ಡಾರ್ಲಿಂಗ್ ಕೃಷ್ಣ (Darling Krishna) ಹಾಗೂ ಶಶಾಂಕ್ (Shashank) ಕಾಂಬಿನೇಷನ್ ನ ಹೊಸ ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಿದೆ. ಯುಗಾದಿ ದಿನದಂದು ತಮ್ಮ ಸಿನಿಮಾದ ನಾಯಕಿಯ ಪೋಸ್ಟರ್ ಹಂಚಿಕೊಂಡಿದ್ದಾರೆ ಶಶಾಂಕ್. ‘ಕೌಸಲ್ಯ ಸುಪ್ರಜಾ ರಾಮ’ (Kausalya Supraja Rama) ಹೆಸರಿನಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾಗೆ ಬೃಂದಾ ಆಚಾರ್ಯ (Brinda Acharya) ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಪ್ರೇಮಂ ಪೂಜ್ಯಂ ಸಿನಿಮಾದ ಮೂಲಕ ಕನ್ನಡದ ಸಿನಿಮಾ ರಸಿಕರಿಗೆ ಪರಿಚಯವಾಗಿದ್ದ ಬೃಂದಾ, ಆನಂತರ ಕೆಲ ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. ಇದೀಗ ಡಾರ್ಲಿಂಗ್ ಕೃಷ್ಣ ಜೊತೆ ತೆರೆ ಹಂಚಿಕೊಳ್ಳಲು ರೆಡಿಯಾಗಿದ್ದಾರೆ. ಈಗಾಗಲೇ ಸಿನಿಮಾದ ಶೂಟಿಂಗ್ ಶುರುವಾಗಿದ್ದು, ಚಿತ್ರೀಕರಣದಲ್ಲೂ ಅವರು ಭಾಗಿಯಾಗಿದ್ದಾರೆ. ಇದನ್ನೂ ಓದಿ:`ಸಾಮಿ ಸಾಮಿ’ ಹಾಡಿಗೆ ಸ್ಟೆಪ್ ಹಾಕಿ ಎಂದ ಅಭಿಮಾನಿಗೆ ನೋ ಎಂದ ರಶ್ಮಿಕಾ ಮಂದಣ್ಣ
ಕನ್ನಡದಲ್ಲಿ ಹೊಸ ಬಗೆಯ ಚಿತ್ರಗಳನ್ನು ಕೊಟ್ಟ ಹೆಗ್ಗಳಿಕೆ ಶಶಾಂಕ್ ಅವರದ್ದು. ಅವರ ಸಿನಿಮಾದಲ್ಲಿ ನಾಯಕನಷ್ಟೇ ನಾಯಕಿಗೂ ಪ್ರಾಧಾನ್ಯತೆ ನೀಡಲಾಗುತ್ತದೆ. ಅವರ ಬಹುತೇಕ ಸಿನಿಮಾಗಳಲ್ಲಿ ನಾಯಕಿಯೇ ಹೈಲೈಟ್ ಕೂಡ ಆಗಿದ್ದಾರೆ. ಹಾಗಾಗಿ ಬೃಂದಾ ಅವರಿಗೆ ವಿಶೇಷ ಪಾತ್ರ ಸಿಕ್ಕಿರಬಹುದು ಎಂದು ಅಂದಾಜಿಸಲಾಗಿದೆ.
ಇವತ್ತು ತಮ್ಮ ಸಿನಿಮಾದ ನಾಯಕಿಯ ಪೋಸ್ಟರ್ ಅನ್ನು ರಿಲೀಸ್ ಮಾಡಿರುವ ಶಶಾಂಕ್ ಅಭಿಮಾನಿಗಳಿಗೆ ಯುಗಾದಿ ಸಂದೇಶವನ್ನೂ ಹೇಳಿದ್ದಾರೆ. ಅಲ್ಲದೇ, ಒಂದು ಹಂತದ ಚಿತ್ರೀಕರಣವನ್ನೂ ಅವರು ಮುಗಿಸಿದ್ದಾರೆ. ಡಾರ್ಲಿಂಗ್ ಕೃಷ್ಣ ಮತ್ತು ಶಶಾಂಕ್ ಕಾಂಬಿನೇಷನ್ ನ ಮೊದಲ ಸಿನಿಮಾ ಇದಾಗಿದೆ.