ತಿದ್ದರು.

ಗಣಪತಿ ಭಟ್ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದು, ಕಾರಣ ತಿಳಿದುಬಂದಿಲ್ಲ. ಶವವನ್ನು ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಸಿದ್ದಾಪುರ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಒಳಮೀಸಲಾತಿ ಹಂಚಿಕೆ; ಪ್ರತ್ಯೇಕ ಮೀಸಲಾತಿ ರದ್ದು – EWS ಕೋಟಾ ವ್ಯಾಪ್ತಿಗೆ ಮುಸ್ಲಿಮರು

Share This Article
Leave a Comment

Leave a Reply

Your email address will not be published. Required fields are marked *