92ನೇ ವಯಸ್ಸಿನಲ್ಲಿ 5ನೇ ಮದುವೆ – ಇದು ಕೊನೆಯದ್ದು ಎಂದ ಮುರ್ಡೋಕ್‌

Public TV
1 Min Read
Mogul Rupert MurdochLesley Smith

ನ್ಯೂಯಾರ್ಕ್‌: ಶತಕೋಟಿ ಉದ್ಯಮಿ, ಮಾಧ್ಯಮ ದೊರೆ 92 ವರ್ಷದ ರೂಪರ್ಟ್ ಮುರ್ಡೋಕ್ (Rupert Murdoch) ಐದನೇ ಮದುವೆಯಾಗಿದ್ದಾರೆ.

ಮಾಡೆಲ್ ಮತ್ತು ನಟಿ ಜೆರ್ರಿ ಹಾಲ್ (Jerry Hall) ಅವರಿಗೆ ವಿಚ್ಛೇದನ ನೀಡಿದ 8 ತಿಂಗಳ ಬಳಿಕ 66 ವರ್ಷದ ಆನ್ ಲೆಸ್ಲಿ ಸ್ಮಿತ್ (Ann Lesley Smith)ಅವರೊಂದಿಗೆ ನಿಶ್ಚಿತಾರ್ಥ ಮಾಡಿದ್ದಾರೆ.

ನ್ಯೂಯಾರ್ಕ್ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಅವರು, ನಾನು ಪ್ರೀತಿಯಲ್ಲಿ ಬೀಳಲು ತುಂಬಾ ಹೆದರುತ್ತಿದ್ದೆ. ಆದರೆ ಇದು ನನ್ನ ಕೊನೆಯದು ಎಂದು ನನಗೆ ತಿಳಿದಿತ್ತು. ಈಗ ನಾನು ಸಂತೋಷವಾಗಿದ್ದೇನೆ ಎಂದು ತಿಳಿಸಿದ್ದಾರೆ.

ಈ ಜೋಡಿ ಬೇಸಿಗೆಯಲ್ಲಿ ಮದುವೆಯಾಗಲು ನಿರ್ಧಾರ ಮಾಡಿದೆ. ನಾವಿಬ್ಬರೂ ನಮ್ಮ ಜೀವನದ ದ್ವಿತೀಯಾರ್ಧವನ್ನು ಒಟ್ಟಿಗೆ ಕಳೆಯಲು ಎದುರು ನೋಡುತ್ತಿದ್ದೇವೆ ಎಂದು ಮುರ್ಡೋಕ್ ಹೇಳಿದ್ದಾರೆ.

Jerry Hall Rupert Murdoch

ಫಾಕ್ಸ್ ನ್ಯೂಸ್ ಮತ್ತು ಯುನೈಟೆಡ್ ಕಿಂಗ್‌ಡಮ್‌ನ ಟ್ಯಾಬ್ಲಾಯ್ಡ್ ಪತ್ರಿಕೆ ದಿ ಸನ್ ಮಾಲೀಕರಾಗಿರುವ ಮುರ್ಡೋಕ್‌ ಮೊದಲ ಮೂರು ಪತ್ನಿಯರಿಂದ 6 ಮಕ್ಕಳನ್ನು ಪಡೆದಿದ್ದಾರೆ. ಇದನ್ನೂ ಓದಿ: ಫಾಕ್ಸ್‌ಕಾನ್ ಸೇರಿದಂತೆ 18 ಹೂಡಿಕೆ ಪ್ರಸ್ತಾವನೆಗಳಿಗೆ ಎಸ್‌ಹೆಚ್ಎಲ್‌ಸಿಸಿ ಸಭೆಯಲ್ಲಿ ಅನುಮೋದನೆ

14 ವರ್ಷದ ಹಿಂದೆ ಸ್ಮಿತ್‌ ವಿಧವೆಯಾಗಿದ್ದು, ಕಳೆದ ಸೆಪ್ಟೆಂಬರ್‌ನಲ್ಲಿ ಇಬ್ಬರು ಮೊದಲ ಬಾರಿಗೆ ಭೇಟಿಯಾಗಿದ್ದರು. ಈ ವೇಳೆ ಸಂಕ್ಷಿಪ್ತ ಸಂವಾದ ನಡೆಸಿದ ಎರಡು ವಾರದ ಬಳಿಕ ಮುರ್ಡೋಕ್‌ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದರು.

ಮಾಡಲ್‌ ಹಾಗೂ ನಟಿ ಜೆರ್ರಿ ಹಾಲ್‌ರನ್ನು ಮುರ್ಡೋಕ್‌ ಮದುವೆಯಾಗಿ ಆರು ವರ್ಷ ಸಂಸಾರ ನಡೆಸಿ ಕಳೆದ ವರ್ಷ ಡಿವೋರ್ಸ್‌ ನೀಡಿದ್ದರು. ಹಾಲ್‌ಗೂ ಮುನ್ನ 1999 ರಿಂದ 2013ರವರೆಗೆ ವೆಂಡಿ ಡೆಂಗ್‌, 1967 ರಿಂದ 1999ರವರೆಗೆ ಅನ್ನಾ ಮರಿಯಾ ಟ್ರೋವ್‌, 1956 ರಿಂದ 1967ರವರೆಗೆ ಪ್ಯಾಟ್ರಿಕಾ ಬೂಕರ್‌ ಜೊತೆ ಮುರ್ಡೋಕ್‌ ಜೀವನ ನಡೆಸಿದ್ದರು.

ರುಪೋರ್ಟ್‌ ಮುರ್ಡೋಕ್‌ ಫಾಕ್ಸ್‌ ಕಾರ್ಪೋರೇಷನ್‌ನ ಅಧ್ಯಕ್ಷರಾಗಿದ್ದಾರೆ. ಇದು ಫಾಕ್ಸ್‌ ಬ್ರಾಡ್‌ಕಾಸ್ಟಿಂಗ್‌, ಫಾಕ್ಸ್‌ ಸ್ಪೋರ್ಟ್ಸ್‌, ಫಾಕ್ಸ್‌ ಬ್ಯುಸಿನೆಸ್‌ ಹಾಗೂ ಫಾಕ್ಸ್‌ ನ್ಯೂಸ್‌ನ ಮಾಲೀಕತ್ವವನ್ನು ಹೊಂದಿದೆ.

Share This Article
Leave a Comment

Leave a Reply

Your email address will not be published. Required fields are marked *