ಬೆಂಗಳೂರು: ಬಡವರಿಗೆ ಹರಕಲು ಸೀರೆ (Saree) ಹಂಚಿದ್ದಾರೆ ಎಂದು ಕಾಂಗ್ರೆಸ್ (Congress) ನಾಯಕ ದಿನೇಶ್ ಗುಂಡೂರಾವ್ (Dinesh Gundu Rao) ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.
ಚುನಾವಣೆ ಬಂದ್ರೆ ಸಾಕು ರಾಜಕೀಯ ನಾಯಕರು ಸೀರೆ, ಕುಕ್ಕರ್, ಮೂಗುತಿ ಹೀಗೆ ನಾನಾ ತರಹದ ವಸ್ತುಗಳನ್ನು ಹಂಚುವುದು ಕಾಮನ್. ಸೀರೆ ಆಸೆಗೆ ಮಹಿಳೆಯರು ಕೂಡ ಆಸೆಪಟ್ಟು ಮುಗಿಬಿದ್ದು ಸೀರೆ ಪಡೆದುಕೊಳ್ಳುತ್ತಾರೆ. ಆದರೆ ಇದೇ ಜನರ ಆಸೆಗೆ ಕಾಂಗ್ರೆಸ್ ಹಿರಿಯ ಶಾಸಕ ದಿನೇಶ್ ಗುಂಡೂರಾವ್ ತಣ್ಣಿರೆರೆಚಿದ್ರಾ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇದನ್ನೂ ಓದಿ: ಉರಿಗೌಡ-ನಂಜೇಗೌಡ ಪ್ರಕರಣದಲ್ಲಿ ಹಿನ್ನಡೆ ಪ್ರಶ್ನೆಯೇ ಇಲ್ಲ- ಬೊಮ್ಮಾಯಿ
ಗಾಂಧಿನಗರ ಕ್ಷೇತ್ರದಲ್ಲಿ ದಿನೇಶ್ ಗುಂಡೂರಾವ್ ಹೆಸರಲ್ಲಿ ಕಾರ್ಯಕರ್ತರು ಹರಿದುಹೋಗಿರುವ ಸೀರೆಗಳನ್ನು ಹಂಚಿದ್ದಾರೆ. ಸೀರೆ ಪರೀಕ್ಷಿಸಿದ ಮಹಿಳೆಯರು ವಾಪಸ್ ನೀಡಿ ಆಕ್ರೋಶ ಹೊರಹಾಕಿದ್ದಾರೆ. ಹರಕಲು ಸೀರೆ ಕೊಟ್ರೆ ಯಾರ್ ತಾನೇ ತೆಗೆದುಕೊಳ್ಳುತ್ತಾರೆ ಶಾಸಕರೇ ಅಂತ ಜನ ಪ್ರಶ್ನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಡಿನೋಟಿಫಿಕೇಶನ್ ಕೇಸ್ – ಅಧಿಕ ರಕ್ತದೊತ್ತಡ ಕಾರಣ ನೀಡಿ ಕೋರ್ಟ್ ವಿಚಾರಣೆಗೆ ಎಚ್‌ಡಿಕೆ ಗೈರು